“ವಿವೇಕಾನಂದರ ಚಿಂತನೆ ಯುವಕರನ್ನು ಜಾಗೃತಗೊಳಿಸುತ್ತದೆ”: ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್

0
32


ವಿವೇಕವಾಣಿ ಸರಣಿಉಪನ್ಯಾಸಕಾರ್ಯಕ್ರಮದನಲ್ವತ್ತೇಳನೇ ಉಪನ್ಯಾಸ

ಸ್ವಾಮಿ ವಿವೇಕಾನಂದರು ಯುವಕರನ್ನು ದೇಶದ ನಿಜವಾದ ಶಕ್ತಿ ಎಂದು ಕರೆದು, ಅವರಿಗೆ ಆತ್ಮಶ್ರದ್ಧೆ ಎಂಬ ಅಮೋಘ ಶಸ್ತ್ರವನ್ನು ನೀಡಿದ್ದಾರೆ. ಅವರು ಬೋಧಿಸಿದಂತೆ, “ನೀನು ದೇವನ ಸ್ವರೂಪ, ನಿನ್ನೊಳಗೇ ಅನಂತ ಶಕ್ತಿ ಇದೆ” ಎಂಬ ನಂಬಿಕೆಯನ್ನು ಪ್ರತಿಯೊಬ್ಬ ಯುವಕನ ಮನಸ್ಸಿನಲ್ಲಿ ಬೆಳೆಸಿದವರು. ಭಯ, ಅನುಮಾನ, ಹತಾಶೆ– ಈ ಎಲ್ಲವುಗಳಿಂದ ಯುವಕರು ಅಸ್ತವ್ಯಸ್ತರಾಗುತ್ತಿರುವ ಈ ಸಮಯದಲ್ಲಿ, ವಿವೇಕಾನಂದರ ಚಿಂತನೆ ದಿಟ್ಟತನವಲ್ಲದೆ ಬೇರೇನಲ್ಲ. ಅವರು ಹೇಳಿದಂತೆ, “ಭಯವೇ ಪಾಪ”. ನಮ್ಮ ಮನಸ್ಸು ಭಯವನ್ನು ಜಯಿಸಿದಾಗಲೇ ದಿಟ್ಟತನಕ್ಕೆ ಪೂರ್ತಿಅರ್ಥ ಸಿಗುತ್ತದೆ.
ದಿಟ್ಟತನ ಎನ್ನುವುದು ಗರ್ಜಿಸುವುದಲ್ಲ, ಬದಲಾಗಿ ಮೌನವಾದ ಧೈರ್ಯ, ನಂಬಿಕೆ, ಸಾಧನೆ ಮಾಡುವ ಶಕ್ತಿ. ಇಂದಿನ ಯುವಕರಿಗೆ ಬೇಕಾಗಿರುವುದು ಸಾಕಷ್ಟು ಅಂಕಗಳು, ಸೆಲ್ಫಿಗಳು ಅಥವಾ ಫಾಲೋವರ್ಸ್ಗಳು. ಆದರೆ ಬದುಕಿನಲ್ಲಿ ಬೇಕಾಗಿರುವುದು ಮೌಲ್ಯಗಳು. ಅದಕ್ಕೆ ಪ್ರೇರಣೆ ವಿವೇಕಾನಂದರು. ಅವರು ಧರ್ಮವನ್ನು ಬೋಧಿಸಿದಾಗ, ಅದು ಯಾವುದೇ ನಿರ್ದಿಷ್ಟ ಆಚರಣೆಗಳ ಕುರಿತಲ್ಲ–ಧರ್ಮಎಂದರೆ ನನ್ನೊಳಗಿನ ಶಕ್ತಿ, ನನ್ನೊಳಗಿನ ಶಾಂತಿ, ನನ್ನೊಳಗಿನ ಸೇವಾಭಾವನೆ. ಅವರು ತಿಳಿಸಿದಂತೆ, “ದೇವರನ್ನು ದೇವಸ್ಥಾನದಲ್ಲಿ ಹುಡುಕಬೇಡ; ಬಡವರ ಸೇವೆಯಲ್ಲಿ ನೋಡು.”
ಸ್ವಾಮಿ ವಿವೇಕಾನಂದರು ಸ್ವಾವಲಂಬಿ ಭಾರತದ ಕನಸುಗಳನ್ನು ಬಿತ್ತಿದವರು. ಅವರು ಇಂದಿಗೂ ನಮ್ಮ ಕನಸುಗಳ ಮಾರ್ಗದರ್ಶಕರಾಗಿದ್ದಾರೆ. ಅವರು ಬಿತ್ತಿದ ಪ್ರೇರಣೆಯ ಬೀಜವನ್ನು ನಾವು ಇಂದು ಬೆಳೆಸಿದರೆ –ನಾಳೆಯ ಭಾರತ ದಿಟ್ಟ ಮನಸ್ಸುಗಳ ತೋಟವಾಗಿರುತ್ತದೆ. ಎಂದು ಯುವ ಲೇಖಕಿ ಮತ್ತು ವಾಗ್ಮಿಯಾದರೆ ಶೆಲ್ ಬ್ರೆಟ್ನಿ ಫೆರ್ನಾಂಡಿಸ್‌ ಅವರು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೇಳನೇ ಉಪನ್ಯಾಸದಲ್ಲಿ”ದಿಟ್ಟ ಮನಸ್ಸುಗಳ ನಿರ್ಮಾಣ– ಇಂದಿನ ಯುವಕರಿಗಾಗಿ ಸ್ವಾಮಿ ವಿವೇಕಾನಂದರ ಚಿಂತನೆ”ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಈ ಕಾರ್ಯಕ್ರಮವು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು (ಸ್ವಾಯತ್ತ),ಇಲ್ಲಿ ಜರುಗಿತು.

ಈ ಸಂದರ್ಭದಲ್ಲಿಸೇಂಟ್ ಅಲೋಶಿಯಸ್ ಕಾಲೇಜು (ಸ್ವಾಯತ್ತ),ಇಲ್ಲಿನ ರಿಜಿಸ್ಟ್ರಾರ್‌ರಾದ ಡಾ. ಅಲ್ವಿನ್‌ಡಿಸಾ ,ಹಾಗೂ ಕಾರ್ಯಕ್ರಮ ಸಂಯೋಜಕರಾದ, ಡಾ. ಅಲ್ವಿನ್ ಮಿಸ್ಕ್ವಿತ್ ಹಾಗೂ ಉಪನ್ಯಾಸಕರು ಮತ್ತುಎನ್ ಸಿ ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ಸೇಂಟ್ ಅಲೋಶಿಯಸ್ ಕಾಲೇಜು (ಸ್ವಾಯತ್ತ),ಇಲ್ಲಿನ ಎನ್ ಸಿ ಸಿ ವಿದ್ಯಾರ್ಥಿನಿಯಾದ ಜಿಸೆಲ್ ವಾಸ್‌ ವಂದಿಸಿದರು. ವಿದ್ಯಾರ್ಥಿನಿಯಾದ ಏಂಜೆಲ್ ಫೆರ್ನಾಂಡಿಸ್‌ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here