ಪಡುಬಿದ್ರಿ :- “ಸಂಗೀತವು ವಿಶ್ವವ್ಯಾಪಿ ಭಾಷೆ , ಸಂಗೀತ ಪ್ರತಿಭೆ ಎಂದರೆ ಕೇವಲ ಹಾಡುವುದಲ್ಲ , ಅದು ಶಬ್ದಗಳ ಸೂಕ್ಷ್ಮತೆಯನ್ನು ಗ್ರಹಿಸುವ ರಾಗ- ಲಯಗಳನ್ನು ಸರಿಯಾಗಿ ಆಳವಡಿಸಿ ಕೊಳ್ಳುವ ಜನ್ಮಜಾತ ಕೌಶಲ್ಯ ವಾಗಿದೆ , ಇದು ಕೆಲವರಿಗೆ ಹುಟ್ಟಿನಿಂದಲೇ ಬಂದರೇ ಇನ್ನು ಕೆಲವರಲ್ಲಿ ತೀವ್ರ ಆಸಕ್ತಿಯಿಂದ ಬೆಳೆಯುತಿದೆ. ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದೆ” ಎಂದು ಓಂಕಾರ ಕಾಸ್ಟೋಮ್ಸ್ ಮತ್ತು ಕಲಾ ಸಂಗಮದ ಆಡಳಿತ ನಿರ್ದೇಶಕಿ ಗೀತಾ ಅರುಣ್ ಹೇಳಿದರು. ಅವರು ಪಡುಬಿದ್ರಿ ಬಂಟರ ಭವನದಲ್ಲಿ ಜರಗಲಿರುವ ಮೂರು ದಿನಗಳ ಬೃಹತ್ ಆಹಾರ ಮತ್ತು ಸ್ವದೇಶಿ ಉತ್ಪನ್ನಗಳ ಮಾರಾಟ ಮೇಳದ ಅಂಗವಾಗಿ ಮಾರ್ಚ್ 29 ರಂದು ಪಡುಬಿದ್ರಿ ಬಂಟರ ಭವನದಲ್ಲಿ ನಡೆಯುವ ವಾಯ್ಸ್ ಆಫ್ ಪಡುಬಿದ್ರಿ -2026 ಕರೋಕೆ ಗಾಯನ ಸ್ಪರ್ಧೆಯ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ತುಳುನಾಡ ಕಲಾವಿದರು ಸಂಸ್ಥೆಯ ಅಧ್ಯಕ್ಷ ಸಂತೋಷ್ ಪಡುಬಿದ್ರಿ , ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿಯ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ ಹೆಜಮಾಡಿ, ಸಾಹಿತಿ ಚಿತ್ರಕಲಾವಿದ ಸುರೇಶ್ ಪಡುಬಿದ್ರಿ, ರಿದಮ್ ಸಂಗೀತ ಕಲಾವಿದ ದಿನೇಶ್ ಪಡುಬಿದ್ರಿ, ಸೌಮಿಕ್ ಶ್ರೀಯಾನ್, ಶಶಾಂಕ್ ಸುವರ್ಣ, ರೌನಕ್ ಪುತ್ರನ್, ಕರಣ್ ಪೂಜಾರಿ ಉಪಸ್ಥಿತರಿದ್ದರು.

