ವರದಿ ರಾಯಿ ರಾಜ ಕುಮಾರ
ಮುಲ್ಕಿ ಮೂಡುಬಿದಿರೆ ಭಾರತೀಯ ಜನತಾ ಪಾರ್ಟಿ ಮಂಡಲದ ವತಿಯಿಂದ ವಿಬಿಜಿ ರಾಮ್ ಜಿ ಕಾಯ್ದೆಯ ಕುರಿತು ಜನ ಜಾಗೃತಿ ಪಾದಯಾತ್ರೆ ಕಿನ್ನಿಗೋಳಿಯಲ್ಲಿ ಫೆಬ್ರವರಿ 14ರಂದು ನಡೆಯಿತು.
ಕಿನ್ನಿಗೋಳಿ, ಮುಲ್ಕಿ, ಮೂಡುಬಿದಿರೆಯ ಬಿಜೆಪಿ ಮುಖಂಡರುಗಳು, ಕಾರ್ಯಕರ್ತರು, ಶಾಸಕರು ಬೃಹತ್ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಕಾಯಿದೆಯ ಉತ್ತಮ ಅಂಶಗಳ ಬಗ್ಗೆ ಜನರಿಗೆ ಮನದಟ್ಟು ಮಾಡುವ ಪ್ರಯತ್ನವನ್ನು ಮುಖಂಡರುಗಳು ಮಾಡಿದರು. ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

