ಶ್ರೀಯುತ ಉಮೇಶ ರಾವ್ ಕುಂಬ್ಳೆ , ಮಂಗಳೂರಿನ ಅತ್ತಾವರ ನಿವಾಸಿಯಾಗಿದ್ದು , ಕಾಲೇಜು ಹೋಗುವ ಸಂದರ್ಭದಲ್ಲೇ , ತನ್ನನ್ನು ತಾನು ಸಮಾಜ , ಧಾರ್ಮಿಕ ಮತ್ತು ಕನ್ನಡ ಪರ ಸೇವೆಯಲ್ಲಿ ತೊಡಗಿಸಿಕೊಂಡು ಪ್ರಥಮ ವಾಗಿ , ಕುಂಬಳೆ ಮಲ್ಲಿಕಾ ಸಂಸ್ಥೆಯಲ್ಲಿ ಸ್ಥಾಪಕ ಸದಸ್ಯರಾಗಿ ಉಪಾಧ್ಯಕ್ಷ ರಾಗಿ , ಸೇವೆ ಸಲ್ಲಿಸಿದ್ದು, ಶ್ರೀ ಮಲ್ಲಿಕಾರ್ಜುನ ಮತ್ತು ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾಗಿ ದೇವರ ಸೇವೆ ಸಲ್ಲಿಸಿ, ಕೋಲಾರದಲ್ಲಿ ಕನ್ನಡ ಪರ ಕರಾವಳಿ ಮಿತ್ರ ಸಂಘವನ್ನು ಹುಟ್ಟು ಹಾಕಿ ಸ್ಥಾಪಕ , ಪ್ರಧಾನ ಕಾರ್ಯದರ್ಶಿಯಾಗಿ ನಿರಂತರ 5 ವರ್ಷ ತಮ್ಮ ಸೇವೆಯನ್ನು ಸಲ್ಲಿಸಿ, ಮಂಗಳೂರಿನ ರಾಮ ಕ್ಷತ್ರಿಯ ಸೇವಾ ಸಂಘದಲ್ಲಿ, ಪ್ರಧಾನ ಕಾರ್ಯದರ್ಶಿಯಾಗಿ ಉಪಾಧ್ಯಕ್ಷರಾಗಿ ಕೂಡ ತನ್ನನ್ನು ತಾನು ತೊಡಗಿಸಿಕೊಂಡಿದ್ದರು , ಮಾತ್ರವಲ್ಲದೆ , ಅತ್ತಾವರದ ವೈದ್ಯನಾಥ ನಗರ ನಿವಾಸಿ ಸಂಘದ ಅಧ್ಯಕ್ಷರಾಗಿ ಮುಂದುವರೆದು, ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದಕ್ಷರಾಗಿ ತಮ್ಮ ಕನ್ನಡ ಸೇವೆಯನ್ನು ಮಾಡುತ್ತಿದ್ದಾರೆ, ಅವರ ಈ ಎಲ್ಲಾ ಸೇವೆಯನ್ನು ಪರಿಗಣಿಸಿ ಇಂದು, ಉಮೇಶರಾವ್ ಕುಂಬ್ಳೆ ಯವರಿಗೆ ಶ್ರೀ ಭಿಕ್ಷು, ಡಾಕ್ಟರ್ ಲಕ್ಷ್ಮಣನನಂದ ಸದ್ಭಾವನಾ ಪ್ರಶಸ್ತಿ ನೀಡಲಾಗುತ್ತಿದೆ, ಅಭಿನಂದನೆಗಳು.
Home Uncategorized ಉಮೇಶ್ ರಾವ್ ಕುಂಬ್ಳೆ ರವರಿಗೆ ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮೀಜಿ “ಸದ್ಭಾವನಾ ರಾಷ್ಟ್ರೀಯ...

