ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ,ಉಡುಪಿ ವಿಶ್ವಗೀತಾ ಪರ್ಯಾಯ 2024-2026 ಕನ್ನಡ ಸಿನಿಮಾರಂಗದ ಹಿರಿಯ ಚಲನ ಚಿತ್ರ ನಟ ರಮೇಶ್ ಭಟ್ ಅವರು ತಾವು ಬರೆದ ಗೀತಾಲೇಖನವನ್ನು ಇಂದು ರಾಜಾಂಗಣದಲ್ಲಿ ಪರ್ಯಾಯ ಶ್ರೀಗಳಿಗೆ ಸಮರ್ಪಿಸಿದರು. ಪರ್ಯಾಯ ಶ್ರೀಪಾದರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು , ಶ್ರೀ ಮಠದ ರಮೇಶ್ ಭಟ್ ಉಪಸ್ಥಿತರಿದ್ದರು
ಪರ್ಯಾಯ ಶ್ರೀಪಾದರು ಬಿಡುವಿನ ಸಮಯದಲ್ಲಿ ರಮೇಶ್ ಭಟ್ ಅವರು ಕೋಟಿ ಗೀತೆ ಬರೆದದ್ದು ಬಹಳ ಸಂತೋಷದ ವಿಷಯ , ಚಲನಚಿತ್ರರಂಗದವರೂ ಕೂಡಾ ನಮ್ಮ ಕೋಟಿಗೀತಾಲೇಖನ ಯಜ್ಞದಲ್ಲಿ ಭಾಗವಹಿಸಲು ಪ್ರೇರಣೆ ನೀಡಿದಂತಾಯಿತು ಎಂದು ತಿಳಿಸಿ ಶ್ರೀ ರಮೇಶ್ ಭಟ್ ದಂಪತಿಗಳಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಸನ್ಮಾನಿಸಿ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು.