ನರಿಮೊಗರು : ಶ್ರೀ ಸ್ವಾಮಿ ಕೊರಗಜ್ಜ ಸಾನಿಧ್ಯ ಅರಿಪ್ಪೆಕಟ್ಟ ಇಲ್ಲಿ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೊತ್ಸವ ಮಾ: 7ರಂದು ವಿಜೃಂಭಣೆಯಿಂದ ನೆರವೇರಿಸಲಾಯಿತು.ಈ ಪುಣ್ಯ ಕಾರ್ಯದಲ್ಲಿ ಮನೆತನದವರು ಕುಟುಂಬಸ್ಥರು ಊರಿನ ಹಾಗೂ ಪರವೂರಿನ ನೂರಾರು ಭಕ್ತರು ಆಗಮಿಸಿ ಸಿರಿಗಂಧ ಪ್ರಸಾದ ಸ್ವೀಕರಿಸಿ ದೈವದ ಅಭಯ ಪಡೆದು ದೈವದ ಕೃಪೆಗೆ ಪಾತ್ರರಾದರು.
ಬೆಳಗ್ಗಿನಿಂದ ವಿವಿಧ ಪೂಜಾ ಕಾರ್ಯಗಳು ವಿಧಿವಿಧಾನಗಳು ನೆರವೇರಿ ,ಸಂಜೆ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಿತು.

