ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ ) ವಿಟ್ಲ ಇದರ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟಗಳಾದ ವಿಟ್ಲ ಎ, ವಿಟ್ಲ ಬಿ, ಒಕ್ಕೆತ್ತೂರು. ಇದರ ಇಪ್ಪತ್ತನೇ ವಾರ್ಷಿಕೋತ್ಸವ ಕಾರ್ಯಕ್ರಮ ವಿಟ್ಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ವರದಿ ವರ್ಷದ 501 ನೇ ಸ್ವ ಸಹಾಯ ಸಂಘದ ಸದಸ್ಯರುಗಳನ್ನು ಸೇರ್ಪಡೆ ಮಾಡುವ ಮೂಲಕ ವಿಶೇಷವಾಗಿ ಜರಗಿತು/

ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ ವಿಟ್ಲ ತಾಲೂಕಿಗೆ 501 ನೇ ಪ್ರಗತಿ ಬಂದು ಸ್ವಸಹಾಯ ಸಂಘದ ಸದಸ್ಯರನ್ನು ಸೇರ್ಪಡೆಗೊಳಿಸಿ, ಯೋಜನೆಯು ನಡೆದು ಬಂದ ಹಾದಿಯನ್ನು ವಿವರಿಸಿ ವೀರೇಂದ್ರ ಹೆಗ್ಡೆಯವರು ಗ್ರಾಮೀಣ ಪ್ರದೇಶದ ಜನರಿಗೆ, ಕೃಷಿ ಕಾರ್ಮಿಕರ ಅಭಿವೃದ್ಧಿಗೆ, ಮಕ್ಕಳ ಶಿಕ್ಷಣ, ಸಮುದಾಯದ ಅಭಿವೃದ್ಧಿ, ಸ್ವಚ್ಛತೆ,ಸ್ವ ಉದ್ಯೋಗದ ಹಾಗೂ ಶೌರ್ಯ ವೀಪತು ನಿರ್ವಹಣಾ ಘಟಕಗಳ ರಚನೆ ಬಗ್ಗೆ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಹಾಗೂ ಒಕ್ಕೂಟ ನಿರ್ವಹಣೆ ಪದಾಧಿಕಾರಿಗಳ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಕೃಷ್ಣಯ್ಯ ಬಲ್ಲಾಳ್ ವಹಿಸಿದ್ದರು.
ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಅಧಿಕಾರಿ ರಾಧಾಕೃಷ್ಣ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆ ಮಾಡುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅದರ ಸದುಪಯೋಗ ಪಡೆಕೊಳ್ಳುವ ಬಗ್ಗೆ ತಿಳಿಸಿ, ಯೋಜನೆಯಿಂದ ಪಡೆಕೊಂಡ ಸೌಲಭ್ಯಗಳ ಬಗ್ಗೆ ತಿಳಿಸಿದರು
ಕಾರ್ಯಕ್ರಮದಲ್ಲಿ ವಿಠಲ ಪ್ರೌಢಶಾಲೆ ವಿಭಾಗದ ಉಪ ಪ್ರಾಂಶುಪಾಲ ಕಿರಣ್ ಕುಮಾರ್,, ಜನಜಾಗೃತಿ ವೇದಿಕೆ ವಿಟ್ಲವಲಯ ಸದಸ್ಯ ನಟೇಶ್ ವಿಟ್ಲ, ವಿಟ್ಲ ಪದವಿಪೂರ್ವ ಕಾಲೇಜ್ ಉಪನ್ಯಾಸಕ ಅಣ್ಣಪ್ಪ ಶಾಸ್ತಾನ, ಮೋನಪ್ಪ ಗೌಡ ಶಿವಾಜಿನಗರ, ಯೋಜನಾಧಿಕಾರಿ ಸುರೇಶ್ ಗೌಡ, ಪ್ರಗತಿ ಬಂದು ಸ್ವಸಹ ಸಂಘಗಳು ಒಕ್ಕೂಟ ವಿಟ್ಲ ಅಧ್ಯಕ್ಷ ಪ್ರಮೀಳಾ, ಶೌರ್ಯ ವಿಪತ್ತು ಘಟಕದ ಅಧ್ಯಕ್ಷ ಚಂದ್ರಹಾಸ,
ಒಕ್ಕೂಟದ ಅಧ್ಯಕ್ಷರುಗಳಾದ ವಿಶ್ವನಾಥ್ ವಿ, ಪ್ರವೀಣ್ ಕುಮಾರ್, ಶ್ರೀಮತಿ ಸವಿತಾ, ಗೋಪಾಲ ನೆಕ್ಕರೆ ಕಾಡು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉತ್ತಮ ಪ್ರಗತಿ ಬಂದು ಸಂಘ, ಯೋಜನೆಯ ಹಿರಿಯ ಫಲಾನುಭವಿಗಳು, ಎಸ್ ಎಸ್ ಎಲ್ ಸಿ ಮತ್ತು ಟಿ ಯು ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು,ಒಕ್ಕೂಟಗಳ ನಿಕಟ ಪೂರ್ವ ಅಧ್ಯಕ್ಷರುಗಳನ್ನು ಗೌರವಿಸಲಾಯಿತು.
ವಿಟ್ಲ ವಲಯದ ಮೇಲ್ವಿಚಾರಕರಾದ ಜಗದೀಶ್ ಪೂಜಾರಿ ಸ್ವಾಗತಿಸಿ, ಜನಾರ್ದನ ಪದ್ಮಶಾಲಿ ಧನ್ಯವಾದ ವಂದಿಸಿ,. ಕೈರೊನ್ನಿಸ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು

