ಮಂಗಳೂರು: ಸೌಜನ್ಯ ಮಹಿಳಾ ಮಂಡಲ ಹೊಯ್ಗೆಬೈಲ್ ಉರ್ವ ಮಂಗಳೂರು ಇದರ ವತಿಯಿಂದ ಇತ್ತೀಚೆಗೆ ಮಂಡಲದ ಸದಸ್ಯರಿಗೆ ಹಾಗೂ ಆಸಕ್ತರಿಗೆ ಭಜನಾ ತರಬೇತಿ ಕಾರ್ಯಕ್ರಮವು ‘ವಿಶ್ವಗಿರಿ’ಯಲ್ಲಿ ನಡೆಯಿತು.
ಬಂಟ್ವಾಳ ತಾಲೂಕಿನ ‘ಮೌನ ಕೋಗಿಲೆಯ ಮುತ್ತು’ ಎಂದೇ ಪ್ರಸಿದ್ಧರಾದ ಸತೀಶ್ ಪೂಂಜ ಇವರು ತರಬೇತುದಾರರಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಇವರು ಮಾತನಾಡಿ “ಭಕ್ತಿಪ್ರಿಯನಾದ ಭಗವಂತನನ್ನು ನಾದಪ್ರಿಯನನ್ನಾಗಿಸುವ ಸಂಸ್ಕಾರಯುತ ಕಾರ್ಯದಲ್ಲಿ ತೊಡಗಿಸಿಕೊಂಡು ನಾವು ಸಾಧನೆ ಮಾಡಬೇಕು. ನಿಮ್ಮ ಸಾಧನೆಯಲ್ಲಿ ನನ್ನ ಸಂಪೂರ್ಣ ಸಹಕಾರ ಇದೆ.” ಎಂದು ನುಡಿದರು. ಈ ಸಂದರ್ಭದಲ್ಲಿ ಸತೀಶ್ ಪೂಂಜರಿಗೆ ಶಾಲು ಹೊಂದಿಸಿ ಫಲ ಪುಷ್ಪಗಳನ್ನು ನೀಡಿ ಗೌರವಿಸಲಾಯಿತು. ಅಧ್ಯಕ್ಷರಾದ ನಳಿನಿ ರೈ, ಗೌರವ ಸಲಹೆಗಾರರಾದ ರತ್ನಾವತಿ ಜೆ. ಬೈಕಾಡಿ, ಪದಾಧಿಕಾರಿಗಳು, ಮಂಡಳಿಯ ಸದಸ್ಯರು ಹಾಗೂ ಆಸಕ್ತರ ಸಮೂಹಕ್ಕೆ ಸತೀಶ್ ಪೂಂಜಾ ತರಬೇತಿ ನೀಡಿದರು.