ಮಾಜಿ ಸಚಿವರುಗಳಾದ ಸಾ.ರಾ. ಮಹೇಶ್ ಮತ್ತು ಕೆ.ಎಸ್. ಪುಟ್ಟರಾಜು ನೇತೃತ್ವದಲ್ಲಿ ಧರ್ಮಸ್ಥಳ ಭೇಟಿ

0
24

ಉಜಿರೆ: ಮಾಜಿ ಸಚಿವರುಗಳಾದ ಸಾ.ರಾ. ಮಹೇಶ್ ಮತ್ತು ಕೆ.ಎಸ್. ಪುಟ್ಟರಾಜು ನೇತೃತ್ವದಲ್ಲಿ ಮಂಡ್ಯ ಹಾಗೂ ಮೈಸೂರಿನಿಂದ ಒಂದೂವರೆ ಸಾವಿರ ಭಕ್ತರು ಮತ್ತು ಅಭಿಮಾನಿಗಳು ಸೋಮವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೇಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಧರ್ಮಸ್ಥಳದ ಘನತೆ, ಗೌರವ ಕಾಪಾಡಲು ತಾವೆಲ್ಲರೂ ಸದಾ ಬದ್ಧರಾಗಿದ್ದೇವೆ ಎಂದು ಅವರು ಭರವಸೆ ನೀಡಿದರು. ಅವರು ದೇವರ ದರ್ಶನ ಮಾಡಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. “ಅನ್ನಪೂರ್ಣ” ಭೋಜನಾಲಯದಲ್ಲಿ ಪ್ರಸಾದ ಸ್ವೀಕರಿಸಿದ ಬಳಿಕ ತಮ್ಮ ಊರಿಗೆ ಮರಳಿದರು.

LEAVE A REPLY

Please enter your comment!
Please enter your name here