ಬಾಯಾರು : ಕರಾವಳಿ ಕರ್ನಾಟಕದ ಯುವ ಪ್ರತಿಭೆಗಳು ಸೇರಿ ನಿರ್ಮಿಸಿದ ಕಿರುಚಿತ್ರ ಅಲ್ಟಿಮೆಟ್ ರೀಲ್ಸ್ ಕಿರುಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮವಾದ ಪ್ರಶಂಸೆ ದೊರಕಿದೆ. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವಂತಹ, ಆಗು ಹೋಗುಗಳ ವಿಷಯವನ್ನಾಧರಿಸಿದ ಕಿರುಜಿತ್ರ ಇದಾಗಿದ್ದು , ಅಭಿನಯಿಸಿದ ಎಲ್ಲಾ ಕಲಾವಿದರಿಗೂ, ತಂತ್ರಜ್ಞರಿಗೂ, ಪ್ರೇಕ್ಷಕರಿಂದ ಉತ್ತಮವಾದ ಅಭಿಪ್ರಾಯವಿದೆ.
ಬೆಳಗಾವಿ ಜಿಲ್ಲೆಯ ಮಾಡಲಗಿ ತಾಲೂಕಿನ ಯುವ ಪ್ರತಿಭೆಗಳ ಅಭಿಮಾನಿ ಸಂಘವೊಂದು ಈ ಕಿರುಚಿತ್ರವನ್ನ ಅಭಿಮಾನದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಕಿರುಚಿತ್ರದ ಬೆಳವಣಿಗೆಗೆ ಸಾಕ್ಷಿಯಾಗಿದೆ.
ತಾಂತ್ರಿಕ ವರ್ಗದಲ್ಲಿ ಕಥೆ ತುಕಾರಾಮ ಬಾಯಾರು, ಕ್ಯಾಮರಾ ನಾಗೇಶ್ ಆಚಾರ್ಯ ಮೂಡುಬೆಳ್ಳೆ, ನಿರ್ಮಾಣ ಶಶಿಕಾಂತ.ವಿ.ಆಚಾರ್ಯ ಎಡ್ಮೇರು.ತಾರಾಗಣದಲ್ಲಿ ಶಶಿಕಾಂತ್.ವಿ. ಆಚಾರ್ಯ, ತುಕಾರಾಂ ಬಾಯಾರು, ಶ್ರೀನಿಧಿ ಹೆಗಡೆ ಉಡುಪಿ, ಪ್ರಭಾಕರ್ ಆಚಾರ್ಯ, ಜಗದೀಶ್, ರಕ್ಷಿತ್ ವಂಡ್ಸೆ ಅಭಿನಯಿಸಿದ್ದಾರೆ.

