ಉಳ್ಳಾಲ ತಾಲೂಕು ತುಳುವ ಮಹಾಸಭಾ: ಅ.6ರಂದು ತುಳುವೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಳ ಪ್ರಶ್ನೆ ಚಿಂತನೆ

0
124

ಕುಂದಾಪುರ: ತುಳುನಾಡಿನ ಧಾರ್ಮಿಕ – ಸಾಂಸ್ಕೃತಿಕ ವೈಭವದ ಸಂಕೇತವಾಗಿರುವ ತುಳುವೇಶ್ವರ ದೇವಸ್ಥಾನ, ಬಸ್ರೂರು ಕ್ಷೇತ್ರದಲ್ಲಿ, ಭಕ್ತ ಸಮುದಾಯದ ಆಶಯದಂತೆ ಅಕ್ಟೋಬರ್ 6ರಿಂದ 11ರವರೆಗೆ ಅಷ್ಟಮಂಗಳ ಪ್ರಶ್ನೆ ಚಿಂತನೆ ನಡೆಯಲಿದೆ.

ಈ ಸಂದರ್ಭದಲ್ಲಿ ದೇವಸ್ಥಾನದ ಧಾರ್ಮಿಕ ಪುನರುಜ್ಜೀವನ, ಸಾಂಸ್ಕೃತಿಕ ಮೌಲ್ಯಗಳ ಬಲವರ್ಧನೆ ಮತ್ತು ಭವ್ಯ ಜೀರ್ಣೋದ್ಧಾರ ಕಾರ್ಯಗಳನ್ನು ಕೈಗೊಳ್ಳುವ ಕಾರ್ಯಯೋಜನೆ ರೂಪಿಸಲಾಗಿದೆ.

ಈ ಮಹತ್ವದ ಕಾರ್ಯದಲ್ಲಿ ನಿಮ್ಮ ಮೌಲ್ಯಮಯ ಸಾನಿಧ್ಯ ಸಹಕಾರ ಮತ್ತು ಆಶೀರ್ವಾದ ಅಗತ್ಯವಾಗಿದೆ. ನಿಮ್ಮ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದ ಈ ಕಾರ್ಯ ಯಶಸ್ವಿಯಾಗಿ ಮುಂದುವರಿಯಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ನಮ್ಮದಾಗಿದೆ ಎಂದು ಉಳ್ಳಾಲ ತಾಲೂಕು ತುಳುವ ಮಹಾಸಭಾ ಸಂಚಾಲಕರಾದ ಪವನ್ ರಾಜ್ ಕೊಲ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here