ವೇಣೂರು: ಇತಿಹಾಸ ಪ್ರಸಿದ್ಧ ಇಲ್ಲಿಯ ಅಜಿಲಸೀಮೆಗೆ ಒಳಪಟ್ಟ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜುಲೈ 2025ರ ತಿಂಗಳಲ್ಲಿ ಜರಗುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ವಿವರಗಳನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಬಿಡುಗಡೆಗೊಳಿಸಿದೆ.
10.07.2025ನೇ ಗುರುವಾರದಂದು ಪೌರ್ಣಮಿ, ಈ ದಿನ ದೇಗುಲದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ. 16.07.2025ನೇ ಬುಧವಾರ ಕರ್ಕಾಟಕ ಸಂಕ್ರಮಣದ ಪ್ರಯುಕ್ತ ವಿಶೇಷ ಪೂಜೆ ಹಾಗೂ ಅನ್ನದಾನ ಸೇವೆ ನಡೆಯಲಿದೆ. ದಿನಾಂಕ 24.07.2025ನೇ ಗುರುವಾರ ಆಟಿ ಅಮಾವಾಸ್ಯೆಯ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದೆ. ದಿನಾಂಕ 29.07.2025ನೇ ಮಂಗಳವಾರ ನಾಗರಪಂಚಮಿ ಪ್ರಯುಕ್ತ ನಾಗ ದೇವರಿಗೆ ಹಾಲೆರೆದು ನಾಗತಂಬಿಲ ಸಹಿತ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಸೇವೆ ಜರಗಲಿದೆ.