ಬೆಂಗಳೂರು, ಮೇ, 7
ದಕ್ಷಿಣ ಭಾರತದ ಮೂಲೆ ಮೂಲೆಯಲ್ಲಿರುವ ಬಡ ಮತ್ತು ಕೆಳ ಮಧ್ಯಮ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ಟ್ರಸ್ಟ್ನ ಉದ್ದೇಶವಾಗಿದೆ. ಪ್ರತಿಭಾವಂತರನ್ನು ಕರೆತಂದು ಸನಾತನ ಧರ್ಮದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಎತ್ತಿಹಿಡಿಯಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ವಾಸವಿ ವೇದ ನಿಧಿ ಟ್ರಸ್ಟ್ ಎಲ್ಲಾ ಹಿಂದೂ ಹಬ್ಬಗಳು ಮತ್ತು ಆಚರಣೆಗಳನ್ನು ಸಾಂಪ್ರದಾಯಿಕವಾಗಿ ಆಚರಿಸುತ್ತದೆ. ನವರಾತ್ರಿಯಲ್ಲಿ 12 ದಿನಗಳ ಕಾಲ ವಾಸವಿ ದೇವಿಗೆ ವಿವಿಧ ಅಲಂಕಾರಗಳೊಂದಿಗೆ ಸಿಂಗರಿಸಲಾಗುತ್ತದೆ. ಪ್ರಸ್ತುತ ಟ್ರಸ್ಟ್ 500 ಕ್ಕೂ ಹೆಚ್ಚು ಪುರೋಹಿತರು, ಪಂಡಿತರನ್ನು ಹೊಂದಿದೆ. ವಿದೇಶಗಳಲ್ಲಿಯೂ ಪುರೋಹಿತರನ್ನು ನೇಮಿಸಲಾಗಿದೆ.
ಟ್ರಸ್ಟ್ ಪದಾಧಿಕಾರಿಗಳು: ಪದ್ಮಾಕರ್ – ಖಜಾಂಚಿ, ಆರ್.ಪಿ. ರವಿಶಂಕರ್ – ಪ್ರಧಾನ ಕಾರ್ಯದರ್ಶಿ ಹಾಗೂ ಸಿಎ ಡಾ. ವಿಷ್ಣು ಭರತ್ ಅಧ್ಯಕ್ಷರಾಗಿ ನೇತೃತ್ವ ನೀಡುತ್ತಿದ್ದು, ಇವರ ಸಾರಥ್ಯದಲ್ಲಿ ಟ್ರಸ್ಟ್ ಸಮರ್ಥವಾಗಿ ಮುನ್ನಡೆಯುತ್ತಿದೆ ಎಂದು ಪ್ರಕಟಣೆ ತಿಳಿಸಿದೆ