ಕಾಂತೇಶ್ವರ ಪ್ರೌಢಶಾಲೆ ಕಾಂತಾವರ ಕಾರ್ಕಳ ಇಲ್ಲಿಗೆ ಉನ್ನತಿ ಚಾರಿಟೇಬಲ್ ಟ್ರಸ್ಟ್ ಕಾರ್ಕಳ ಇವರು ವಿದ್ಯಾಸಂಸ್ಥೆಗೆ ಅಗತ್ಯವೆನಿಸಿದ ಇನ್ವಾರ್ಟರ್ ಉದಾರವಾಗಿ ನೀಡಿ ಸಹಕರಿಸಿದರು.
ಈ ಹಸ್ತಾಂತರ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಸದಸ್ಯರಾದ ಧರ್ಮರಾಜ ಕಂಬಳಿಯವರು ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ರಂಜಿತ್ ಶೆಟ್ಟಿ , ಉನ್ನತಿ ಟ್ರಸ್ಟ್ ನ ಪದಾಧಿಕಾರಿಗಳಾದ ವಿಶ್ವಾಸ್, ಗಿರೀಶ್, ಕವನ್, ಸುದೀಶ್, ಸುಜಿತ್ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ ಸ್ವಾಗತಿಸಿ ಶಿಕ್ಷಕಿ ರೇಖಾ ರವರು ನಿರೂಪಿಸಿ ಶಿಕ್ಷಕ ಪ್ರಕಾಶ್ ಎ. ಕೋಟ್ಯಾನ್ ಧನ್ಯವಾದವಿತ್ತರು.

