ಉಡುಪಿ: ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಸಮಿತಿ 2025 – 26 ನೇ ಶೈಕ್ಷಣಿಕ ವರ್ಷದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳಲ್ಲಿ ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ಶಿಕ್ಷಕರಿಗೆ ವಿಷಯವಾರು ತರಬೇತಿ ಕಾರ್ಯಗಾರ ವರ್ಧನ- 2025 ಒಂದು ಬೆಳವಣಿಗೆಯ ಪಥ ಧ್ಯೇಯ ವಾಕ್ಯದೊಂದಿಗೆ ಆರಂಭಿಸಿದ ಶಿಕ್ಷಕರ ತರಬೇತಿಯಲ್ಲಿ ಮೂರು ವಿಷಯಗಳ ತರಬೇತಿ ಈಗಾಗಲೇ ಸಂಪನ್ನಗೊಂಡಿದೆ.
ಕನ್ನಡ ವಿಷಯ ತರಬೇತಿಯು ಆರ್. ಕೆ .ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಚೇರ್ಕಾಡಿಯಲ್ಲಿ ಜರುಗಿತು.ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಹರಿಶ್ಚಂದ್ರ ಕೋಟೇಶ್ವರ ಕಾರ್ಯಗಾರವನ್ನು ನಡೆಸಿಕೊಟ್ಟರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶೈಕ್ಷಣಿಕ ಸಂಲಗ್ನ ಸಂಸ್ಥೆಗಳಿಂದ 33 ಕನ್ನಡ ಶಿಕ್ಷಕರು ತರಬೇತಿ ಪ್ರಯೋಜನವನ್ನು ಪಡೆದರು .
ನಚಿಕೇತ ವಿದ್ಯಾಲಯ ಬೈಲೂರು ಗಣಿತ ವಿಷಯದ ತರಬೇತಿ ಕಾರ್ಯಗಾರವು ನಡೆದಿದೆ. ಹರ್ಷ ಕೊಟೇಶ್ವರ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರವನ್ನು ನಡೆಸಿಕೊಟ್ಟರು. 23 ಗಣಿತ ಶಿಕ್ಷಕರು ಕಾರ್ಯಗಾರದಲ್ಲಿ ಭಾಗವಹಿಸಿದರು . ಸಮಾಜ ವಿಜ್ಞಾನ ತರಬೇತಿ ಯು. ಎಸ್. ನಾಯಕ್ ಪ್ರೌಢಶಾಲೆ ಪಟ್ಲ ಸಂಸ್ಥೆಯಲ್ಲಿ ನಡೆದಿದ್ದು, ಶ್ರೀ ನರೇಂದ್ರ ಕುಮಾರ್ ಕೋಟ ಮತ್ತು ಶ್ರೀಮತಿ ರೇವತಿ ಉಪ್ಪೂರು ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳು ಕಾರ್ಯಗಾರವನ್ನು ನಡೆಸಿ ಕೊಟ್ಟರು .26 ಸಮಾಜ ವಿಜ್ಞಾನ ಶಿಕ್ಷಕರು ಭಾಗವಹಿಸಿದರು.ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು, ಸಂಸ್ಥೆಯ ಮುಖ್ಯೋಪಾಧ್ಯಾಯರು , ಶಿಕ್ಷಕ- ಶಿಕ್ಷಕೇತರ ವರ್ಗದವರು , ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಮತ್ತು ಅಧ್ಯಕ್ಷರು ,ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು .ಶ್ರೀ ಜನಾರ್ದನ ಶಾಲೆ ಎಳ್ಳಾರೆಯಲ್ಲಿ ವಿಜ್ಞಾನ , ಪಿ.ಆರ್.ಎನ್.ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿಯಲ್ಲಿ ಇಂಗ್ಲೀಷ್, ಶ್ರೀರಾಮ ವಿದ್ಯಾಕೇಂದ್ರ ಕೋಡಿಯಲ್ಲಿ ಹಿಂದಿ ವಿಷಯದ ತರಬೇತಿಯು ನಡೆಯುವುದುಎಂದು ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಕಾರ್ಯದರ್ಶಿ ಮಹೇಶ ಹೈಕಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.