ವಿಟ್ಲಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ವಿಟ್ಲ, ವತಿಯಿಂದ ಸಾರ್ವಜನಿಕ ಬಸ್ಸು ತಂಗುದಾಣ ಲೋಕಾರ್ಪಣೆ

0
95

ಕಲ್ಲಡ್ಕ: ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ಎಂಬಲ್ಲಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ವಿಟ್ಲ, ವತಿಯಿಂದ ಸಾರ್ವಜನಿಕ ಬಸ್ಸು ತಂಗುಧಾಣ ಆದಿತ್ಯವಾರ ಲೋಕಾರ್ಪಣೆ ಮಾಡಲಾಯಿತು.

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ವಿಟ್ಲ ಅಧ್ಯಕ್ಷರಾದ ಜಗನಾಥ್ ಸಾಲಿಯಾನ್ ಲೋಕಾರ್ಪಣೆ ಮಾಡಿ ಮಾತನಾಡಿ ವೀರಕಂಭ ಗ್ರಾಮದ ಮಜಿ ಪ್ರದೇಶದ ಜನರ ಬೇಡಿಕೆಗೆ ಸ್ಪಂದಿಸಿ ಪ್ರಯಾಣಿಕರ ತಂಗುದಾಣ ವನ್ನು ನಿರ್ಮಿಸಿದ್ದು ಇದರ ಉಸ್ತುವಾರಿಯನ್ನು ಈ ಪ್ರದೇಶದ ಜನರೇ ನೋಡಿಕೊಂಡು ಸ್ವಚ್ಛತೆಯನ್ನು ಕಾಪಾಡಿ, ಯೋಗ್ಯವಾಗಿ ಉಪಯೋಗಿಸಿಕೊಂಡು ಸಂರಕ್ಷಣೆ ಮಾಡಿಕೊಂಡು ಬನ್ನಿ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಮನೋರಂಜನ್ ಕಡೆಯೀ,ನಿರ್ದೇಶಕರುಗಳಾದ ದಯಾನಂದ ಆಳ್ವ,, ಕೇಶವ ಮಾಡಧಾರು, ದಿವಾಕರ ವಿಟ್ಲ, ಭಾಸ್ಕರ ಶೆಟ್ಟಿ ಕನ್ಯಾನ, ಪೂವಪ್ಪ ವಿಟ್ಲ, ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಮುರಳಿ ಶ್ಯಾಮ್, ವೀರಕಂಭ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ,ಸದಸ್ಯರಾದ ದಿನೇಶ್ ಪೂಜಾರಿ, ಇಂಜಿನಿಯರ್ ರಾಮಣ್ಣ ಮೂಲ್ಯ, ವೀರಕಂಬ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವೀರಪ್ಪ ಮೂಲ್ಯ, ಕೆ ಎಂ ಎಫ್ ವಿಸ್ತರಣಾಧಿಕಾರಿ ಜಗದೀಶ್,ಹಿರಿಯರಾದ ನಾಗರಾಜ್ ಶಿಲ್ಪಿ, ಸುಂದರ ಮೂಲ್ಯ ಮೈರಾ , ಸಂಜೀವ ಮೂಲ್ಯ ಮಜಿ, ರವೀಂದ್ರ ಮೂಲ್ಯ, ಕೃಷ್ಣ ಮೂಲ್ಯ, ಕೇಶವ ಮೂಲ್ಯ, ಕಾಂತಪ್ಪ ಮೂಲ್ಯ, ನೋಣಯ್ಯ ಎಮ್ ಆರ್, ದೇವಿಕಾ ಮಾತಾಜಿ,ಆಶಾ ಕಾರ್ಯಕರ್ತೆ ಕೋಮಲಾಕ್ಷಿ, ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅತಿಥಿಗಳಿಗೆ ಹೂ ಗಿಡ ನೀಡಿ ಗೌರವಿಸಲಾಯಿತು.
ಅಂಗನವಾಡಿ ಶಿಕ್ಷಕಿ ಶಶಿಕಲಾ ಸ್ವಾಗತಿಸಿ, ಬ್ಯಾಂಕ್ ನಿರ್ದೇಶಕ ವಿಶ್ವನಾಥ ಎಂ ಪ್ರಾಸ್ತಾವಿಕ ನುಡಿಗಳನಾಡಿ, ಸ್ನೇಹ ಸಂಜೀವಿನಿ ವೀರಕಂಭ ಒಕ್ಕೂಟ ಅಧ್ಯಕ್ಷ ಕುಸುಮ ಶೆಟ್ಟಿವಂದಿಸಿದರು.

LEAVE A REPLY

Please enter your comment!
Please enter your name here