ಶ್ರೀ ಮಹಾವೀರಕಾಲೇಜು, ಮೂಡುಬಿದಿರೆಗೆ ಕನಾರ್ಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ವೀರಪ್ಪ ಮೊಯಿಲಿ ಅವರು ಆಗಮಿಸಿ ಉಪನ್ಯಾಸಕ ವೃಂದದೊಂದಿಗೆ ಸಂವಾದ ನಡೆಸಿದರು. ಈ ವಿಶೇಷ ಭೇಟಿ ಕಾಲೇಜಿಗೆ ಹೊಸ ಉತ್ಸಾಹವನ್ನು ತುಂಬಿತು.ಅವರುತಮ್ಮ ಸಾರ್ವಜನಿಕ ಜೀವನದ ಅನುಭವಗಳನ್ನು ಹಂಚಿಕೊಂಡರು.ಈ ಸಂದರ್ಭದಲ್ಲಿ ನಮ್ಮ ಪ್ರೀತಿಯ ಅಧ್ಯಕ್ಷರಾದ ಕೆ.ಅಭಯಚಂದ್ರ ಜೈನ್ ಅವರು ಆಗಮಿಸಿದ್ದರು. ಅವರು ವಿಶೇಷ ಆಹ್ವಾನ ನೀಡಿ, ಕಾಲೇಜಿಗೆ ವೀರಪ್ಪ ಮೊಯಿಲಿ ಅವರನ್ನು ಕರೆ ತರಲು ಅಮೂಲ್ಯ ಅವಕಾಶ ಒದಗಿಸಿದರು.
ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಧಾಕೃಷ್ಣ ಹಾಗೂ ಎಸ್.ಎನ್.ಎಂ.ಪೊಲಿಟೆಕ್ನಿಕ್ ಪ್ರಾಂಶುಪಾಲೆ ನೊರೊನಾತ ರೀನಾ ರೀಟಾ, ಎಜಿಸೋನ್ಸ್ಐ ಟಿಐ ಪ್ರಾಂಶುಪಾಲ ಶ್ರೀಕಾಂತ ಹೊಳ್ಳ, ಎಂ.ಕೆ.ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಧನಂಜಯ ಶೆಟ್ಟಿ ಹಾಗೂ ಉಪನ್ಯಾಸಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.