ಉಡುಪಿ: ಪ್ರಧಾನ ಮಂತ್ರಿಯವರು ನ. 28 ರಂದು ಕೃಷ್ಣ ಮಠಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡುವ ಉದ್ದೇಶದಿಂದ ಬೆಳಗ್ಗೆ 6 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ವಾಹನಗಳ ಸಂಚಾರ ನಿಷೇಧಿಸಿ ಮತ್ತು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಸ್ವರೂಪಾ ಟಿ. ಕೆ. ಅದೇಶಿಸಿದ್ದಾರೆ
ಕುಂದಾಪುರದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ಗುಂಡಿಬೈಲು ಹತ್ತಿರ ಜನರನ್ನು ಇಳಿಸಿ ಯು ರ್ಟನ್ ಆಗಿ ಎಂಜಿಎಂ ಮೈದಾನಕ್ಕೆ ಹೋಗಬೇಕು. ಕಾರ್ಕಳ&ಬೆಳ್ವೆ ಮಾರ್ಗವಾಗಿ ಉಡುಪಿಗೆ ಬರುವ ವಾಹನಗಳು ಕ್ರಿಶ್ಚಿಯನ್ ಹೈಸ್ಕೂಲ್, ಪಿಯು ಕಾಲೇಜ್ ಮತ್ತು ಬೈಲೂರು ಮುದ್ದಣ ಎಸ್ಟೇಟ್ ನಲ್ಲಿ ಪಾರ್ಕ್ ಮಾಡಿ ರೋಡ್ ಶೋಗೆ ತೆರಳಬೇಕು. ಮಂಗಳೂರು ಕಡೆಯಿಂದ ರೋಡ್ ಶೋಗೆ ಬರುವ ವಾಹನಗಳು ಬೈಲೂರು ಮುದ್ದಣ್ಣ ಎಸ್ಟೇಟ್ ನಲ್ಲಿ ಪಾರ್ಕ್ ಮಾಡಬೇಕು. ಮಲ್ಪೆ ಕಡೆಯಿಂದ ರೋಡ್ ಶೋ ಗೆ ಬರುವ ವಾಹನಗಳು ಶಾಮೀಲಿ ಎದುರು ಗ್ರೌಂಡ್ನಲ್ಲಿ ಪಾರ್ಕ್ ಮಾಡಬೇಕು.
ಕಾರ್ಕಳ ಹೆಬ್ರಿ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ಶಾರದಾ ಕಲ್ಯಾಣ ಮಂಟಪ ಮಾರ್ಗವಾಗಿ ಬೀಡಿನಗುಡ್ಡೆಯಲ್ಲಿ ಪಾರ್ಕ್ ಮಾಡಬೇಕು.
ಬಸ್ಸುಗಳು ಮತ್ತು ಕಾರುಗಳು
ಕೆ ಎಸ್ ಆರ್ ಟಿ ಸಿ ಮತ್ತು ಖಾಸಗಿ ಬಸ್ ಗಳು ಉಡುಪಿ ಬಸ್ ನಿಲ್ದಾಣಕ್ಕೆ ಬರುವಂತಿಲ್ಲ. ಅಂಬಾಗಿಲು, ದೊಡ್ಡಣಗುಡ್ಡೆ, ಮಣಿಪಾಲ, ಅಲೆವೂರು ಮಾರ್ಗವಾಗಿ ಕೊರಂಗ್ರಪಾಡಿ ಮಾರ್ಗವಾಗಿ ಬಲೈಪಾದೆ ಮೂಲಕ ಚಲಿಸಬೇಕು. ಮಲ್ಪೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ಪಡುಕೆರೆ ಪಿತ್ರೋಡಿ, ಉದ್ಯಾವರ ಮಾರ್ಗವಾಗಿ ಚಲಿಸಬೇಕು.ಮಲ್ಪೆಯಿಂದ ಕುಂದಾಪುರ ಹೋಗುವ ವಾಹನಗಳು ಸಂತೆಕಟ್ಟೆ ಮತ್ತು ನೇಜಾರು ಮುಖೇನಾ ಚಲಿಸಬೇಕು.
ಮಂಗಳೂರಿನಿಂದ&ಕುಂದಾಪುರ
ಮಂಗಳೂರಿನಿಂದ ಕುಂದಾಪುರಕ್ಕೆ ಹೋಗುವ ವಾಹನಗಳು ಕಟಪಾಡಿಯಿಂದ- ಮಣಿಪುರ- ದೆಂದೂರಕಟ್ಟೆ ರಾಂಪುರ- ಅಲೆವೂರು, ಗುಡ್ಡೆ ಅಂಗಡಿ- ಮಣಿಪಾಲ- ಆರ್ಎಸ್ಬಿ ಸಭಾಭವನ- ಸಿಂಡಿಕೇಟ್ ಸರ್ಕಲ್, ಕಾಯಿನ್ ಸರ್ಕಲ್- ಪೆರಂಪಳ್ಳಿ- ಅಂಬಾಗಿಲು ಪೆರಂಪಳ್ಳಿ ಕ್ರಾಸ್- ಅಂಬಾಗಿಲು ಬಳಿ ಎನ್ ಎಚ್66 ಮುಖಾಂತರ ಚಲಿಸಬೇಕು.
ಕಟಪಾಡಿ ಉದ್ಯಾವರ ಕಡೆಯಿಂದ ಬಂದ ವಾಹನಗಳು -ಬಲೈಪಾದೆ-ಗುಡ್ಡೆ ಅಂಗಡಿ ಕೊರಂಗ್ರಪಾಡಿ ಕ್ರಾಸ್ -ಕೊರಂಗ್ರಪಾಡಿ -ಕುಕ್ಕಿಕಟ್ಟೆ- ಜೋಡು ರಸ್ತೆ ಅಲೆವೂರು ಗುಡ್ಡೆಅಂಗಡಿ -ಮಣಿಪಾಲ ಸಿಂಡಿಕೇಟ್ ಸರ್ಕಲ್, -ಕಾಯಿನ್ ಸರ್ಕಲ್- ಪೆರಂಪಳ್ಳಿ -ಅಂಬಾಗಿಲು, ಪೆರಂಪಳ್ಳಿ ಕ್ರಾಸ್- ಅಂಬಾಗಿಲು ಮೂಲಕ ಚಲಿಸಬೇಕು.
ಕುಂದಾಪುರದಿಂದ- ಮಂಗಳೂರು ಕಡೆಗೆ ಹೋಗುವ ವಾಹಗನಗಳು ಅಂಬಾಗಿಲು ಎನ್ ಹೆಚ್ 66- ಅಂಬಾಗಿಲು ಪೆರಂಪಳ್ಳಿ ಕ್ರಾಸ್-, ಪೆರಂಪಳ್ಳಿ- , ಕಾಯಿನ್ ಸರ್ಕಲ್,- ಸಿಂಡಿಕೇಟ್ ಸರ್ಕಲ್, ಅಲೆವೂರು ಗುಡ್ಡೆ ಅಂಗಡಿ, -ರಾಂಪುರ-, ದೆಂದುರ್ಕಟ್ಟೆ-, ಮಣಿಪುರ-, ಕಟಪಾಡಿ ಮುಖಾಂತರ ಚಲಿಸಬೇಕು.
ಮಂಗಳೂರಿನಿಂದ ಮಲ್ಪೆ ಕಡೆಗೆ ಹೋಗುವ ವಾಹನಗಳು ಕಟಪಾಡಿ ಕಿಯಾ ಶೋ ರೂಂ ಎದುರು ಉದ್ಯಾವರ ಜಂಕ್ಷನ್, -ಉದ್ಯಾವರ ಪೇಟೆ-, ಪಿತ್ರೋಡಿ, -ಸಂಪಿಗೆ ನಗರ, ಕುತ್ಪಾಡಿ, -ಕಡೆಕಾರು, -ಕಿದಿಯೂರು-, ಮಲ್ಪೆ ಮುಖಾಂತರ ಚಲಿಸಬೇಕು.
