ಮಾನ್ಯ ಮುಜುರಾಯಿ ಹಾಗೂ ಸಾರಿಗೆ ಸಚಿವರಾದ ಸನ್ಮಾನ್ಯ ಶ್ರೀ ರಾಮಲಿಂಗಾ ರೆಡ್ಡಿಯವರು13.07.2025) ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ದಸರಾ ಉತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮ ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂಬರುವ ದಸರಾ ಉತ್ಸವ ಸೇರಿದಂತೆ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರಕಾರ ದ ವತಿಯಿಂದ ಸರ್ವ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ವತಿಯಿಂದ ನಾಡೋಜ ಡಾ. ಜಿ. ಶಂಕರ್ ರವರು ಶಾಲು ಹೊದಿಸಿ ಗೌರವಿಸಿದರು.ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಮಾಜಿ ಸಚಿವರುಗಳಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ,ಕಾಂಗ್ರೆಸ್ ಮುಖಂಡರುಗಳಾದ ಪ್ರಸಾದ್ ರಾಜ್ ಕಾಂಚನ್, ಕಾಪು ದಿವಾಕರ್ ಶೆಟ್ಟಿ,ಮಹಾಜನ ಸಂಘದ ಉಪಾಧ್ಯಕ್ಷರಾದ ಮೋಹನ್ ಬೆಂಗ್ರೆ, ಗಿರಿಧರ್ ಸುವರ್ಣ, ಶರಣ್ ಕುಮಾರ್ ಮಟ್ಟು, ವಿನಯ್ ಕರ್ಕೇರ, ಗುಂಡು ಬಿ. ಅಮೀನ್, ರತ್ನಾಕರ್ ಸಾಲ್ಯಾನ್, ಸುಧಾಕರ್ ಕುಂದರ್, ಸುಜಿತ್ ಸಾಲ್ಯಾನ್, ಉಷಾರಾಣಿ ಬೋಳೂರು, ಸುಗುಣ ಕರ್ಕೇರ,ಕಿರಣ್ ಕುಮಾರ್ ಪಿತ್ರೋಡಿ ಜಯಂತ್ ಅಮೀನ್ ಕೋಡಿ,ಶಂಕರ್ ಸಾಲ್ಯಾನ್ ಬಾರ್ಕೂರು ನಾರಾಯಣ ಕರ್ಕೇರ,ರಾಜೇಂದ್ರ ಸುವರ್ಣ ಹಿರಿಯಡ್ಕ, ಮೋಹನ್ ಬಂಗೇರ ಕಾಪು ಸೇರಿದಂತೆ ಆಡಳಿತ ಸಮಿತಿಯ ಸದಸ್ಯರು, ಮಹಿಳಾ ಸದಸ್ಯರು ಉಪಸ್ಥಿತರಿದ್ದರು.