ವೇಣೂರಿನ ಪ್ರಸಿದ್ಧ ವೈದ್ಯ ಡಾ. ಕೆ.ಆರ್. ಪ್ರಸಾದ್ ನಿಧನ

0
42

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಪೆರಿಂಜೆ ಬಡಕೋಡಿಗುತ್ತು ನಿವಾಸಿ, ವೇಣೂರಿನ ಮಹಾವೀರ ನಗರದ “ಪ್ರಸಾದ್ ಕ್ಲಿನಿಕ್” ನ ಖ್ಯಾತ ವೈದ್ಯರಾದ ಡಾ. ರವೀಂದ್ರನಾಥ ಪ್ರಸಾದ್‌ (ಡಾ. ಕೆ.ಆರ್. ಪ್ರಸಾದ್ (75ವ) ಇವರು ಜು.04ರಂದು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಇವರು ಪತ್ನಿ, ಇಬ್ಬರು ಪುತ್ರರನ್ನು ಹಾಗೂ ಅಪಾರ ಬಂಧು- ವರ್ಗವನ್ನು ಅಗಲಿದ್ದಾರೆ.
ಇವರು ವೇಣೂರಿನಲ್ಲಿ ಹಲವು ದಶಕಗಳಿಂದ ವೈದ್ಯಕೀಯ ಸೇವೆ ನೀಡಿ, ಜನಪ್ರಿಯ ವೈದ್ಯರಾಗಿ ಜನರ ಪ್ರೀತಿ – ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅಲ್ಲದೇ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here