Skdrdp ನಾರಾವಿ ವಲಯ: ಸಾವ್ಯದಲ್ಲಿ 29ನೇ ವರ್ಷದಶ್ರೀ ಕೃಷ್ಣ ಜನ್ಮಾಷ್ಟಮಿ- ಮೊಸರು ಕುಡಿಕೆ ಉತ್ಸವ

0
141

ನಾರಾವಿ : ಜನಜಾಗೃತಿ ಗ್ರಾಮ ಸಮಿತಿ ಸಾವ್ಯ ಇದರ ಮುಂದಾಳತ್ವ ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ B.C ಟ್ರಸ್ಟ್ ರಿ, ನಾರಾವಿ ವಲಯ ,ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸಾವ್ಯ ಪ್ರಗತಿ ಬಂಧು -ಜ್ಞಾನ ವಿಕಾಸ -ಸ್ವಸಹಾಯಗಳ ಒಕ್ಕೂಟ ಮತ್ತು ನವಜೀವನ ಸಮಿತಿ ಸಾವ್ಯ ಇವುಗಳ ಸಹಕಾರದಿಂದ 29ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವ ದ ಕಾರ್ಯಕ್ರಮ ಸಾವ್ಯ ಸ.ಉ.ಹಿ.ಪ್ರಾ.ಶಾಲಾ ವಠಾರದಲ್ಲಿ ನಡೆಯಿತು.
ಉದ್ಘಾಟನೆಯನ್ನು ಶೇಖರ ಪೂಜಾರಿ ಅಧ್ಯಕ್ಷರು ನವಜೀವನ ಸಮಿತಿ ಸಾವ್ಯ ಹಾಗೂ ರಮಣಿ ಹೆಗ್ಡೆ ಮಾಜಿ ಉಪಾಧ್ಯಕ್ಷರು SDMC ಸಾವ್ಯ ಇವರುಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ನಾರಾವಿ SKDRDP ವಲಯ ಮೇಲ್ವಿಚಾರಕರಾದ ವಿಶಾಲ ಕೆ ರವರು ಸಭೆಯನ್ನು ಉದ್ದೇಶಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹುಟ್ಟು ಹಾಕಿದ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಂಘದ ಸದಸ್ಯರುಗಳು ಹತ್ತು ಹಲವಾರು ಸೌಲಭ್ಯ ಮಾಹಿತಿ ಮಾರ್ಗದರ್ಶನ ಪಡೆದುಕೊಂಡು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಸಮಾಜದಲ್ಲಿ ಪರಿವರ್ತನೆಯಾಗಿರುತ್ತಾರೆ ಮತ್ತು ವಿವಿಧ ಸಂಘಟನೆಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವ ದಂತಹ ಧಾರ್ಮಿಕ ಆಚರಣೆಯಿಂದ ಗ್ರಾಮದ ಜನತೆ ಸರ್ವಧರ್ಮ ಸಮನ್ವಯತೆಯಿಂದ ಸುಖಿ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.ತಾಲೂಕು ಜನಜಾಗೃತಿ ಸಮಿತಿ ಸದಸ್ಯರು
ಶ್ರೀಯುತ ರಾಜು ಶೆಟ್ಟಿ ಇವರು ಸಭೆಯನ್ನು ಉದ್ದೇಶಿಸಿ ಸಂಘಟನೆ ಯೊಂದಿಗೆ ಪ್ರತಿ ಗ್ರಾಮಗಳಲ್ಲಿ ಧಾರ್ಮಿಕ ಆಚರಣೆಯಿಂದ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಶುಭಹಾರೈಸಿದರು.
ಶಾಲೆಯ ಒಟ್ಟು 145 ಮಕ್ಕಳಿಗೆ ಬರೆಯುವ ಪುಸ್ತಕವನ್ನು ಕೊಡುಗೆಯಾಗಿ ಒಕ್ಕೂಟದ ಅಭಿ ಸಂಘದ ವತಿಯಿಂದ ಶಾಲಾ ಅಭಿವೃದ್ಧಿ ಸಮಿತಿಗೆ ವಿತರಣೆ ಮಾಡಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ಶ್ರೀ ಕೃಷ್ಣಾ ವೇಷ ಸ್ಪರ್ಧೆ ಮಾಡಿ ಶಾಲಾ ಮಕ್ಕಳಿಗೆ ಹಾಗೂ ಪುರುಷ ಮತ್ತು ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು .
ಒಕ್ಕೂಟದ ವತಿಯಿಂದ ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು .
ಈ ಎಲ್ಲಾ ಕಾರ್ಯಕ್ರಮದ ಮೇಲುಸ್ತುವಾರಿಯ ಜವಾಬ್ದಾರಿಯನ್ನು ಗೋಪಾಲ ಪೂಜಾರಿ ಅಧ್ಯಕ್ಷರು SDMC ಸಾವ್ಯಹಾಗೂ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಯಮುನಾ ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ನೆರೆ ವಹಿಸಿದರು.
ಎಲ್ಲಾ ಸಭಾ ಕಾರ್ಯಕ್ರಮದ ನಿರ್ವಹಣೆಯನ್ನು ಶೇಖರ ಸುವರ್ಣ ಅಧ್ಯಕ್ಷರು ಜನಜಾಗೃತಿ ಗ್ರಾಮ ಸಮಿತಿ ಕೊಕ್ರಾಡಿ ಸಾವ್ಯ ಇವರು ಅಚ್ಚುಕಟ್ಟಾಗಿ ನಿರ್ವಾಹಿಸಿದರು .
ಈ ಸಂದರ್ಭದಲ್ಲಿ ಸಂತೋಷ್ ಕುಮಾರ್ ಮುಖ್ಯೋಪಾಧ್ಯಾಯರು /ಅಧ್ಯಾಪಕ ವೃಂದ ಸ.ಉ.ಹಿ.ಪ್ರಾ.ಶಾಲೆ ಸಾವ್ಯ ,ಪಂಚಾಯಿತಿ ಸದಸ್ಯರುಗಳಾದ ಹರೀಶ್ ಹೆಗ್ಡೆ ಸಾಂತ್ಯಾಲು, ಸುಜಾತಾ, ಸರೋಜಾ,ಗಣೇಶ ಅಧ್ಯಕ್ಷರು SDMC ಸರಕಾರಿ ಪ್ರೌಢ ಶಾಲೆ ಕೊಕ್ರಾಡಿ, ವಿಠಲ ಸುವರ್ಣ ನಿರ್ದೇಶಕರು ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನಾರಾವಿ, ಜಯರಾಜ್ ಹೆಗ್ಡೆ ಸದಸ್ಯರು ತಾಲೂಕು ಜನಜಾಗೃತಿ ಸಮಿತಿ ಬೆಳ್ತಂಗಡಿ,ಸೇವಾ ಪ್ರತಿನಿಧಿ ಶಶಿಧರ ಕೆ ಕುಲಾಲ್ ಕೊಕ್ರಾಡಿ -ಸಾವ್ಯ, ವೇಣೂರು ಠಾಣಾ ಪೊಲೀಸ್ ಸಿಬ್ಬಂದಿಗಳು, ಊರಿನ ಗಣ್ಯರು,ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ನವಜೀವನ ಸಮಿತಿ ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕ್ರೀಡಾ ಅಭಿಮಾನಿಗಳು ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here