ಬಸವಣ್ಣನ ಬಾಗೇವಾಡಿ ಯಲ್ಲಿ ಉಮೇಶ ಮುಂಡಳ್ಳಿ ಅವರಿಗೆ ಆರೂಢ ಶ್ರೀ ಪ್ರಧಾನ

0
17

ಭಟ್ಕಳ- ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಆರೂಢ ಸೇವಾ ಸಂಸ್ಥೆ ಆಯೋಜಿಸಿದ ಗುರು ಆರೂಢ ಶ್ರಿಗಳ ಪುಣ್ಯ ಸ್ಮರಣೋತ್ವದಲ್ಲಿ ಜಿಲ್ಲೆಯ ಸುಗಮಸಂಗೀತ ಗಾಯಕ ಸಾಹಿತಿ ಉಮೇಶ ಮುಂಡಳ್ಳಿ ಅವರಿಗೆ ರಾಜ್ಯಮಟ್ಟದ ಆರೂಢ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಪಟ್ಟಣದ ಶ್ರೀ ಕಾಳಿಕಾದೇವಿ ಕಲ್ಯಾಣ ಮಂಟಪದಲ್ಲಿ ಪೆಬ್ರವರಿ 22 ರವಿವಾರದಂದು ನಡೆದ ಕಾರ್ಯಕ್ರಮ ದಲ್ಲಿ ಕಡಕೋಳದ ರಾಜಗುರು ಮಹಾಲಿಂಗ ಸ್ವಾಮಿಜಿಗಳು ಉಮೇಶ ಮುಂಡಳ್ಳಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಹರಸಿದರು.

ವೇದಿಕೆಯಲ್ಲಿ ಅರಟಾಳದ ಶಿವಪುತ್ರ ಶರಣರು ಸಾನಿಧ್ಯವಹಿಸಿದ್ದರು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕ ಪಿ.ಎಲ್.ಹಿರೆಮಠ ಅವರು ಆರೂಢ ಕುರಿತು ನುಡಿನಮನ ಸಲ್ಲಿಸಿದರು. ಕಾರ್ಯಕ್ರಮ ವನ್ನು ಕದಳಿ ವೇದಿಕೆಯ ಅಧ್ಯಕ್ಷೆ ಪ್ರಾಧ್ಯಾಪಕಿ ಡಾ.ಉಷಾದೇವಿ ಕಾರ್ಯಕ್ರಮ ಉದ್ಘಾಟಿಸಿ ಆರೂಢ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ವಿಜಯಪುರದ ಶ್ರೀ ಶೈಲ ಆರೂಢರು ವಹಿಸಿದ್ದರು. ರಾಜ್ಯದ ಹನ್ನೊಂದು ಮಂದಿ ಸಾಧಕರಿಗೆ ಈ ಸಂಧರ್ಭದಲ್ಲಿ ಆರೂಢ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ವೇದಿಕೆಯಲ್ಲಿ ಆರೂಢ ಸಂಸ್ಥೆಯ ಅಧ್ಯಕ್ಷರು ನ್ಯಾಯವಾದಿ ಗುರುರಾಜ ಕನ್ನೂರು ಇದ್ದರು. ಈ ಸಂಧರ್ಭದಲ್ಲಿ ಬಾಗೇವಾಡಿ ಯ ಸಾಮಾಜಿಕ ಪರಿಶೋಧನ ಕಾರ್ಯಕ್ರಮ ವ್ಯವಸ್ಥಾಪಕ ಬಸವರಾಜ ಮಾದನಶೆಟ್ಟಿ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here