ಬಹುಮುಖ ಪ್ರತಿಭೆ ಹನ್ವಿತ್ ಆಳ್ವ ರೀಗೆ ಕನ್ನಡ ಪಯಸ್ವಿನಿ ಅಚೀವಮೆಂಟ್ ಅವಾರ್ಡ್ 2026

0
81

ಬಹುಮುಖ ಪ್ರತಿಭೆ-ಹನ್ಶಿತ್ ಆಳ್ವ ಭರತನಾಟ್ಯ,ಸಂಗೀತ, ನಟನೆ, ಮಿಮಿಕ್ರಿ, ಬಾಷಣ, ಯಕ್ಷಗಾನ, ಭಾಗವತಿಕೆ, ಕರಾಟೆ, ಭಜನೆ,ಕುಣಿತ ಭಜನೆ, ಕ್ರೀಡೆ ಇವುಗಳಲ್ಲಿ ಬಹುಮುಖ ಪ್ರತಿಭೆಯಾಗಿ‌ ಮಿಂಚಿರುವ ಹನ್ಶಿತ್ ಆಳ್ವ ಇದುವರೆಗೂ ಸುಮಾರು 265 ಕ್ಕೂ ಹೆಚ್ಚಿನ ವೇದಿಕೆಗಳಲ್ಲಿ ಭರತನಾಟ್ಯ ಹಾಗೂ ಯಕ್ಷನೃತ್ಯ‌ ಪ್ರದರ್ಶನ ನೀಡಿರುತ್ತಾರೆ. ಛದ್ಮವೇಷ, ಭರತನಾಟ್ಯ, ಮಿಮಿಕ್ರಿ, ಭಾಷಣ, ಕೃಷ್ಣವೇಷ ಗಳಲ್ಲಿ 50 ಕ್ಕೂ ಹೆಚ್ಚು ಪ್ರಶಸ್ತಿ ಪಡೆದಿದ್ದಾನೆ.

ಇವರು ಕೆದಿಂಜೆ ಪರಾರಿ ಗಣೇಶ್ ಆಳ್ವ ( ಕೋಟೆಕುಂಜ) ಬಾಯಾರುಗುತ್ತು ಬಬಿತಾ ಆಳ್ವ( ಮೇಗಿನ ದೈಲ ಬಾಕ್ರಬೈಲ್) ಇವರ ಪುತ್ರನಾಗಿದ್ದು, ಕೋಟೆಕುಂಜ ಜಗನ್ನಿವಾಸ ಆಳ್ವ ಹಾಗೂ ಬಾಕ್ರಬೈಲು ದೈಲ ಮಂಜಣ್ಣ ಆಳ್ವರ ಪೌತ್ರರಾಗಿದ್ದಾರೆ. ವಿಶ್ವಮಂಗಳ ಹಿರಿಯ ಪ್ರಾಥಮಿಕ ಶಾಲೆ ಕೊಣಾಜೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದಾರೆ.

ಛದ್ಮವೇಷ : ಚಿಕ್ಕಂದಿನಲ್ಲಿಯೇ ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಕುಂಬಳೆಯ ಗೋಕುಲ ನಗರ ಗೆಳೆಯರ ಬಳಗ ಕೃಷ್ಣಲೀಲೋತ್ಸವದಲ್ಲಿ ನಿರಂತರ ಎರಡು ವರುಷ ( 2018-2019) ಪ್ರಥಮ ಬಹುಮಾನ ಪಡೆದಿರುತ್ತಾನೆ. ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ತೊಕ್ಕೊಟ್ಟು ಇಲ್ಲಿ 2019 ರಲ್ಲಿ ನಡೆದ ಕೃಷ್ಣವೇಷ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿರುತ್ತಾನೆ. 2020 ರಲ್ಲಿ ನಡೆದ ಮುಳಿಯ ಜ್ಯುವೆಲ್ಲರ್ಸ್ ಪುತ್ತೂರು ಇವರ ಛದ್ಮವೇಷ ಸ್ಪರ್ಧೆಯಲ್ಲೂ(ಆನ್ ಲೈನ್) ದ್ವಿತೀಯ ಬಹುಮಾನ ಪಡೆದಿರುತ್ತಾನೆ. NCDC( National child development Council) ಇವರ ಆಶ್ರಯದಲ್ಲಿ ನಡೆದ ಕೃಷ್ಣವೇಷ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾನೆ. ವಿಟ್ಲ ಮಾದರಿ ಶಾಲೆಯಲ್ಲಿ ನಡೆದ ಪ್ರಶಸ್ತಿ ವಿಜೇತ ಯುವಕ ಮಂಡಲದ ಕೃಷ್ಣವೇಷ ಬಾಲಮುರಳಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.

ತುಳು ಸಾಹಿತ್ಯ ಅಕಾಡೆಮಿ ಹಾಗೂ ಆಮಂತ್ರಣ ಪರಿವಾರದ ನೃತ್ಯ ಸ್ಪರ್ಧೆಯಲ್ಲಿ ಚತುರ್ಥ ಬಹುಮಾನ ಪಡೆದಿದ್ದಾನೆ. ಬಾಕ್ರಬೈಲಿನಲ್ಲಿ ಸೂರೇಶ್ವರ ದೇವರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ನಡೆದ ಅಷ್ಟವಧಾನ ಸೇವೆಯಲ್ಲಿ ಕಿರಿಯ ವಯಸ್ಸಿನಲ್ಲಿ ಎರಡು ಬಾರಿ ಭರತನಾಟ್ಯ ಪ್ರಸ್ತುತ ಪಡಿಸಿದ್ದಾನೆ, 2022 ರಲ್ಲಿ ಗೋಕುಲ ನಗರ ಗೆಳೆಯರ ಬಳಗ ಕುಂಬಳೆ ಕಾಸರಗೋಡು ಶ್ರೀ ಸ್ವಚಿ ಕಲಾ ಆರ್ಟ್ಸ್ ಮಾರ್ನಮಿಕಟ್ಟೆ ಮಂಗಳೂರು,ಶ್ರೀ ಕೃಷ್ಣ ಭಜನಾಮಂದಿರ ಸುದರ್ಶನ ನಗರ ಪಜೀರು ಮಂಗಳೂರು ,ಸಾರ್ವಜನಿಕ ಕೃಷ್ಣ ಜಯಂತೋತ್ಸವ ಸಮಿತಿ ಅತ್ತಾವರ ಮಂಗಳೂರು, ಇಲ್ಲಿ ನಡೆದ ಕೃಷ್ಣವೇಷ ಸ್ಪರ್ಧೆಯಲ್ಲಿ ಪ್ರಥಮ, ದುರ್ಗಾಸ್ವಾತಿ ನೃತ್ಯಾಲಯ ಕುತ್ತಾರು ಇಲ್ಲಿ ನಡೆದ ನೃತ್ಯಾರಾಧನೆ ಭರತನಾಟ್ಯ ಸ್ಪರ್ಧೆಯಲ್ಲಿ ದ್ವೀತೀಯ, ಕಲಾ ಪ್ರತಿಭೆ, ಆಮಂತ್ರಣ ಪರಿವಾರ ಇವರು ನಡೆಸಿದ ನೃತ್ಯ ಸ್ಪರ್ಧೆಯಲ್ಲಿ ವಿಜೇತ,ಆಮಂತ್ರಣ ಮತ್ತು ಸಂಸ್ಕೃತ ಸಿರಿ ರೋಟರಿಕ್ಲಬ್ ಮಡಂತ್ಯಾರು ಇವರು ನಡೆಸಿದ ನೃತ್ಯಸ್ಪರ್ಧೆಯಲ್ಲಿ ವಿಜೇತ, 2022 ರಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ, 2023 ರಲ್ಲಿ ಕ್ಲಸ್ಟರ್ ಮಟ್ಟದ ಮಿಮಿಕ್ರಿಯಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾನೆ.

ರಾಗ ತರಂಗ (8) ಮಂಗಳೂರು ಇವರ ಬಾಲಪ್ರತಿಭೋತ್ಸವ ಮತ್ತು ನಿನಾದ 2021ರಲ್ಲಿ ಅಂತರ್ ಜಿಲ್ಲಾ ಮಟ್ಟದ ಛದ್ಮವೇಷದಲ್ಲಿ ದ್ವಿತೀಯ, 2022 ರಲ್ಲಿ ದ್ವಿತೀಯ,18-11-2023 ರಲ್ಲಿ ಪ್ರಥಮ, ಆಮಂತ್ರಣ ಪರಿವಾರದ ಮಕ್ಕಳ ಸಮ್ಮೇಳನ,ವಾಯ್ಸ್ ಓಫ್ ಆರಾಧನದ ಮಕ್ಕಳ ಸಾಂಸ್ಕ್ರತಿಕ ಸಮ್ಮೇಳನ,ಮತ್ತು ವಾಯ್ಸ್ ಓಫ್ ಆರಾಧನ ,ತುಳುವೆರೆ ಆಯನೊ‌ ಕೂಟ ಕುಡ್ಲ ಇವರು ಜಂಟಿಯಾಗಿ ಅಯೋಜಿಸಿದ ಜೋಕ್ಲೆನ ಮಿನದನ ಕಾರ್ಯಕ್ರಮದಲ್ಲಿ ಬಾಗವಹಿಸಿರುತ್ತಾನೆ. ಮುದ್ದು‌ಕೃಷ್ಣ ಸಾಂಸ್ಕ್ರತಿಕ ಟ್ರಸ್ಟ್ (ರಿ) ತೊಕ್ಕೊಟ್ಟು ಬಾಷಣ ಸ್ಪರ್ಧೆಯಲ್ಲಿ ಚತುರ್ಥ, ಇಸ್ಕಾನ್ ಮಂಗಳೂರು ಇವರ ಜನ್ಮಾಷ್ಟಮಿ ಕ್ರೊನಿಕಲ್ಸ್ 2023 ರಲ್ಲಿ ಕೃಷ್ಣವೇಷ ಪ್ರಥಮ,ಫಿಝಾ ನೆಕ್ಸಸ್ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ದ್ವಿತೀಯಾ, ಇಸ್ಕಾನ್ ಮಂಗಳೂರು ಇವರ ರಾಮಾಯಣ ಡೈರೀಸ್ 2023 ರಲ್ಲಿ ಭರತನಾಟ್ಯದಲ್ಲಿ ದ್ವಿತೀಯ ಮತ್ತು ಛದ್ಮವೇಷದಲ್ಲಿ ದ್ವಿತೀಯ, ಸ್ಪಂದನ ಟಿ ವಿ ನಡೆಸಿದ ಆನ್ಲೈನ್ ಛದ್ಮವೇಷ ಸ್ಪರ್ಧೆಯಲ್ಲಿ ತೃತೀಯ,ಜಿ ಸ್ಕ್ವೇರ್ ಡಾನ್ಸ್ ಸ್ಟುಡೀಯೋ ಕೃಷ್ಣವೇಷ ಸ್ಪರ್ಧೆಯಲ್ಲಿ ದ್ವಿತೀಯ, ನೆಕ್ಸಾ‌ ಭಾರತ್ ಅಟೊ ಇವರ ಫ್ರೀಡಂ‌ ಫೆಸ್ಟ್ ಛದ್ಮವೇಷದಲ್ಲಿ ದ್ವಿತೀಯ, ಶಾರದ ವಿಧ್ಯಾನಿಖೇತನ ತಲಪಾಡಿ ಇವರ ಆಶ್ರಯದಲ್ಲಿ ನಡೆದ ರಾಪೋರ್ಟ್ ಸೂಪರ್ ಕಿಡ್ 2023 ಇದರಲ್ಲಿ ಪ್ರಥಮ ಬಹುಮಾನ ಪಡೆದಿದ್ದಾನೆ. 2022-2023-2024 ) ಸತತ ಮೂರು ಬಾರಿ ಕೃಷ್ಣವೇಶದಲ್ಲಿ ಶ್ರೀಕೃಷ್ಣ ಭಜನಾ ಮಂದಿರ ಸುದರ್ಶನ ನಗರ ಪಜೀರು ಇಲ್ಲಿ ಪ್ರಥಮ,ಇಸ್ಕಾನ್ ಜನ್ಮಾಷ್ಟಮಿ ಕ್ರೋನಿಕಲ್ಸ್ ಇದರಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾನೆ.2024 ರ ಪ್ರತಿಭಾ ಕಾರಂಜಿ ಮಿಮಿಕ್ರಿಯಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ,ಕರ್ನಾಟಕ ಸಾಹಿತ್ಯ ನಮ್ಮೇಳನ ಮಂಚಿ 2024 ರಲ್ಲಿ ವೀಡಿಯೋ ರೀಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 2025 ರಲ್ಲಿ ವಿಜಯ ಸಿಂಧೂರ – 2025 ಬಾಷಣ ಸ್ಪರ್ಧೆಯಲ್ಲಿ ದ್ವಿತೀಯ, ಶ್ರೀ ಕೃಷ್ಣ ಜನ್ಮಾಷ್ಟಮಿ ತೊಕ್ಕೊಟ್ಟು ಬಾಷಣ ಸ್ಪರ್ಧೆಯಲ್ಲಿ ತೃತೀಯ, ಇಸ್ಕಾನ್ ಮಂಗಳೂರು ಇವರ ಬಾಷಣ ಸ್ಪರ್ಧೆಯಲ್ಲಿ ಪ್ರಥಮ, 2025 ಪ್ರತಿಭಾಕಾರಂಜಿ ಮಿಮಿಕ್ರಿಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ , ಬಿ ಸಿ ರೋಡ್ ನಲ್ಲಿ ನಡೆದ ಶ್ರೀ ಯೋಗನಿಧಿ ಪತಂಜಲಿ ಟ್ರಸ್ಟ್ ಇವರ ಬಾಷಣ ಸ್ಪರ್ಧೆಯಲ್ಲಿ ಪ್ರಥಮ, ಶಾಂತಿನಿಕೇತನ ಧರ್ಮಸ್ಥಳ ಇವರ ಬಾಷಣದಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ನಟನೆ : ಕಲಾ ಕುಸುಮ ಕ್ರಿಯೇಷನ್ಸ್ ಇವರ ತ್ಯಾಗಮಯಿ ಕಿರುಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿರುವ ಇವರು ಖ್ಯಾತ ತುಳು ಚಿತ್ರನಟ ಅರವಿಂದ ಬೋಳಾರ್ ಜೊತೆ ಜಾಹೀರಾತಿನಲ್ಲಿ ಭಾಗವಹಿಸಿದ್ದಾನೆ. ಇನ್ನಷ್ಟೇ ಬಿಡುಗಡೆಯಾಗಲಿರುವ ಪಾಚಿ ಕನ್ನಡ ಚಿತ್ರದಲ್ಲಿ ಸಹಬಾಲನಟನಾಗಿ ಅಭಿನಯಿಸಿದ್ದಾನೆ.

ಪ್ರಶಸ್ತಿಗಳು : ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ, ಬೆಂಗಳೂರು, ಶ್ರೀ ಜ್ಞಾನ ಮಂದಾರ ಟ್ರಸ್ಟ್ (ರಿ) ಬೆಂಗಳೂರು ಇವರ ಆಶ್ರಯದಲ್ಲಿ ಕನ್ನಡ ಕಲಾ ಪ್ರತಿಭೋತ್ಸವ -2023 ರ ಪ್ರತಿಷ್ಠಿತ “ಅರಳು ಮಲ್ಲಿಗೆ” ರಾಜ್ಯ ಪ್ರಶಸ್ತಿ, ಕರ್ನಾಟಕ ಜನಸ್ಪಂದನಾ ಟ್ರಸ್ಟ್(ರಿ) ಇವರ “ಕಲಾಸಿರಿ ರತ್ನ” ರಾಜ್ಯ ಮಟ್ಟದ ಪ್ರಶಸ್ತಿ, ರಾಗ ತರಂಗ (ರಿ) ಮಂಗಳೂರು ಇವರ ಅಂತರ್‌ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ -2023, ಕನ್ನಡ ಭವನ ಮತ್ತು ಗ್ರಂಥಾಲಯ (ರಿ) ಕಾಸರಗೋಡು ಭರವಸೆಯ ಬೆಳಕು-2023 ಅಂತರ್ ರಾಜ್ಯ ಯುವ ಪ್ರತಿಭಾ ಪ್ರಶಸ್ತಿ ಪಡೆದಿರುವ ಈ ಬಾಲಕ ಕರ್ನಾಟಕ ಅಚೀವರ್ಸ್ ಬುಕ್ ಓಫ್ ರೆಕಾರ್ಡ್ ಗೌರವದ ಜೊತೆಗೆ ವಾಯ್ಸ್ ಆಫ್ ಆರಾಧನ ಇವರ ಸೇವಾರತ್ನ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.ರಾಸ ಕನ್ನಡ ಮತ್ತು ಕಲಾ ಸಂಸ್ಕ್ರತಿ ಚಾರಿಟೇಬಲ್ ಟ್ರಸ್ಟ್(ರಿ) ಇವರ ವರ್ಷದ ಸೇವಾರತ್ನ 2024 ಪ್ರಶಸ್ತ ಪಡೆದಿದ್ದಾರೆ.

ಇಷ್ಟು ಮಾತ್ರವಲ್ಲದೆ 25-02-2024 ರಂದು ಉತ್ತರ ಪ್ರದೇಶದ ಲಕ್ನೋ ದಲ್ಲಿ 19 ನೇ ರಾಷ್ಟ್ರೀಯ ಕನ್ನಡ ಸಂಸ್ಕ್ರತಿ ಸಮ್ಮೇಳನದಲ್ಲಿ ಭಾಗವಹಿಸಿ ಭರತನಾಟ್ಯ, ಯಕ್ಷನೃತ್ಯ ಹಾಗೂ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಹಾಗೆಯೇ 26/02/2024 ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಮತ್ತು ಅದೇ ತಂಡದ ಜೊತೆ ಪೂಜ್ಯ ಪುತ್ತಿಗೆ ಶ್ರೀಗಳ ಆಶೀರ್ವಾದದೊಂದಿಗೆ ಉಡುಪಿಯ ರಾಜಾಂಗಣದಲ್ಲೂ ಯಕ್ಷಗಾನ ಪ್ರದರ್ಶನ ನೀಡಿದ್ದಾನೆ. 23-06-2024 ರಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಮಾಕ್ಸ್ ಲೈಫ್ ಇನ್ಸೂರೆನ್ಸ್ ನ ಕಲಾರತ್ನ ಪ್ರಶಸ್ತಿ ಜೊತೆಗೆ 29-11-2024 ರಂದು ಬೆಂಗಳೂರಿನ ಕಲಾಗ್ರಾಮ ಸಭಾಂಗಣದಲ್ಲಿ ಜರಗಿದ “ಕಲಾಭೂಮಿ ರಾಜ್ಯೋತ್ಸವ” ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 2025 ರಲ್ಲಿ ಬೆಳಕು ಟ್ರಸ್ಟ್ ರಾಯಚೂರು (ರಿ) ಇವರ ಪದ್ಮ ರತ್ನಾಕರ ಪ್ರಶಸ್ತಿ ,ಹಾಗೂ ಕಟೀಲಿನಲ್ಲಿ ಜಾಗೃತಿ ಟ್ರಸ್ಟ್ ಬೆಂಗಳೂರು‌ ಕನ್ಡಡ ಕಲಾರತ್ನ ಪ್ರಶಸ್ತಿ ಪಡೆದಿದ್ದಾರೆ.

ಕರಾಟೆ : ಇಕ್ಮಾ ಕಪ್ 2022 ಕರಾಟೆಯಲ್ಲಿ ತೃತೀಯ ಬಹುಮಾನ ಹಾಗೂ ಕರಾಟೆಯಲ್ಲಿ ಹಳದಿ ಬೆಲ್ಟ್ ಪಡೆದಿದ್ದಾರೆ.

ಗೌರವ ಸನ್ಮಾನಗಳು
ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಬಾಕ್ರಬೈಲ್,ಬಂಟರ ಸಂಘ ವರ್ಕಾಡಿ ವಲಯ .

ಸಾರ್ವಜನಿಕ ಶ್ರೀಕೃಷ್ಣ ಜನ್ನಾಷ್ಟಮಿ ಹಾಗೂ ಗಣೇಶೋತ್ಸವ ಸಮಿತಿ ಕುಂಬಳೆ.ಇವರಿಂದ ವೇದಿಕೆಯಲ್ಲಿ ಸನ್ಮಾನಿಸಲ್ಪಟ್ಟಿದ್ದಾರೆ.

ಪ್ರಸ್ತುತ ಇವರು ಭರತನಾಟ್ಯವನ್ನು ವಿದುಷಿ ಶ್ರೀಮತಿ ಸ್ವಾತಿ ಭಟ್ ಹಾಗೂ ಸಂಗೀತವನ್ನು ಮಂಜುಳಾ ಜಿ ರಾವ್ ಇವರಲ್ಲಿ ಕರಾಟೆಯನ್ನು ಸಂಪತ್ ಅವರಲ್ಲಿ ಮತ್ತು ಯಕ್ಷಗಾನ ಮತ್ತು ಭಾಗವತಿಕೆಯನ್ನು ಪ್ರಸಾದ್ ಚೇರ್ಕಾಡಿ ಇವರಲ್ಲಿ ಕಲಿತು ಈಗ ಅಶ್ವತ್ ಮಂಜನಾಡಿ ಮುಂದುವರಿಸುತ್ತಿದ್ದಾರೆ. ಜೊತೆಗೆ ಆಕಾಶವಾಣಿ ಮಂಗಳೂರು ಹಾಗೂ ರೇಡಿಯೋ ಮಣಿಪಾಲ್ ನಲ್ಲಿ ಸಂದರ್ಶನ ಕೂಡಾ ನೀಡಿರುತ್ತಾರೆ. ಇವರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ಇದೆ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ .

LEAVE A REPLY

Please enter your comment!
Please enter your name here