ವೇಣೂರು: ಫಲ್ಗುಣಿ ಸೇವಾ ಸಂಘ (ರಿ.) ವೇಣೂರು ಇದರ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವೇಣೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯ ಸಹಯೋಗದೊಂದಿಗೆ ಎರಡು ದಿನ ಬೆಳ್ಳಿಹಬ್ಬ ಸಂಭ್ರಮದ ಗಣೇಶೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು.ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನುಮಾಡಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಲಾಯಿತು. 108 ಕಾಯಿ ಗಣಯಾಗ ಮಾರೂರು ಅಸ್ರಣ್ಣ ಅವರ ನೇತೃತ್ವದಲ್ಲಿ ನಡೆಯಿತು.ಮೊದಲ ದಿನ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಆಲ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವಾ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ ಹರ್ಷೇನ್ದರ ಕುಮಾರ್ ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ಭಾಗವಹಿಸಿದ್ದರು.ಯಸ್ ಡಿ ಎಂ ಕಾಲೇಜ್ ನ ಕನ್ನಡ ಉಪನ್ಯಾಸಕ ಡಾ ಮಹಾವೀರ್ ಜೈನ್ ಮಾರ್ಗಸೂಚಿ ಭಾಷಣ ಮಾಡಿದರು ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿವೇತನ ವಿತರಿಸಲಾಯಿತು.

ನಿವೃತ್ತ ಹಿರಿಯ ಶಿಕ್ಷಕರಾದ ಶ್ರೀ ಕುಂಜ್ಹೋಡಿ ಸುಂದರ್ ರಾವ್ ಅವರಿಗೆ ನಾಗರಿಕ ಸನ್ಮಾನ ಮಾಡಲಾಯಿತು.ಕಳೆದ ಇಪ್ಪತ್ತೈದು ವರ್ಷದಿಂದ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿರುವ ಗೋಪಾಲಕೃಷ್ಣ ಉಪಾಧ್ಯಾಯ ಹಾಗೂ ಇಪ್ಪತ್ತನಾಲ್ಕು ವರ್ಷಗಳಿಂದ ಶ್ರೀ ಗಣೇಶೋತ್ಸವದ ಸಾರಥ್ಯ ವಹಿಸಿರುವ ಅಧ್ಯಕ್ಷರುಗಳಿಗೆ ಕೃತಜ್ಞತಾರ್ಪಣೆ ಮಾಡಿ ಗೌರವಿಸಲಾಯಿತು. ಗಣೇಶೋತ್ಸವದ ಪ್ರಯುಕ್ತ ನಡೆದ ಕ್ರೀಡಾ ಕೂಟದ ಬಹುಮಾನ ಸಭೆಯಲ್ಲಿ ವಿತರಿಸಲಾಯಿತು. ಸಭೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಡಾ ಶಾಂತಿ ಪ್ರಸಾದ್, ಕೆ ಭಾಸ್ಕರ ಪೈ ಕಾರ್ಯದರ್ಶಿ ಪ್ರಶಾಂತ್ ಹೆಗ್ಡೆ ಉಪಸ್ಥಿತರಿದ್ದರು.ಸಮಿತಿಯ ಅಧ್ಯಕ್ಷರಾದ ಜಗದೀಶ್ಚಂದ್ರ ಡಿ ಕೆ ಸ್ವಾಗತಿಸಿದರು.ಫಲ್ಗುಣಿ ಸೇವಾ ಸಂಘದ ಅಧ್ಯಕ್ಷ ವಿ ಯಸ್ ಜಯಾರಾಜ್ ಪ್ರಸ್ತಾವಿಸಿದರು .ಕಾರ್ಯದರ್ಶಿ ಸುದೀಪ್ ಪಟವರ್ಧನ್ ಧನ್ಯವಾದವಿತ್ತರು.ಉಪನ್ಯಾಸಕ ಮಹಾವೀರ್ ಜೈನ್ ಮೂಡುಕೋಡಿ ಹಾಗೂ ಪ್ರಶಾಂತ್ ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿದರು.ಎರೆಡನೇ ದಿನ ವೈಭವೋಪೇತ ಮೆರವಣಿಗೆಗೆ ದೇವೇಂದ್ರ ಹೆಗ್ಡೆ ಕೊಕ್ರಾಡಿ ಇವರು ಚಾಲನೆ ನೀಡಿ ವಿವಿಧ ಕುಣಿತ ಭಜನಾ ತಂಡ ವಿವಿಧ ಟ್ಯಾಬ್ಲೋ ದೊಂದಿಗೆ ಗಣೇಶ ವಿಗ್ರಹದ ಮೆರವಣಿಗೆ ನಡೆದು ಫಲ್ಗುಣಿ ನದಿಯಲ್ಲಿ ಜಲ ಸ್ತಭಂನಗೊಳಿಸಲಾಯಿತು.

