‘ವಾಗ್ಮಿ 2025’ – ಆನ್ ಲೈನ್ ಕನ್ನಡ ಭಾಷಣ ಸ್ಪರ್ಧೆ

0
60

ಬೈಕಾಡಿ ಪ್ರತಿಷ್ಠಾನವು ಪೂಜ್ಯ ಬೈಕಾಡಿ ಜನಾರ್ದನ ಆಚಾರ್ ರವರ ಬದುಕಿನ ಭಾವ ಮತ್ತು ಭಾಗವಾಗಿದ್ದ ‘ಭಾಷಣ ಕಲೆ’ಯ ಉತ್ತೇಜನಕ್ಕಾಗಿ ‘ವಾಗ್ಮಿ 2025’ ಶೀರ್ಷಿಕೆಯೊಂದಿಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಗೌರವಪೂರ್ವಕ ವಿನಂತಿ.

ವಿಭಾಗಗಳು ಮತ್ತು ಸ್ಪರ್ಧಾ ವಿಷಯ
ತರುಣ ವಿಭಾಗ (13ರಿಂದ 18 ವರ್ಷ) – ನಿಮ್ಮ ಭವಿಷ್ಯದ ವೃತ್ತಿ? ಅದರಿಂದ ಸಮಾಜಕ್ಕೇನು ಕೊಡುಗೆ?
ಯುವ ವಿಭಾಗ (19ರಿಂದ 25 ವರ್ಷ) – ಜನನಾಯಕನಾಗಿ ದೇಶದ ಅಭಿವೃದ್ಧಿಗೆ ನಿಮ್ಮ ಕೊಡುಗೆ
ಸಾರ್ವಜನಿಕ ವಿಭಾಗ (25ವರ್ಷಕ್ಕಿಂತ ಮೇಲ್ಪಟ್ಟವರಿಗೆ) – ಜೀವನದಲ್ಲಿ ಕಲೆಯ ಮಹತ್ವ

ಸಾಮಾನ್ಯ ನಿಯಮಗಳು
‘ವಾಗ್ಮಿ 2025’ ಒಂದು ಆನ್‌ಲೈನ್ ಕನ್ನಡ ಭಾಷಣ ಸ್ಪರ್ಧೆಯಾಗಿದ್ದು 3 ವಿಭಾಗಗಳನ್ನು ಒಳಗೊಂಡಿರುತ್ತದೆ.
ಎಲ್ಲಾ ಸ್ಪರ್ಧಾಳುಗಳು 15.12.2025ರ ಒಳಗಾಗಿ ತಮ್ಮ ಭಾಷಣವನ್ನು 4 ನಿಮಿಷಗಳಿಗೆ ಮೀರದಂತೆ ವೀಡಿಯೋ ರೆಕಾರ್ಡ್ ಮಾಡಿ 9886507605 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸತಕ್ಕದ್ದು.
ಕಳುಹಿಸಿದ ವೀಡಿಯೋ ರೆಕಾರ್ಡಿಂಗ್‌ನ್ನು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಉಪಯೋಗಿಸುವ ಎಲ್ಲಾ ಹಕ್ಕನ್ನು ಬೈಕಾಡಿ ಪ್ರತಿಷ್ಠಾನ (ರಿ.) ಕಾಯ್ದಿರಿಸಿಕೊಂಡಿದೆ.
ವಿಷಯ, ಶೈಲಿ, ಪ್ರಸ್ತುತಿ, ಹಾವಭಾವ, ಸಮಗ್ರತೆ – ಈ ಅಂಶಗಳನ್ನು ಪರಿಗಣಿಸಲಾಗುವುದು.
ಓದಿ ಹೇಳುವ ಭಾಷಣಗಳನ್ನು ಪರಿಗಣಿಸಲಾಗುವುದಿಲ್ಲ.
ಪ್ರಪಂಚದ ಯಾವುದೇ ಮೂಲೆಯಿಂದ ಸ್ಪರ್ಧಾಳುಗಳು ಪಾಲ್ಗೊಳ್ಳಬಹುದು.
ಸ್ಪರ್ಧೆ ನಡೆಯುವ ಸಂದರ್ಭದಲ್ಲಿ ಅಗತ್ಯ ಬಿದ್ದಾಗ ಸ್ಪರ್ಧಾಳುಗಳ ವಯಸ್ಸನ್ನು ದೃಢೀಕರಿಸಲು ತಕ್ಕುದಾದ ದಾಖಲೆಗಳನ್ನು ಒದಗಿಸತಕ್ಕದ್ದು.
ಪ್ರತೀ ವಿಭಾಗದಲ್ಲಿ ತಲಾ 3 ಬಹುಮಾನಗಳಿರುತ್ತವೆ. ಪ್ರಥಮ: ರೂ. 2000/- ಮತ್ತು ಇ-ಸರ್ಟಿಫಿಕೇಟ್, ದ್ವಿತೀಯ: ರೂ. 1000/- ಮತ್ತು ಇ-ಸರ್ಟಿಫಿಕೇಟ್, ತೃತೀಯ: ರೂ. 500/- ಮತ್ತು ಇ-ಸರ್ಟಿಫಿಕೇಟ್
ನಿಯಮಗಳ ಪರಿಪಾಲನೆಯ ಕೊರತೆ ಕಂಡುಬಂದಲ್ಲಿ ಸ್ಪರ್ಧಾಳುಗಳ ಭಾಗವಹಿಸುವಿಕೆಯನ್ನು ಅಮಾನ್ಯಗೊಳಿಸಲಾಗುವುದು.
ಅರ್ಹ ಮತ್ತು ಅನುಭವಿ ನಿರ್ಣಾಯಕರಿಂದ ಪ್ರತೀ ಸ್ಪರ್ಧಾಳುಗಳ ಮೌಲ್ಯಮಾಪನ ಮಾಡಲಾಗುವುದು.
ಬೈಕಾಡಿ ಪ್ರತಿಷ್ಠಾನ (ರಿ.) ಹಾಗೂ ನಿರ್ಣಾಯಕರ ತೀರ್ಪು ಅಂತಿಮ.

ವೀಡಿಯೋ ಕಳುಹಿಸುವಾಗ ಎಲ್ಲಾ ಸ್ಪರ್ಧಾಳುಗಳು ಕಡ್ಡಾಯವಾಗಿ ತಾವು ಭಾಗವಹಿಸುತ್ತಿರುವ ವಿಭಾಗ, ಹುಟ್ಟಿದ ದಿನಾಂಕ, ಕಲಿಯುತ್ತಿರುವ ಶಾಲೆ, ತರಗತಿ, ಕಾಲೇಜು/ಉದ್ಯೋಗ,  ಮಾಡುತ್ತಿರುವ/ಮಾಡುತ್ತಿದ್ದ ಉದ್ಯೋಗ, ಸಂಪರ್ಕ ಸಂಖ್ಯೆ ಹಾಗೂ ಸಂಪೂರ್ಣ ವಿಳಾಸವನ್ನು ನಮೂದಿಸತಕ್ಕದ್ದು.

‘ಕಥಾನಕ 2025’ – ಮಕ್ಕಳಿಗಾಗಿ ಆನ್ ಲೈನ್ ಕನ್ನಡ ಕಥಾ ಸ್ಪರ್ಧೆ

ಬೈಕಾಡಿ ಪ್ರತಿಷ್ಠಾನವು ಪುಟಾಣಿಗಳ ಸಂವಹನಶೀಲತೆಯ ಉತ್ತೇಜನಕ್ಕಾಗಿ ‘ಕಥಾನಕ 2025’ ಶೀರ್ಷಿಕೆಯೊಂದಿಗೆ ಕಥೆ ಹೇಳುವ ಸ್ಪರ್ಧೆಯನ್ನು ಮಕ್ಕಳಿಗೋಸ್ಕರ ಏರ್ಪಡಿಸುತ್ತಿದೆ.

ವಿಷಯ: ಕಾಡಿನ ಕಥೆಗಳು ಭಾಷೆ: ಕನ್ನಡ

ವಿಭಾಗಗಳು :
ವಿಭಾಗ 1: 3ರಿಂದ 5 ವರ್ಷ
ವಿಭಾಗ 2: 5ರಿಂದ 9 ವರ್ಷ
ವಿಭಾಗ 3: 9ರಿಂದ 13 ವರ್ಷ

ಸಾಮಾನ್ಯ ನಿಯಮಗಳು
‘ಕಥಾನಕ 2025’ – ಒಂದು ಆನ್ಲೈನ್ ಕಥೆ ಹೇಳುವ ಸ್ಪರ್ಧೆಯಾಗಿದ್ದು 3 ವಿಭಾಗಗಳನ್ನು ಒಳಗೊಂಡಿರುತ್ತದೆ.
ಎಲ್ಲಾ ಸ್ಪರ್ಧಾಳುಗಳು 15.12.2025ರ ಒಳಗಾಗಿ 4 ನಿಮಿಷಗಳಿಗೆ ಮೀರದಂತೆ ವೀಡಿಯೋ ರೆಕಾರ್ಡ್ ಮಾಡಿ 9886507605 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸತಕ್ಕದ್ದು.
ಕಳುಹಿಸಿದ ವೀಡಿಯೋ ರೆಕಾರ್ಡಿಂಗನ್ನು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಉಪಯೋಗಿಸುವ ಎಲ್ಲಾ ಹಕ್ಕನ್ನು ಬೈಕಾಡಿ ಪ್ರತಿಷ್ಠಾನ (ರಿ.) ಕಾಯ್ದಿರಿಸಿಕೊಂಡಿದೆ.
ಪ್ರಪಂಚದ ಯಾವುದೇ ಮೂಲೆಯಿಂದ ಸ್ಪರ್ಧಾಳುಗಳು ಪಾಲ್ಗೊಳ್ಳಬಹುದು.
ಸ್ಪರ್ಧೆ ನಡೆಯುವ ಸಂದರ್ಭದಲ್ಲಿ ಅಗತ್ಯ ಬಿದ್ದಾಗ ಸ್ಪರ್ಧಾಳುಗಳ ವಯಸ್ಸನ್ನು ದೃಢೀಕರಿಸಲು ತಕ್ಕುದಾದ ದಾಖಲೆಗಳನ್ನು ಒದಗಿಸತಕ್ಕದ್ದು.
ಪ್ರತೀ ವಿಭಾಗದಲ್ಲಿ ತಲಾ 3 ಬಹುಮಾನಗಳಿರುತ್ತವೆ. ಪ್ರಥಮ: ರೂ. 2000/- ಮತ್ತು ಇ-ಸರ್ಟಿಫಿಕೇಟ್, ದ್ವಿತೀಯ: ರೂ. 1000/- ಮತ್ತು ಇ-ಸರ್ಟಿಫಿಕೇಟ್, ತೃತೀಯ: ರೂ. 500/- ಮತ್ತು ಇ-ಸರ್ಟಿಫಿಕೇಟ್
ನಿಯಮಗಳ ಪರಿಪಾಲನೆಯ ಕೊರತೆ ಕಂಡುಬಂದಲ್ಲಿ ಸ್ಪರ್ಧಾಳುಗಳ ಭಾಗವಹಿಸುವಿಕೆಯನ್ನು ಅಮಾನ್ಯಗೊಳಿಸಲಾಗುವುದು.
ಅರ್ಹ ಮತ್ತು ಅನುಭವಿ ನಿರ್ಣಾಯಕರಿಂದ ಸ್ಪರ್ಧಾಳುಗಳ ಮೌಲ್ಯಮಾಪನ ಮಾಡಲಾಗುವುದು.
ಬೈಕಾಡಿ ಪ್ರತಿಷ್ಠಾನ (ರಿ.) ಹಾಗೂ ನಿರ್ಣಾಯಕರ ತೀರ್ಪು ಅಂತಿಮ.

LEAVE A REPLY

Please enter your comment!
Please enter your name here