ವಿಶ್ವಕರ್ಮ ಸಹಕಾರ ಬ್ಯಾಂಕ್ ಸ್ವರ್ಣ ಮಹೋತ್ಸವ – ಕಾರ್ಕಳ ಶಾಖೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

0
95


ನಮ್ಮ ಕಸ, ನಮ್ಮ ಜವಾಬ್ದಾರಿ ನಮ್ಮ ಮೂಲಮಂತ್ರವಾಗಬೇಕು : ಡಾ. ಎಸ್ ಆರ್ ಹರೀಶ್ ಆಚಾರ್ಯ.

ಕಾರ್ಕಳ : ವಿಶ್ವಕರ್ಮ ಸಹಕಾರ ಬ್ಯಾಂಕ್ ಸ್ವರ್ಣ ಮಹೋತ್ಸವದ ಪ್ರಯುಕ್ತ ಸ್ವಚ್ಛ ಪರಿಸರದ ರೂಪಣೆಗೆ ಪ್ರತಿಯೊಬ್ಬ ನಾಗರಿಕ ಭಾಗಿದಾರಿಕೆಯ ಅಗತ್ಯವಿದೆ. ಆದುದರಿಂದ ಸ್ವಚ್ಛತೆಯು ನಮ್ಮ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಬೇಕಾಗಿದೆ. ಹಾಗಾಗಿ ನಮ್ಮ ಕಸ, ನಮ್ಮ ಜವಾಬ್ದಾರಿ ಎಂಬ ಮೂಲಮಂತ್ರವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ವಿಶ್ವಕರ್ಮ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್. ಆರ್. ಹರೀಶ್ ಆಚಾರ್ಯ ಹೇಳಿದರು.
ಅವರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಕಾರ್ಕಳ ಶಾಖೆಯಿಂದ “ಸ್ವಚ್ಛತಾ ಹೀ ಸೇವಾ” ಎಂಬ ಆಶಯದಂತೆ ಭಾನುವಾರ ನಡೆದ ಸ್ವಚ್ಛ ಭಾರತ ಶ್ರಮದಾನ ಕಾರ್ಯಕ್ರಮದ ಲ್ಲಿ ಮಾತನಾಡುತ್ತಿದ್ದರು.
ಯಾವುದೇ ಆರ್ಥಿಕ ಸಂಸ್ಥೆಗೆ ವ್ಯಾವಹಾರಿಕ ಬದ್ಧತೆಯ ಜೊತೆಗೆ ಸಾಮಾಜಿಕ ಜವಾಬ್ದಾರಿ ಕೂಡ ಇರುತ್ತದೆ. ಈ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ವಚ್ಛ ಭಾರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಎಸ್. ಆರ್. ಹರೀಶ್ ಆಚಾರ್ಯ ತಿಳಿಸಿದರು.
ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷರಾದ ಸ್ವಚ್ಛ ಕಾರ್ಕಳದ ಪ್ರಮುಖರಾದ ಪ್ರಕಾಶ್ ರಾವ್ ಮಾತನಾಡಿ ವಿಶ್ವಕರ್ಮ ಬ್ಯಾಂಕ್ ತನ್ನ ಬ್ಯಾಂಕಿಂಗ್ ಚಟುವಟಿಕೆಯ ಜೊತೆಗೆ ಜೊತೆಗೆ ಸ್ವಚ್ಛತೆಯಂತಹ ಪ್ರಮುಖ ಸಾಮಾಜಿಕ ಕಾರ್ಯಕ್ರಮವನ್ನು ಮುಂದಿನ ಹತ್ತು ತಿಂಗಳು ನಿರಂತರ ಕಾರ್ಯಕ್ರಮ ಹಮ್ಮಿಕೊಂಡಿರುವದಕ್ಕೆ ಸಂತಸ ವ್ಯಕ್ತ ಪಡಿಸಿದರು.
ಕಾರ್ಕಳದ ಅನಂತಶಯನ ದೇವಸ್ಥಾನದ ಪರಿಸರದಿಂದ ನಗರದ ಬಸ್ ಸ್ಟ್ಯಾಂಡ್ ಪರಿಸರದರವರೆಗೆ ಸ್ವಚ್ಛತೆಯ ಶ್ರಮದಾನ ಜರುಗಿತು.

ಕಾರ್ಕಳ ಪುರಸಭಾ ಸದಸ್ಯರಾದ ನಳಿನಿ ವಿಜಯೇಂದ್ರ ಆಚಾರ್ಯ, ರೋಟರಿ ಕ್ಲಬ್ ಅಧ್ಯಕ್ಷರಾದ ಸುರೇಂದ್ರ ನಾಯಕ್, ಚಿನ್ನಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರಾದ ಎಂ ರಮೇಶ್ ಆಚಾರ್ಯ, ಲಯನ್ಸ್ ಸಿಟಿ ಸೆಂಟ್ರಲ್ ಸ್ಥಾಪಕ ಅಧ್ಯಕ್ಷರಾದ ಜ್ಯೋತಿ ರಮೇಶ್, ಕಾಳಿಕಾಂಬಾ ದೇವಸ್ಥಾನದ ಮುಕೇಸ್ತರರಾದ ಪಿ. ರವಿ ಆಚಾರ್ಯ, ಸ್ವಚ್ಚ ಬ್ರಿಗೇಡ್ ಕಾರ್ಕಳದ ಹಿರಿಯ ಪ್ರಮುಖರಾದ ಪಿಲಿಕ್ಸ್ ವಾಸ್ ಹಾಗೂ ಸದಸ್ಯರು, ವಕೀಲರ ಸಂಘ ಕಾರ್ಕಳದ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಭುವನೇಂದ್ರ ಕಾಲೇಜಿನ ಪ್ರಾಧ್ಯಾಪಕರಾದ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಶಂಕರ್ ಕುಡ್ವ ಹಾಗೂ ವಿದ್ಯಾರ್ಥಿಗಳು, ಜ್ಯೋತಿ ಯುವಕ ಮಂಡಲದ ಅಧ್ಯಕ್ಷರಾದ ಪ್ರಶಾಂತ್ ಹಾಗೂ ಸಂಸ್ಥೆಯ ಸದಸ್ಯರು, ಸಾಮಾಜಿಕ ಕಾರ್ಯಕರ್ತರಾದ ಹರೀಶ್ ಆಚಾರ್ಯ, ಸತೀಶ್ ಆಚಾರ್ಯ, ಬ್ಯಾಂಕಿನ ನಿರ್ದೇಶಕರಾದ ಬಿ.ಸೀತಾರಾಮ ಆಚಾರ್, ಹರಿಪ್ರಸಾದ್, ವ್ಯವಸ್ಥಾಪಕ ನಿರ್ದೇಶಕರಾದ ವಸಂತ ಅಡ್ಯಂತಾಯ ಹಾಗೂ ಬ್ಯಾಂಕ್ ಸಿಬ್ಬಂದಿಗಳು, ಸಂಘ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here