ರೆಂಜಾಳದ ವಿದ್ಯಾಪೋಷಕ್ ವಿದ್ಯಾರ್ಥಿನಿ ವಿನುತಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರೂ.1,00,000/- ಪ್ರೋತ್ಸಾಹ ಧನ

0
58

ಕಾರ್ಕಳ ತಾಲೂಕಿನ ರೆಂಜಾಳದ ವಿದ್ಯಾಪೋಷಕ್ ವಿದ್ಯಾರ್ಥಿನಿ ವಿನುತಾ, ದ್ವಿತೀಯ ಪಿಯುಸಿಯಲ್ಲಿ 96% ಪಡೆದಿದ್ದು, ಪ್ರಕೃತ ಈಕೆ ಮಂಗಳೂರಿನ ಶಾರದಾ ನ್ಯಾಚುರೋಪತಿ ಮತ್ತು ಯೋಗ ಮೆಡಿಕಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎನ್ .ವೈ.ಎಸ್ ತರಬೇತಿಗೆ ಸೇರ್ಪಡೆಗೊಂಡಿದ್ದಾಳೆ. ಇವಳಿಗೆ ಇಂದು (15.09.2025) ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಜರಗಿದ ಸಮಾರಂಭದಲ್ಲಿ ರೂ.1,00,000/-ದ ಮೊತ್ತವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರು ನೀಡಿ ಪ್ರೋತ್ಸಾಹಿಸಿದರು. ಮೆಡಿಕಲ್, ಐಐಟಿ, ಎನ್‍ಐಟಿ ಹಾಗೂ ಇಂಜಿನೀಯರಿಂಗ್ ಕೋರ್ಸ್ ಗಳಿಗೆ ದಾಖಲಾತಿ ಪಡೆದ, ರಾಜ್ಯದ ವಸತಿ ಶಾಲೆಯ 15 ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ವಿನುತ ಒಬ್ಬಳಾಗಿದ್ದಾಳೆ. ಯಕ್ಷಗಾನ ಕಲಾರಂಗದ ವತಿಯಿಂದ ರಾಜ್ಯ ಸರ್ಕಾರಕ್ಕೆ ಮತ್ತು ವಿನುತಾಳಿಗೆ ಅಭಿನಂದನೆಗಳು.

LEAVE A REPLY

Please enter your comment!
Please enter your name here