ಸರಳ, ಸುರಕ್ಷಿತ ಪಾವತಿಗೆ ಯುಪಿಐ ಸರ್ಕಲ್

0
10

ಮಂಗಳೂರು : ಡಿಜಿಟಲ್ ಪಾವತಿಗಳನ್ನು ಮತ್ತಷ್ಟು ಸುರಕ್ಷಿತ ಮತ್ತು ಸರಳಗೊಳಿಸಲು ಭೀಮ್ ಪೇಮೆಂಟ್ ಆ್ಯಪ್, ಯುಪಿಐ ಸರ್ಕಲ್ ಎಂಬ ವೈಶಿಷ್ಟ್ಯವನ್ನು ಪರಿಚಯಿಸಿದೆ. ಹೆಚ್ಚು ನಿಖರವಾಗಿ ರೂಪುಗೊಳಿಸಿರುವ ಈ ವೈಶಿಷ್ಟ್ಯ ಬಳಕೆದಾರರು ತಮ್ಮ ವಿಶ್ವಾಸಾರ್ಹ ಜನರಿಗೆ ನಿಯಂತ್ರಿತ ಪಾವತಿಗೆ ಸರಳ ಲಭ್ಯವಾಗುವಂತೆ ಮಾಡಲು ನೆರವಾಗುತ್ತದೆ.

ಸ್ಪಷ್ಟ ಮಿತಿ, ಸಂಪೂರ್ಣ ದೃಶ್ಯಮಾನತೆಯೊಂದಿಗೆ ಮತ್ತು ಭದ್ರತೆ ಹಾಗೂ ಹೊಣೆಗಾರಿಕೆಯ ಸುಲಲಿತ ಸೌಲಭ್ಯವನ್ನು ಒದಗಿಸುತ್ತದೆ ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‍ಪಿಸಿಐ) ಪ್ರಕಟಣೆ ಹೇಳಿದೆ.

ಮುಖ್ಯ ಬಳಕೆದಾರ ನಿರ್ಧರಿತ ಮಿತಿಗಳ ಒಳಗೆ, ಸಂಪೂರ್ಣ ದೃಶ್ಯಮಾನತೆಯೊಂದಿಗೆ, ತನ್ನ ಬ್ಯಾಂಕ್ ಖಾತೆಯಿಂದ ಯುಪಿಐ ಪಾವತಿಗಳಿಗಾಗಿ ದ್ವಿತೀಯ ಬಳಕೆದಾರನಿಗೆ ಅನುಮತಿ ನೀಡಬಹುದು. ಈ ಮೂಲಕ, ಯುಪಿಐ ಪಿನ್, ಪಾಸ್‍ವರ್ಡ್ ಅಥವಾ ಸಾಧನ ಪ್ರವೇಶ ಹಂಚಿಕೊಳ್ಳುವ ಅಪಾಯಕರ ಅಭ್ಯಾಸವಿಲ್ಲದೆ, ಡಿಜಿಟಲ್ ಪಾವತಿಗಳನ್ನು ಹೆಚ್ಚು ವಾಸ್ತವಿಕವಾಗಿಸುತ್ತದೆ ಎಂದು ವಿವರಿಸಿದೆ.

ಮುಖ್ಯ ಬಳಕೆದಾರನು ದ್ವಿತೀಯ ಬಳಕೆದಾರನಿಗೆ ತನ್ನ ಬ್ಯಾಂಕ್ ಖಾತೆಯಿಂದ ನೇರವಾಗಿ ಯುಪಿಐ ಪಾವತಿಗಳನ್ನು ಮಾಡಲು ಅನುಮತಿಸಬಹುದು. ಮುಖ್ಯ ಬಳಕೆದಾರನು ತಿಂಗಳಿಗೆ ರೂ. 15,000 ರವರೆಗೆ ಖರ್ಚಿನ ಮಿತಿಯನ್ನು ನಿಗದಿಪಡಿಸಬಹುದು ಮತ್ತು ಅನುಮತಿಯ ಮಾನ್ಯತೆಯನ್ನು ಒಂದು ತಿಂಗಳಿಂದ ಐದು ವರ್ಷಗಳವರೆಗೆ ನಿರ್ಧರಿಸಬಹುದು.

ದ್ವಿತೀಯ ಬಳಕೆದಾರನ ಪ್ರತಿ ವಹಿವಾಟನ್ನು ಮುಖ್ಯ ಬಳಕೆದಾರ ನೋಡಲು ಅವಕಾಶವಿದ್ದು, ಸಂಪೂರ್ಣ ಪಾರದರ್ಶಕವಾಗಿರುತ್ತದೆ ಮತ್ತು ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಪಾವತಿಯ ಹಂಚಿಕೆಗೆ ಅನುವು ಮಾಡಿಕೊಡುತ್ತದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here