ದಾವಣಗೆರೆಯ ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಸಂಸ್ಥೆ ಆಧ್ಯಾತ್ಮಿಕ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಇತೀಚಿನ ಸರ್ವ ಸದಸ್ಯರ ಮಹಾಸಭೆ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ಶ್ರೀ ಗಾಯತ್ರಿ ಪರಿವಾರದ ಅಧ್ಯಕ್ಷರಾದ ಡಾ. ರಮೇಶ್ ಪಟೇಲ್ರವರ ಅಧ್ಯಕ್ಷತೆಯಲ್ಲಿ ನಡೆದಿದ್ದು 2026-28ನೇ ಸಾಲಿನ ನೂತನ ಅಧ್ಯಕ್ಷರಾಗಿ ವಾಸುದೇವ ಲಕ್ಷö್ಮಣ್ ರಾಯ್ಕರ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ಶೆಣೈ ತಿಳಿಸಿದ್ದಾರೆ.
ಈ ಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ ಮುಂದಿನ ಈ ಆಧ್ಯಾತ್ಮಿಕ ಪರಂಪರೆಯ ಕಾರ್ಯಕ್ರಮದ ಕುರಿತು ಚರ್ಚೆ ನಡೆಯಿತು. ಗೌರವ ಅಧ್ಯಕ್ಷರಾಗಿ ಕೆ.ಹೆಚ್.ಮಂಜುನಾಥ್, ಡಾ|| ಸುಶೀಲಮ್ಮ, ಕೋಶಾಧ್ಯಕ್ಷರಾಗಿ ಪುರುಷೋತ್ತಮ ಪಟೇಲ್, ಉಪಾಧ್ಯಕ್ಷರಾಗಿ ಎಂ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಗಳಾಗಿ ಸಾಲಿಗ್ರಾಮ ಗಣೇಶ್ಶೆಣೈ ಸಂಚಾಲಕರಾಗಿ ಭಾವನ್ನಾರಾಯಣ, ಸಹ ಸಂಚಾಲಕರಾಗಿ ಆರ್.ಎಂ.ಸತೀಶ್, ಸಮಿತಿ ಸದಸ್ಯರಾಗಿ ಎಂ.ಎಸ್.ಪ್ರಸಾದ್, ವಿ.ಕೃಷ್ಣಮೂರ್ತಿ, ಗುರುಮೂರ್ತಿ, ಕೆ.ಸಿ.ಉಮೇಶ್, ಬಿ.ಸತ್ಯನಾರಾಯಣ ಮೂರ್ತಿ ಆಯ್ಕೆಯಾದರು.

