ವೇಣೂರು: ಯುವವಾಹಿನಿ (ರಿ.) ವೇಣೂರು ಘಟಕದ ವಾರ್ಷಿಕ ಮಹಾಸಭೆಯು ಘಟಕದ ಅಧ್ಯಕ್ಷರಾದ ಶುಭಕರ ಪೂಜಾರಿ ಸಾವ್ಯ ಇವರ ಅಧ್ಯಕ್ಷತೆಯಲ್ಲಿ ವೇಣೂರು ಲಯನ್ಸ್ ಕ್ಲಬ್ ಸಭಾಭವನ ದಲ್ಲಿ ನಡೆಯಿತು.
ಸ್ಥಾಪಕಾಧ್ಯಕ್ಷ ನಿತೀಶ್ ಹೆಚ್. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿದರು. ಮಹಾಸಭೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಆಂತರಿಕ ಲೆಕ್ಕ ಪರಿಶೋಧಕ ಅರುಣ್ ಕೊಟ್ಯಾನ್, ಘಟಕದ ಸಲಹೆಗಾರರಾದ ನವೀನ್ ಪೂಜಾರಿ ಪಚ್ಚೇರಿ , ಯೋಗೀಶ್ ಬಿಕ್ರೊಟ್ಟು, ರಾಕೇಶ್ ಕುಮಾರ್ ಮುಡುಕೋಡಿ ಉಪಸ್ಥಿತರಿದ್ದರು.
ನಿಯೋಜಿತ ಅಧ್ಯಕ್ಷರಾಗಿ ಯುವ ಉದ್ಯಮಿ ಪ್ರಕಾಶ್ ಕೋಟ್ಯಾನ್ ಡೊಂಕಬೆಟ್ಟು ನಾರಾವಿ, ಪ್ರ. ಕಾರ್ಯದರ್ಶಿಯಾಗಿ ದಕ್ಷಾ ಅಂಡಿಂಜೆ, ಕೋಶಾಧಿಕಾರಿ ಸತೀಶ್ ಚಿಗುರು , ಉಪಾಧ್ಯಕ್ಷರುಗಳಾಗಿ ಸತೀಶ್ ಉಜಿರ್ದಡ್ಡ, ಯುವನ್ಯಾಯವಾದಿ ಸತೀಶ್ ಪಿ.ಎನ್., ಜೊತೆ ಕಾರ್ಯದರ್ಶಿ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಪೂಜಾರಿ ಮತ್ತು ನಿರ್ದೇಶಕರುಗಳು ಹಾಗೂ ಸಂಘಟನಾ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಯಿತು. ಗುರುವರ್ಯರ ಪ್ರಾರ್ಥನೆಯೊಂದಿಗೆ ಅರ0ಭವಾದ ಸಭೆಯಲ್ಲಿ ಕಾರ್ಯದರ್ಶಿ ರಕ್ಷಿತ್ ಬಂಗೇರ ಸ್ವಾಗತಿಸಿದರು, ನಿಯೋಜಿತ ಕಾರ್ಯದರ್ಶಿ ದಕ್ಷಾ ವಂದಿಸಿದರು.