ಮೂಡಬಿದ್ರೆ: ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ತನ್ನ ಹೊಸ ಶಾಖೆಯನ್ನು ಮೂಡಬಿದ್ರೆಯಲ್ಲಿ ಪ್ರಾರಂಭಿಸಲು ಸಜ್ಜಾಗಿದೆ. ಸ್ಥಳಾಂತರಿತ ಹವಾನಿಯಂತ್ರಿತ ನೂತನ ಶಾಖೆಯ ಉದ್ಘಾಟನಾ ಸಮಾರಂಭವು ನವೆಂಬರ್ 5, 2025 ಬುಧವಾರ ಬೆಳಿಗ್ಗೆ 10.30ಕ್ಕೆ ಮೂಡಬಿದ್ರೆ ಪುರಸಭೆ ಮುಂಭಾಗದ ಫಾರ್ಚ್ಯೂನ್ ನೀತಿ ಹೈಟ್ಸ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ ತಮಗಿರುವ ಆರ್ಥಿಕ ಸ್ವಾವಲಂಬನೆಯ ಬಲವರ್ಧನೆಗೆ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನೀಡುತ್ತಿರುವ ಸೇವೆಗಳ ಕುರಿತು ಮಾಹಿತಿ ನೀಡಲಾಗುವುದು.
ಅಜಿತ್ ಜೆ. ಶೆಟ್ಟಿ ಕೊರ್ಯರು – ಅಧ್ಯಕ್ಷರು, ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇವರು ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು, ಜಯಂತ ಶೆಟ್ಟಿ ಕೆ. ಉಪಾಧ್ಯಕ್ಷರು, 
 ಸುಜಯ್ ಶೆಟ್ಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪಸ್ಥಿತರಿರಲಿರುವರು.

