ವಾತ್ಸಲ್ಯ ಮನೆ ಹಾಸ್ತಾoತರ ಕಾರ್ಯಕ್ರಮ

0
23

ಬಂಟ್ವಾಳ ತಾಲೂಕು ಕೊಲ್ನಾಡು ಗ್ರಾಮದ ಕುಲಾಲ್ ದಾಸರಾಮೂಲೆ ಲೀಲಾವತಿ ತಿಮ್ಮಪ್ಪ ಪೂಜಾರಿ ದಂಪತಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಿರ್ಮಿಸಿದ ವಾತ್ಸಲ್ಯ ಮನೆ ಹಸ್ತಾoತರ ಕಾರ್ಯಕ್ರಮ ಮಾರ್ಚ್ 27 ಶುಕ್ರವಾರ ಜರಗಿತು.

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಕೆಯ್ಯುರು ನಾರಾಯಣ ಭಟ್ ಗ್ರಾಮಾಂಭಿವೃದ್ಧಿ ಯೋಜನೆ ಯ ಕಾರ್ಯ ಕ್ರಮಗಳು ,ಮಾನವೀಯ ಧರ್ಮದ ಜ್ಯೋತಿಕ ವಾಗಿದೆ ಎಂದರು.

ಗ್ರಾಮಭಿವೃದ್ಧಿ ಯೋಜನೆಯ ಅನುದಾನದಲ್ಲಿ ಪೂರ್ತಿ ಮನೆ ನಿರ್ಮಿಸಿ, ಸಂಪ್ರದಾಯದ ಪ್ರಕಾರ ಪುರೋಹಿತರ ಮೂಲಕ ಗಣಪತಿಹೋಮ ಮಾಡಿ, ತುಳಸಿ ಗಿಡ ನೆಟ್ಟು, ಮನೆಯಲ್ಲಿ ಹಾಲು ಉಕ್ಕಿಸಿ ಮನೆಯನ್ನು ಹಸ್ತಾoತರ ಮಾಡಲಾಯಿತು.

ಮನೆಯನ್ನು ಹಸ್ತಾoತರ ಮಾಡಿದ ದಕ್ಷಿಣ ಕನ್ನಡ 2 ರ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಮಾತನಾಡಿ ವಾತ್ಸಲ್ಯ ಮಾತೃಶ್ರೀ ಹೇಮಾವತಿ ಅಮ್ಮನವರ ಇಷ್ಟವಾದ ಕಾರ್ಯಕ್ರಮ ವಾಗಿದ್ದು, ಯೋಜನೆ ಮುಖೇನ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ನಡೆದು ಸ್ವಾಸ್ತ್ಯ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಿ ಜೆ ಪಿ ಜಿಲ್ಲಾ ವಕ್ತಾರಾದ ಮಾಧವ ಮಾವೇ ಹಾಗೂ ಕೊಲ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಭಶ್ಚಂದ್ರ ಶೆಟ್ಟಿ ಕುಲಾಲ್, ಇನ್ನು ಈ ಮನೆಗೆ ಅಗತ್ಯ ಇರುವ ಸೌಲಭ್ಯ ಗಳನ್ನು ಒದಗಿಲು ಸಹಕರಿಸುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಪಂಚಾಯತ್ ಸದಸ್ಯ ಪವಿತ್ರ ಪೂಂಜಾ, ವಿಟ್ಲ ತಾಲ್ಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಸಾಲೆತ್ತೂರು ವಲಯದ ವಲಯಾಧ್ಯಕ್ಷರಾದ ದಿನೇಶ್ ಶೆಟ್ಟಿ, ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘ ಉಪಾಧ್ಯಕ್ಷರಾದ ಲಕ್ಷ್ಮಿ ನಾರಾಯಣ ಅಡ್ಯಂತಾಯ,, ಕೊಲ್ನಾಡ್ ಬಿ ಒಕ್ಕೂಟ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ, ಸಾಲೆತ್ತೂರು ವಲಯದ ಜನ ಜಾಗೃತಿ ಸದಸ್ಯರಾದ ರಂಜಿತ್ ಕುಮಾರ್, ಮಂಕುಡೆ ಒಕ್ಕೂಟ ಅಧ್ಯಕ್ಷರಾದ ಹರೀಶ್ ಟೈಲರ್, ಕುಲಾಲ್ ಹಾಗೂ ಸಾಲೆತ್ತೂರು ಒಕ್ಕೂಟ ಅಧ್ಯಕ್ಷರಾದ ಸುರೇಶ್ ನಾಯ್ಕ್, ಈಶ್ವರ್ ಪೂಜಾರಿ,ಕಸಬಾ ಮೇಲ್ವಿಚಾರಕ ಐತಪ್ಪ ತಾಲೂಕಿನ ಎಲ್ಲಾ ವಲಯಾಧ್ಯಕ್ಷರು, ಒಕ್ಕೂಟ ಅಧ್ಯಕ್ಷರುಗಳು,ಸಂಘದ ಸದಸ್ಯರು, ಶೌರ್ಯತಂಡದ ಸದಸ್ಯರು ಉಪಸ್ಥಿತರಿದ್ದರು.

ಜ್ಞಾನವಿಕಾಸ ಸಮನ್ವಯಧಿಕಾರಿ ದೀಪ,ಸ್ವಾಗತಿಸಿ,ವಲಯ ಮೇಲ್ವಿಚಾರಕಿ ಶಶಿಕಲಾ ವಂದಿಸಿದರು. ಸೇವಾಪ್ರತಿನಿಧಿ ಕುಶಲ, ಸಹಕರಿಸಿದರು. ಶೌರ್ಯ ತಂಡದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here