ವಿಟ್ಲ : ತತ್ವ ‌ಸ್ಕೂಲ್ ಆಫ್ ಆರ್ಟ್ ಇದರ ಆಕಾರ್‌ ಚಿತ್ರಕಲಾ‌ ಪ್ರದರ್ಶನ – ಉದ್ಘಾಟನಾ ‌ಸಮಾರಂಭ

0
28

ವಿಟ್ಲ : ತತ್ವ ಸ್ಕೂಲ್ ಆಫ್ ಆರ್ಟ್ ಅರ್ಪಿಸಿದ “ಆಕಾರ್ ೩೦೩೬ ವಿಟ್ಲ” ಚಿತ್ರಕಲಾ ಪ್ರದರ್ಶನ ಉದ್ಘಾಟನಾ ಸಮಾರಂಭ ಜ.‌18 ರ ಭಾನುವಾರದಂದು ವಿಟ್ಲ ಪಿಎಂಶ್ರೀ ಸರಕಾರಿ ಪ್ರೌಢಾಶಾಲೆಯ ಪ್ರಾಥಮಿಕ ವಿಭಾಗದಲ್ಲಿ ನಡೆಯಿತು.

ದ.ಕ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಖಂಡಿಗ, ರೋಟರಿ ಕ್ಲಬ್ ವಿಟ್ಲದ ಇದರ ಅಧ್ಯಕ್ಷ RTN ಜೈ ಕಿಶನ್ ವಿಟ್ಲ, ವಿಟ್ಲ ಪಿ.ಎಂ.ಶ್ರೀ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು‌. ಕ್ಯಾನ್ವಸ್‌ಗೆ ಬಣ್ಣ ತುಂಬುವ ಮೂಲಕ ಚಿತ್ರಕಲಾ ಪ್ರದರ್ಶನಕ್ಕೆ ಗಣ್ಯಾತಿಗಣ್ಯರು ಚಾಲನೆ ನೀಡಿದರು.‌ ವಿಟ್ಲ ಪಿ.ಎಂ.ಶ್ರೀ ಸರಕಾರಿ ಪ್ರೌಢಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿಶಂಕರ ಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಭಾ ಕಾರ್ಯಕ್ರಮದಲ್ಲಿ ಚಿತ್ರಕಲಾ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು. ತತ್ವ ಸ್ಕೂಲ್ ಆಫ್ ಆರ್ಟ್‌ನ ವಿದ್ಯಾರ್ಥಿ ಸುನಿಲ್ ಕುಮಾರ್ ಅವರಿಗೆ ಕಲಾಕಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತತ್ವ ಸ್ಕೂಲ್ ಆಫ್ ಆರ್ಟ್‌ನ ಪ್ರಾಂಶುಪಾಲೆ ರಶ್ಮಿ ಶೆಟ್ಟಿ ಪ್ರಸ್ತಾವಿಕಗೈದರು. ವಿದ್ಯಾರ್ಥಿನಿ ಪ್ರಣಮ್ಯ ಯು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ತನುಜಾ ಎಸ್ ಪೂಜಾರಿ, ಚಾರಿತ್ರ್ಯ ಪೂಜಾರಿ ಬಿ ಕಾರ್ಯಕ್ರಮ ನಿರೂಪಿಸಿದರು‌.‌ ವಿದ್ಯಾರ್ಥಿಗಳಾದ ಅವನಿ ಹೆಚ್ ಭಟ್, ಎನ್ ನವ್ಯಾ ‌ಭಟ್ ದಯಾನಂದ ಅನಿಸಿಕೆ ವ್ಯಕ್ತಪಡಿಸಿದರು. ನಿರ್ದೇಶಕ ಟೀಲಾಕ್ಷ ವಂದಿಸಿದರು.‌‌ ಶಿಕ್ಷಕಿಯರಾದ ಕೀರ್ತನಾ, ಜಯಲಕ್ಷ್ಮಿ ಟಿ ಸಭಾ ಕಾರ್ಯಕ್ರಮದಲ್ಲಿ ಸಹಕರಿಸಿದರು.

ಅನಘಾ ಭಟ್, ಅನ್ವಿ ಕೆ, ಪ್ರಾಪ್ತಿ ಡಿ ಎನ್, ಪುಣ್ಯಪ್ರಿಯ ಪ್ರಾರ್ಥಿಸಿದರು. ಧಾತ್ರಿ ಹೆಚ್, ಆಯುಷ್, ಶ್ರೀ ಹರಿ,‌ ಸಿ ಪ್ರಣ್ವಿ ಕಾಮತ್ ಜ್ಯೋತಿರ್ಗೀತೆ ಹಾಡಿದರು.‌

ಚಿತ್ರಕಲಾ ಪ್ರದರ್ಶನದ ವಿಶೇಷತೆಗಳೇನು?

ತತ್ವ ಸ್ಕೂಲ್ ಆಫ್ ಆರ್ಟ್ ವಿಟ್ಲದಲ್ಲಿ ಕಳೆದ 7 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಸ್ಥಳೀಯ ಮಕ್ಕಳಿಗೆ, ಚಿತ್ರಕಲಾ ಆಸಕ್ತರಿಗೆ ಚಿತ್ರಕಲೆಯ ವಿವಿಧ ಪ್ರಕಾರಗಳ ತರಬೇತಿಯನ್ನು ನೀಡಿಕೊಂಡು ಬರುತ್ತಿದೆ. ಇಲ್ಲಿನ ವಿದ್ಯಾರ್ಥಿಗಳ ಒಟ್ಟು ಸೇರುವಿಕೆಯಲ್ಲಿ “ಆಕಾರ್” ಚಿತ್ರಕಲಾ ಪ್ರದರ್ಶನ ನಡೆಯುತ್ತಿದೆ‌. ತರಗತಿಯ 81 ವಿದ್ಯಾರ್ಥಿಗಳ ಆಯ್ದ ಕಲಾಕುಂಚವನ್ನು ಪ್ರದರ್ಶಿಸಲಾಗುತ್ತಿದೆ.

ಜ. 18 ರಿಂದ ಜ 20 ವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ತತ್ವ ಸ್ಕೂಲ್ ಆಫ್ ಆರ್ಟ್ ಇಲ್ಲಿನ ವಿದ್ಯಾರ್ಥಿಗಳು (ಶಾಲಾ- ಕಾಲೇಜು ವಿದ್ಯಾರ್ಥಿಗಳು, ವಿವಿಧ ವಲಯದಲ್ಲಿನ ನೌಕರರು, ಆಸಕ್ತ‌ ಕಲಾ‌ ವಿದ್ಯಾರ್ಥಿಗಳು) ರಚಿಸಿದ ವೈವಿಧ್ಯಮ ಚಿತ್ರಗಳನ್ನು ಕಣ್ಣುಂಬಿಕೊಳ್ಳಬಹುದಾಗಿದೆ. ಆಯಿಲ್ ಪೆಸ್ಟಲ್, ಪೆನ್ಸಿಲ್ ಸ್ಕೆಚ್, ಪೆನ್ ಆರ್ಟ್, ಆಕ್ರಲಿಕ್, ಕ್ಯಾನ್ವಸ್, ಪೋಸ್ಟರ್ ಕಲರ್, ಜಲವರ್ಣ ಹೀಗೆ ವಿವಿಧ ಪ್ರಕಾರಗಳ ಚಿತ್ರಕಲೆಯನ್ನು ವೀಕ್ಷಿಸಬಹುದು. ಗ್ರಾಮೀಣ ಮಟ್ಟದಲ್ಲಿ ಇಷ್ಟೊಂದು ಸಮಗ್ರ ಚಿತ್ರಕಲಾ ಪ್ರದರ್ಶನ ಇದೇ ಮೊದಲನೆಯದಾಗಿದೆ.

LEAVE A REPLY

Please enter your comment!
Please enter your name here