ಕಣ್ಣು ಮುಚ್ಚಿ ಕೂತ ಜನ ಪ್ರತಿನಿಧಿಗಳು, ಆಡಳಿತ ವ್ಯವಸ್ಥೆ
ನಮಗೆ ಅನ್ಯಾಯ ಮಾಡಬೇಡಿ, ದಬ್ಬಾಳಿಕೆ ಮಾಡಬೇಡಿ ಎನ್ನುತ್ತಾ ಸಮಾಜದ ಎದುರು ಕೈ ಚಾಚುತ್ತಿರುವ ಈ ಕುಟುಂಬ ಕಾರ್ಕಳದ ಕುಕ್ಕುಂದೂರುನದ್ದು. ಕಾರ್ಕಳದಲ್ಲಿ ಈ ಕುಟುಂಬ ಇತ್ತೀಚಿಗೆ ಮಾಧ್ಯಮ ಗೋಷ್ಠಿ ಮಾಡಿ ತಮ್ಮ ಅಳಲನ್ನು ತೋಡಿ ಕೊಂಡರು. ಒಂದು ಕುಟುಂಬ ಕುಲಾಲ ಸಮುದಾಯದ ಗುಲಾಬಿ ಮೂಲ್ಯರದ್ದು ಅದರ ಜೊತೆಗೆ ಜಯಂತಿ ಆಚಾರ್ಯ ರ ಮನೆ. ಅಲ್ಲಿನ ಜಮೀನುದಾರ ರೊಬ್ಬರು ಕುಂಬಾರ ಸಮಾಜದ ಹಾಗೂ ವಿಶ್ವ ಕರ್ಮ ಸಮಾಜದ ಮಹಿಳೆಯ ಮನೆಯವರಿಗೆ ಹಕ್ಕು ಪತ್ರ ಸಿಗದಂತೆ ರಾಜಕೀಯ ಪ್ರಭಾವ ಬಳಸಿ ಅಡ್ಡಿ ಪಡಿಸುತ್ತ ಬಂದಿದ್ದಾರೆ.

ಬಹುಷಃ ದೇಶ ಎಷ್ಟು ಮುಂದುವರಿದರು ಈ ಆಸ್ತಿವಂತರ ದೌರ್ಜನ್ಯ, ಬಡ ಜನರ ಮೇಲೆ ದಬ್ಬಾಳಿಕೆ ಇನ್ನೂ ಮುಗಿಯುವಂತೆ ಕಾಣುತ್ತಿಲ್ಲ. ಆ ಮನೆಯವರಿಗೆ ಗೂಂಡಾಗಳ ಮೂಲಕ ಬೆದರಿಕೆ ಹಾಕುವುದು, ಅಲ್ಲಿನ ಜಾಗದಲ್ಲಿ ಇದ್ದ ಸಣ್ಣ ಕೃಷಿ ಹಾಳು ಮಾಡುವುದನ್ನು ಅಲ್ಲಿನ ಜಮೀನುದಾರರು ಮಾಡುತ್ತಿದ್ದಾರೆ. ಮಳೆಗಾಲ ಬಂದಾಗ ಈ ಬಡ ಕುಟುಂಬದ ಮನೆಯ ಸುತ್ತ ದೊಡ್ಡ ಗುಂಡಿ ತೆಗೆದು ಅದರಲ್ಲಿ ನೀರು ನಿಲ್ಲುವ ಹಾಗೆ ಮಾಡಿ ಮನೆಯನ್ನು ಕೆಡವಿ ಹಾಕುವ ಕಾರ್ಯವನ್ನು ಕೂಡಾ ಮಾಡಲಾಗಿತ್ತು.
ಆ ಸಂದರ್ಭದಲ್ಲಿ ಕುಕ್ಕುಂದೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆ ಗುಂಡಿ ಮುಚ್ಚಿದ್ದರು. ಬಳಿಕ ಪೊಲೀಸ್ ಕೇಸು ಆಗಿತ್ತು. ಈಗ ಪುನಃ ದೌರ್ಜನ್ಯ ಆರಂಭ ಆಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕುಂಬಾರ ಸಮುದಾಯದ ಜನ ನಮಗೆ ರಕ್ಷಣೆ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಗುಲಾಬಿ ಮೂಲ್ಯ ಹಾಗೂ ಜಯಂತಿ ಆಚಾರ್ಯ ಕುಟುಂಬ ಕಾಯುತ್ತಿದೆ. ಇಂದಿನ ಆಧುನಿಕ ಕಾಲದಲ್ಲಿ ಕೂಡಾ ಇಂತಹ ದೌರ್ಜನ್ಯ ಆಗುತ್ತಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
.

