ಅಜೆಕಾರು ಮದ್ರಸ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಹಾಗೂ ಸನ್ಮಾನ

0
71

ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕ ಹಾಗೂ ಟೀಮ್ ಮಲೆನಾಡು ಹ್ಯೂಮಿನಿಟರಿಯನ್ ಟ್ರಸ್ಟ್ ಬೆಳ್ವೆ ಇದರ ಜಂಟಿ ಆಶ್ರಯದಲ್ಲಿ ಅಜೆಕಾರು ನೂರಾನಿ ಮಸೀದಿಯ ಮದ್ರಸ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಹಾಗೂ ಮನವಿಯ ಸೇವಾ ನೀರತರಿಗೆ ಸನ್ಮಾನ ಕಾರ್ಯಕ್ರಮ ಅಜೆಕಾರು ಮಸೀದಿ ಆವರಣದಲ್ಲಿ ಒಟ್ಟಿಗೆ ನಡೆಯಿತು. ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ ಇದರ ಹೆಬ್ರಿ ಘಟಕ ಅಧ್ಯಕ್ಷ ಅನ್ಸಾರ್ ಹೊಸಂಗಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಮ್ಮ ನಾಡ ಒಕ್ಕೂಟ ಟೀಮ್ ಮಲೆನಾಡು ಹ್ಯೂಮಿನಿಟರಿಯನ್ ಟ್ರಸ್ಟ್ ಬೆಳ್ವೆ ಇದರ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ , ಉಡುಪಿ ಜಿಲ್ಲಾ ಅಧ್ಯಕ್ಷ ನಕ್ವ ಯಾಹ್ಯ ಮಲ್ಪೆ , ಉಪಾಧ್ಯಕ್ಷ ಮುನಾವರ್ ಅಜೆಕಾರು, ನಮ್ಮ ನಾಡ ಒಕ್ಕೂಟ ಹೆಬ್ರಿ ಉಪಾಧ್ಯಕ್ಷ ಶರೀಫ್ ಸಾಹೇಬ್ ಬೆಳ್ವೆ , ಅಜೆಕಾರು ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಗಫೂರ್, ವಕೀಲ ಶರೀಫ್ ಅಜೆಕಾರು, ನೂರಾನಿ ಮಸೀದಿ ಅಧ್ಯಕ್ಷ ಆಸೀಫ್ ಅಜೆಕಾರು, ಟೀಮ್ ಮಲೆನಾಡು ಹ್ಯೂಮಿನಿಟರಿಯನ್ ಟ್ರಸ್ಟ್ ಬೆಳ್ವೆ ಟ್ರಸ್ಟಿ ನಝೀರ್ ಶಾ , ನೂರಾನಿ ಮಸೀದಿ ಅಧ್ಯಕ್ಷ ಆಸೀಫ್ ಅಜೆಕಾರು ಉಪಾಧ್ಯಕ್ಷ ರಿಯಾಜ್ ,ಕೋಶಾಧಿಕಾರಿ ನವಾಬ್ ಸಾಹೇಬ್ ,ಉಪಸ್ತಿರಿದ್ದರು, ಎನ್.ಎಸ್ ಅಕಾಡೆಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ಫರ್ಮನ್ ಹಾಗೂ ಮಾನವೀಯ ಸೇವೆ ಸಲಿಸುತ್ತಿವಿರುವ ಶೇಖ್ ಅಸ್ಲಾಂ ಹಾಗೂ ಅಬ್ಡುಲ್ ರಶೀದ್ ರವರನ್ನು ಸನ್ಮಾನಿಸಲಾಯಿತು. ಮಸೀದಿಯ ಖತೀಬ್ ಮೌಲಾನಾ ಮೊಹಮ್ಮದ್ ಅಫಾಕ್ ಕಿರಾತ್ ಪಠಿಸಿ ದುವಾ ನೆರವೇರಿಸಿದರು.ಫರ್ಮನ್ ಸ್ವಾಗತಿಸಿದರು. ಟೀಮ್ ಮಲೆನಾಡು ಹ್ಯೂಮಿನಿಟರಿಯನ್ ಟ್ರಸ್ಟ್ ಬೆಳ್ವೆ ಮೊಹಮ್ಮದ್ ರಫೀಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here