ಅರುಣೋದಯ ವಿಶೇಷ ಶಾಲೆಗೆ ನೀರಿನ ಟ್ಯಾಂಕ್ ಕೊಡುಗೆ

0
14

ಕಾರ್ಕಳ :ಜೆ ಸಿ ಐ ಕಾರ್ಕಳ ಮತ್ತು ಬಂಡಿ ಮಠ ಫೌಂಡೇಶನ್ ಕಾರ್ಕಳ ಇದರ ಸಹಭಾಗಿತ್ವದಲ್ಲಿ ಕಾರ್ಕಳ ಅರುಣೋದಯ ವಿಶೇಷ ಮಕ್ಕಳ ಶಾಲೆಗೆ 3 ಸಿಂಟೆಕ್ಸ್ ನೀರಿನ ಟ್ಯಾಂಕ್ ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಕಾರ್ಕಳ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಸೋಮಶೇಖರ್ , ಜೆಸಿಐ ಕಾರ್ಕಳದ ಅಧ್ಯಕ್ಷ ಜೆಸಿ ಅವಿನಾಶ್ ಶೆಟ್ಟಿ, ಕಾರ್ಕಳ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಜೆ ಸಿ ಐ ವಲಯ 15ರ ಕಾರ್ಯಕ್ರಮ ವಿಭಾಗದ ನಿರ್ದೇಶಕರಾದ ವಿಘ್ನೇಶ್ ಪ್ರಸಾದ್, ಜೆ ಸಿ ಐ ಕಾರ್ಕಳದ ಉಪಾಧ್ಯಕ್ಷ ರಿಜ್ವಾನ್ ಖಾನ್, ಜೆ ಸಿ ಐ ಕಾರ್ಕಳ ಕಾರ್ಯದರ್ಶಿ ಸುಶಾಂತ್ ಶೆಟ್ಟಿ,
ಜೆಸಿಐ ಕಾರ್ಕಳದ ಕೋಶಾಧಿಕಾರಿ ಮಂಜುನಾಥ್ ರಾವ್ ಪೂರ್ವಾಧ್ಯಕ್ಷ ರೋಷನ್ ಡಿ ಮಲ್ಲೋ ಹಾಗೂ ಅರುಣೋದಯ ವಿಶೇಷ ಶಾಲೆಯ ಮುಖ್ಯ ಶಿಕ್ಷಕರಾದ ಹನುಮಂತಪ್ಪ, ಅರುಣೋದಯ ವಿಶೇಷ ಶಾಲೆ ಶಿಕ್ಷಕರಾದ ಗಿರೀಶ್ ಅಶ್ರೀತ್, ಕಾಂತಮ್ಮ, ಪ್ರತಿಮಾ ಹಾಗೂ ಸಿಬ್ಬಂದಿವರ್ಗ, ವಿಶೇಷ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here