ವರದಿ : ಮಂದಾರ ರಾಜೇಶ್ ಭಟ್
ಬೆಂಗಳೂರು : ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಸಮಾನ ಮನಸ್ಕರನ್ನು ಒಂದೇ ಸೂರಿನಡಿ ತರುವ ಗುರಿ ಹೊಂದಿರುವ ‘ ವಿಕಾಸ – ಸಮಾನ ಮನಸ್ಕ ವಿಪ್ರ ಮಾಧ್ಯಮ ಮಿತ್ರರ ವೇದಿಕೆ’ ಯ ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಹಿರಿಯ ಮಾಧ್ಯಮ ಮಿತ್ರರಿಗೆ ಸನ್ಮಾನ ಸಮಾರಂಭವು ಮಾರ್ಚ್ 1, 2026ರಂದು ಅತ್ಯಂತ ಯಶಸ್ವಿಯಾಗಿ ಜರುಗಿತು.
ಬೆಂಗಳೂರಿನ ಬನಶಂಕರಿ 2 ನೇ ಹಂತದಲ್ಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ‘ ಗಾಯತ್ರಿ ಭವನ’ ದಲ್ಲಿ ನಡೆದ ಈ ಕಾರ್ಯಕ್ರಮವು ಮಾಧ್ಯಮ ಲೋಕದ ದಿಗ್ಗಜರು ಹಾಗೂ ಗಣ್ಯರ ಸಮ್ಮುಖದಲ್ಲಿ ಕಳೆಗಟ್ಟಿತ್ತು.
ಕಾರ್ಯಕ್ರಮದ ಮುಖ್ಯಾಂಶಗಳು
ಸುಮಾರು 483 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ‘ವಿಕಾಸ’ ವೇದಿಕೆಯು ರಾಜ್ಯದಾದ್ಯಂತ ವಿಸ್ತರಿಸಿಕೊಂಡಿದೆ. ಮಾಧ್ಯಮ ಕ್ಷೇತ್ರದಲ್ಲಿ ಶ್ರಮಿಸುತ್ತಿರುವವರ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ವೇದಿಕೆ ನಿರಂತರವಾಗಿ ಶ್ರಮಿಸುತ್ತಿದೆ.
ಉದ್ಘಾಟನೆ
ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಸಗೋಡು ಜಯಸಿಂಹ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾಧ್ಯಮದ ಜವಾಬ್ದಾರಿಗಳ ಬಗ್ಗೆ ಬೆಳಕು ಚೆಲ್ಲಿದರು.
ಅಧ್ಯಕ್ಷತೆ
ವಿಕಾಸದ ಗೌರವಾಧ್ಯಕ್ಷರಾದ ಬಿ. ಎಲ್. ಹನುಮಂತ ರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗಣ್ಯ ಅತಿಥಿಗಳು
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಹಿರಿಯ ಉಪಾಧ್ಯಕ್ಷರಾದ ಆರ್. ಲಕ್ಷ್ಮೀಕಾಂತ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಬಿ. ಎನ್. ಮಹೇಶ್ ಕುಮಾರ್, ಹಾಗೂ ತ್ರಿಮತಸ್ಥ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಡಾ. ಪಂಡಿತ ಪ್ರಸನ್ನಾಚಾರ್ಯ ಕಟ್ಟಿ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಂಸ್ಥೆಯನ್ನು ರಾಜ್ಯಾದ್ಯಂತ ಬಲಪಡಿಸುವ ನಿಟ್ಟಿನಲ್ಲಿ ಈ ಸಭೆಯಲ್ಲಿ ಮಹತ್ವದ ನೇಮಕಾತಿಗಳನ್ನು ಘೋಷಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಾತಿನಿಧ್ಯ
ತುಳುನಾಡು ವಾರ್ತೆ ಬಳಗದ ಡಾ.(H.C.) ಮಂದಾರ ರಾಜೇಶ್ ಭಟ್ ಅವರನ್ನು ವಿಕಾಸ ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆಯ ರಾಜ್ಯ ಉಪಾಧ್ಯಕ್ಷರನ್ನಾಗಿ ಹಾಗೂ ಮೂಡುಬಿದಿರೆ ಪ್ರೆಸ್ ಕ್ಲಬ್ ಉಪಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯ ಹರೀಶ್. ಕೆ.ಆದೂರು ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು .
ಈ ನೇಮಕಾತಿಯ ಮೂಲಕ ಕರಾವಳಿ ಭಾಗದ ಮಾಧ್ಯಮ ಮಿತ್ರರಿಗೆ ಸಂಘಟನೆಯಲ್ಲಿ ಹೆಚ್ಚಿನ ಬಲ ಸಿಕ್ಕಂತಾಗಿದೆ.
ಸನ್ಮಾನ ಮತ್ತು ಅಭಿನಂದನೆ
’ ನಮ್ಮ ಹಿರಿಯರು – ನಮ್ಮ ಹೆಮ್ಮೆ’ ಸರಣಿಯಡಿ ಹಿರಿಯ ಮಾಧ್ಯಮ ಮಿತ್ರರಾದ ಎನ್. ರಾಮರಾವ್, ಜೆ. ನಾಗರಾಜ್, ಮತ್ತು ಜ್ಯೋತಿಶ್ವರ ಅವರಿಗೆ ಗೌರವಪೂರ್ವಕ ಸನ್ಮಾನ ಮಾಡಲಾಯಿತು.
ಇದರೊಂದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ನಗರ ಘಟಕಕ್ಕೆ ನೂತನವಾಗಿ ಆಯ್ಕೆಯಾದ ವಿಕಾಸದ ಸದಸ್ಯರಾದ ಶ್ಯಾಮ್ ಎಸ್, ಪರಿಮಳ ಎಚ್ಎಸ್, ಗೋದಾವರಿ ಡಿ ಎಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯ್ಕೆಯಾದ ಹರೀಶ್ ಕೆ ಆದೂರು ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವೆಂಕಟೇಶ್ ದ್ವಾರಕಾನಾಥ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಎಸ್. ರಘುನಾಥ್ ಅವರು ಕಾರ್ಯಕ್ರಮಕ್ಕೆ ಶುಭ ಕೋರಿದ್ದರು. ಒಟ್ಟಾರೆಯಾಗಿ, ವಿಕಾಸ ವೇದಿಕೆಯ ಈ ಸಭೆಯು ಮಾಧ್ಯಮದವರ ಒಗ್ಗಟ್ಟು ಮತ್ತು ಸೇವಾ ಮನೋಭಾವಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮದ ಸಂಪೂರ್ಣ ನೇತೃತ್ವವನ್ನು ವಿಕಾಸದ ಅಧ್ಯಕ್ಷರಾದ ಶ್ರೀನಾಥ ಜೋಶಿ ಹಾಗೂ ಕಾರ್ಯದರ್ಶಿ ಹನುಮೇಶ ಯಾವಗಲ್ ವಹಿಸಿಕೊಂಡಿದ್ದು ಸಂಪೂರ್ಣ ಯಶಸ್ವಿಯಾಯಿತು.

