216 ಗಂಟೆಗಳ ಭರತನಾಟ್ಯ ಪ್ರದರ್ಶನದ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಬರೆದ ವಿದುಷಿ ದೀಕ್ಷಾ ವಿ

0
100


ವರದಿ ಮಂದಾರ ರಾಜೇಶ್ ಭಟ್

ಉಡುಪಿ:- ಪಾರಂಪರಿಕ ಕಲೆ, ಶಿಸ್ತಿನ ತಾಳ, ಮನಸ್ಸು ಮತ್ತು ದೇಹದ ಅಪ್ರತಿಮ ಶ್ರಮವನ್ನು ಪ್ರತಿಬಿಂಬಿಸುವಂತಹ ಸಾಧನೆಯನ್ನು ಅವಿಭಜಿತ ದಕ್ಷಿಣ ಕನ್ನಡದ ಯುವ ಕಲಾವಿದೆ ವಿದುಷಿ ದೀಕ್ಷಾ ವಿ ತೋರಿಸಿದ್ದಾರೆ.

ಅವರು ಸತತ 216 ಗಂಟೆಗಳ ಕಾಲ ನಿರಂತರವಾಗಿ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.

ಈ ಅಪರೂಪದ ಸಾಧನೆ ಗಿನ್ನೆಸ್ ಬುಕ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಾಗಿದ್ದು, ಭಾರತೀಯ ಭರತನಾಟ್ಯ ಸಾಮರ್ಥ್ಯವನ್ನು ವಿಶ್ವದ ಮುಂದೆ ಪ್ರತಿಪಾದಿಸಿದೆ. ಹಲವು ದಿನಗಳ ಕಾಲ ನೃತ್ಯಮಗ್ನಳಾದ ದೀಕ್ಷಾ ವಿ ಅವರ ದೇಹದ ಚೈತನ್ಯ, ಮನೋಬಲ ಮತ್ತು ಕಲೆಪ್ರೇಮ ಎಲ್ಲರಿಗೂ ಮಾದರಿ ಹಾಗೂ ಸ್ಫೂರ್ತಿದಾಯಕವಾಗಿದೆ.

ಸಾಂಸ್ಕೃತಿಕ ವೇದಿಕೆಗಳು, ಕಲಾವಿದರ ಸಂಘಟನೆಗಳು ಹಾಗೂ ಅಭಿಮಾನಿಗಳು ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದು, ಹೂವಿನ ಮಳೆ ಸುರಿದು ಗೌರವಿಸುತ್ತಿದ್ದಾರೆ. ಈ ಸಾಧನೆಯ ಹಿನ್ನೆಲೆಯಲ್ಲಿ ದೀಕ್ಷಾ ವಿ ಅವರನ್ನು ದೇಶಾದ್ಯಂತ, ಜೊತೆಗೆ ಜಗತ್ತು ಕೊಂಡಾಡಲಾಗುತ್ತಿದ್ದು, ತಾಳ-ಲಯ-ಭಾವಗಳನ್ನು ಅಚ್ಚಳಿಯದ ರೀತಿಯಲ್ಲಿ ತೋರಿದ ಕಲಾವಿದೆಯಾಗಿ ಗುರುತಿಸಲಾಗಿದೆ.

ಈ ಸಾಧನೆ ಮೂಲಕ ಭಾರತೀಯ ಭರತನಾಟ್ಯ ನೃತ್ಯಕಲೆಯ ಶಕ್ತಿ, ಅದಕ್ಕೆ ಬೇಕಾದ ತಾಳ್ಮೆ ಹಾಗೂ ಬದ್ಧತೆಯನ್ನು ಅವರು ಸಾಬೀತುಪಡಿಸಿದ್ದಾರೆ. ತುಳುನಾಡಿನ ಹೆಮ್ಮೆ ಹೆಚ್ಚಿಸಿದ ದೀಕ್ಷಾ ವಿ ಅವರ ಸಾಧನೆ, ಕಲೆಪ್ರೇಮಿಗಳಿಗೆ ಇದು ಒಂದು ಇತಿಹಾಸಾತ್ಮಕ ಕ್ಷಣವಾಗಿದೆ. ಈ ಸಂದರ್ಭದಲ್ಲಿ ನಮ್ಮ ಪತ್ರಿಕೆಯು ವಿದುಷಿ ದೀಕ್ಷಾ ವಿ ಅವರಿಗೆ ಅಭಿನಂದನೆ ಜೊತೆಗೆ ಶುಭ ಹಾರೈಸುತಿದೆ

LEAVE A REPLY

Please enter your comment!
Please enter your name here