ವೇಣೂರು: 10 ರೂ. ಆಟಿಕೆ ನೋಟು ಚಲಾವಣೆಯಲ್ಲಿ..!?

0
102

ವೇಣೂರು: ಬೆಳ್ತಂಗಡಿ ತಾಲೂಕಿನ ವೇಣೂರು ಪರಿಸರದಲ್ಲಿ ಆಟಿಕೆ ನೋಟು ಚಲಾವಣೆಯಾಗುತ್ತಿದೆಯೇ? ಹೀಗೊಂದು ಪ್ರಶ್ನೆ ಜನಸಾಮಾನ್ಯರಲ್ಲಿ ಕಾಡಿದೆ. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣ ವಾಟ್ಸಪ್‌ನಲ್ಲಿ ವ್ಯಕ್ತಿಯೊಬ್ಬರು ಹಾಕಿದ ಪೋಸ್ಟ್‌. ಹೌದು ಪಿ.ಎಚ್.‌ ಅಶ್ರಫ್‌ ಎಂಬವರು, ತನ್ನ ಪುತ್ರನಿಗೆ ನೀಡಿದ ಹಣದ ಗುರುತನ್ನು ಹುಡುಗ ಪತ್ತೆ ಹಚ್ಚಿದ್ದು, ಇದು ಆಟಿಕೆ ನೋಟು ಎಂದಾಗ ತಂದೆ ಅಶ್ರಫ್‌ ಆಶ್ಚರ್ಯಚಕಿತರಾಗಿದ್ದಾರೆ. ಮೇಲ್ನೊಟಕ್ಕೆ ಥೇಟ್‌ ಅಸಲಿನೋಟಿನಂತೆ ಕಂಡರೂ ಅದರಲ್ಲಿ ʻCHILDREN BANK OF INDIA , FULL OF FUN ಎಂದು ಮುದ್ರಿಸಲಾಗಿದೆ. ಯಾರೋ ಚಲಾವಣೆಗೆ ಬಿಟ್ಟಿರುವ ನೋಟು ಈಗ ಕೆಲವರ ಕೈ ಸೇರಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಸಾರ್ವಜನಿಕರು ಎಚ್ಚರ ವಹಿಸುವಂತೆ ಅವರು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here