ಕಾರ್ಕಳ : ವಿಶ್ವಕರ್ಮ ಸಹಕಾರ ಬ್ಯಾಂಕ್ ಸ್ವರ್ಣ ಮಹೋತ್ಸವದ ಅಂಗವಾಗಿ 8ನೇ ಸ್ವಚ್ಛತಾ ಕಾರ್ಯಕ್ರಮ ಕಾರ್ಕಳದಲ್ಲಿ ಭಾನುವಾರ ನಡೆಯಿತು.
ಕಾರ್ಕಳದ ವೆಂಕಟರಮಣ ದೇವಸ್ಥಾನದ ಪರಿಸರದಿಂದ ನಗರದ ಬಸ್ ನಿಲ್ದಾಣದ ಪರಿಸರದರವರೆಗೆ ಸ್ವಚ್ಛತೆಯ ಶ್ರಮದಾನ ನಡೆಯಿತು.
ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೋಕೆಸ್ತರ ಕೆ. ಜಯರಾಮ ಪ್ರಭು ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆ ನಿಟ್ಟಿನಲ್ಲಿ ವಿಶ್ವಕರ್ಮ ಬ್ಯಾಂಕ್ ಉತ್ತಮ ಕಾರ್ಯದಲ್ಲಿ ತೊಡಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ರೋಟರಿ ಕ್ಲಬ್ ಕಾರ್ಕಳ ಅಧ್ಯಕ್ಷರಾದ ಕೆ. ನವೀನ್ ಚಂದ್ರ ಶೆಟ್ಟಿ ಅವರು ನಮ್ಮ ಸ್ವಚ್ಛ ಪರಿಸರದ ಬಗ್ಗೆ ಕಾಳಜಿ ವಹಿಸಿ ಬ್ಯಾಂಕ್ ನಡೆಸುವ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದರು.
ರೋಟರಿ ಕ್ಲಬ್ ಕಾರ್ಕಳ ಇದರ ಕಾರ್ಯದರ್ಶಿ ಚೇತನ್ ನಾಯಕ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಕಳ ಪುರಸಭಾ ಸದಸ್ಯರಾದ ಕಾರ್ಕಳ ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷೆ ನಳಿನಿ ವಿಜೇಂದ್ರ ಆಚಾರ್ಯ, ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಅಧ್ಯಕ್ಷ ಗೋಪಾಲ ಅಂಚನ್, ಸ್ಥಾಪಕಧ್ಯಕ್ಷೆ ಜ್ಯೋತಿ ರಮೇಶ್, ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಇದರ ಅಧ್ಯಾಪಕ ಪ್ರದರ್ಶ, ಶಂಕರ್ ಕುಡ್ವ, ಎನ್ಎಸ್ಎಸ್, ಎನ್‌ಸಿಸಿ ಹಾಗೂ ರೇಂಜರ್ಸ್ ಮತ್ತು ರೋವರ್ಸ್ ವಿದ್ಯಾರ್ಥಿಗಳು, ನೀರೆ ಬೈಲೂರು ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಸದಸ್ಯರು, ನಿಂಜೂರು ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಸದಸ್ಯರು, ಕಾರ್ಕಳ ಶ್ರೀಮದ್ ಭುವನೇಂದ್ರ ಹೈಸ್ಕೂಲ್ ಮುಖ್ಯೋಪಾಧ್ಯಾಯ ಆರ್ ನಾರಾಯಣ ಶೆಣೈ, ಕಾರ್ಕಳ ಎಸ್ ವಿಟಿ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಗೀತಾ ಜಿ, ಸ್ವಚ್ಛ ಭಾರತ್ ನ ಪೆಲಿಕ್ಸ್ ಜೋಸೆಫ್, ಕಾರ್ಕಳ ಟೈಗರ್ಸ್ ಸದಸ್ಯರು, ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಕೆ ಹರೀಶ್ ಆಚಾರ್ಯ, ವಿಶ್ವಕರ್ಮ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಜಗದೀಶ್ ಪಡುಪಣಂಬೂರು, ನಿರ್ದೇಶಕರಾದ ಡಿ ಭಾಸ್ಕರ ಆಚಾರ್ಯ, ಬಿಜು, ಭರತ್ ನೀಡ್ಪಲ್ಲಿ, ಬ್ಯಾಂಕಿನ ಸದಸ್ಯರು, ಬ್ಯಾಂಕಿನ ಹಿತೈಷಿಗಳು ಹಾಗೂ ಬ್ಯಾಂಕಿನ ಸಿಬ್ಬಂದಿ ಮಿತ್ರರು ಭಾಗವಹಿಸಿದ್ದರು.

