ವೇಣೂರು: 21ನೇ ವರ್ಷದ ಶ್ರೀ ಶಾರದೋತ್ಸವ, ಪೂರ್ವಭಾವಿ ಸಭೆ

0
90

ವೇಣೂರು: ಶ್ರೀ ಶಾರದಾ ಸೇವಾ ಟ್ರಸ್ಟ್ (ರಿ.) ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರು ಜಂಟಿ ಆಶ್ರಯದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಶಾರದೋತ್ಸವದ ಪೂರ್ವ ತಯಾರಿ ಸಭೆಯು ಸೆ. ೨ರಂದು ದೇವಸ್ಥಾನದಲ್ಲಿ ಜರಗಿತು.

ಈ ಸಭೆಯಲ್ಲಿ ಟ್ರಸ್ಟ್ ನ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರ ಆಯ್ಕೆ ಪ್ರಕ್ರಿಯೆ ನಡೆಯಿತು. ಬಾಲಕೃಷ್ಣ ಭಟ್ ಕಾಮೆಟ್ಟು ಅಧ್ಯಕ್ಷರಾಗಿ ಮತ್ತು ಕಾರ್ಯದರ್ಶಿಯಾಗಿ ಪುರುಷೋತ್ತಮ ಪೂಜಾರಿ ಮಂಗಳತೇರು ಸರ್ವಾನುಮತದಿಂದ ಆಯ್ಕೆಯಾದರು. ಹಾಗೂ ಟ್ರಸ್ಟ್ ನ ಬೈಲದಂತೆ ಕೋಶಾಧಿಕಾರಿಯಾಗಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು (ಎ. ಜಯರಾಮ ಶೆಟ್ಟಿ) ಮುಂದುವರಿಯಲಿದ್ದಾರೆ. ಈ ವರ್ಷದ ಸಾರ್ವಜನಿಕ ಶಾರದೋತ್ಸವವು ಇದೇ ದಿನಾಂಕ 30/09/2025 ಹಾಗೂ 01/10/2025 ರಂದು ಜರಗಲಿದ್ದು , 21ನೇ ವರ್ಷದ ಶ್ರೀ ಶಾರದೋತ್ಸವ ಇದಾಗಿದೆ.

LEAVE A REPLY

Please enter your comment!
Please enter your name here