ಮಂಗಳೂರು: ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗುತ್ತಿರುವ ‘ಪ್ರಗತಿ ಹಾಗೂ ಸ್ಪೂರ್ತಿ -2025’ ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯಾಭಿವೃದ್ಧಿ ಸನಿವಾಸ ಕಾರ್ಯಾಗಾರದಲ್ಲಿ ತಾರೀಕು 19.07.2025 ರಂದು ಗೌರವ ಆಹ್ವಾನಿತರಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಉನ್ನತ ಅಧಿಕಾರಿಗಳಾದ ಶ್ರೀ ರಾಹುಲ್ ಕುಮಾರ್, ಶ್ರೀ ಅಗ್ನಿವ ಚಕ್ರಬೋರ್ಟಿ, ಶ್ರೀಮತಿ ಸುಜಾತಾ ಕುಮಾರಿ, ವಿದ್ಯಾರ್ಥಿಗಳಿಗೆ ಬ್ಯಾಂಕ್ ಖಾತೆಗಳ ಮಹತ್ವ, ವಿವಿಧ ಬ್ಯಾಂಕ್ ಖಾತೆಗಳು, ಅದರಿಂದ ಸಿಗುವ ಸವಲತ್ತುಗಳು, ವಿಮಾ ಸೌಲಭ್ಯಗಳು, ಶಿಕ್ಷಣ ಸಂಬಂಧಿ ಸಾಲಗಳು, ಮುದ್ರಾ ಸಾಲಗಳು ಮತ್ತು ಸರಕಾರದಿಂದ ಸಿಗುವ ವಿವಿಧ ಯೋಜನೆಗಳ ಅರಿವು ಮೂಡಿಸಿ ಮಾಹಿತಿಯೊಂದಿಗೆ ಮುಕ್ತ ಸಂವಾದವನ್ನು ನಡೆಸಿದರು. ಮಾತ್ರವಲ್ಲದೆ ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿದರು.
ಈ ಸಂದರ್ಭದಲ್ಲಿ ವಿಶ್ರಾಂತ ಬ್ಯಾಂಕ್ ಮ್ಯಾನೇಜರ್ ಅನಂತ ಪ್ರಭು ಮರೋಳಿ, ಮೋಹನ್ ನಾಯಕ್ ಒಡ್ಡೂರು, ರವೀಂದ್ರ ನಾಯಕ್ ಕುಂಟಲ್ಪಾಡಿ, ಗಣೇಶ್ ಪ್ರಭು ಓಮ, ವಿಶ್ವ ಕೊಂಕಣಿ ಕೇಂದ್ರದ ಲಕ್ಷ್ಮಿ ಕಿಣಿ ಮುಂತಾದವರು ಉಪಸ್ಥಿತರಿದ್ದರು. ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಡಿ. ರಮೇಶ ನಾಯಕ್ ಮೈರ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಬಿರಾರ್ಥಿ ರಕ್ಷಾ ಪ್ರಭು ವಂದಿಸಿ, ಡಾ. ವಿಜಯಲಕ್ಷ್ಮಿ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು.