ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸ್ವಾಗತ: ಟಿವಿಎಸ್ ಮೋಟಾರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು

0
21

ಮಂಗಳೂರು: ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ (ಭಾರತದಲ್ಲೇ ಉತ್ಪಾದಿಸಿ) ಉಪಕ್ರಮಕ್ಕೆ  ಬ್ರಿಟನ್ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದವು ಪೂರಕವಾಗಲಿದೆ ಎಂದು ಟಿವಿಎಸ್ ಮೋಟಾರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು ಬಣ್ಣಿಸಿದ್ದಾರೆ.
ಈ ಒಪ್ಪಂದದಿಂದಾಗಿ ಭಾರತದ ತಯಾರಿಕೆ ಮತ್ತು ವಿನ್ಯಾಸಗಳಿಗೆ ಉತ್ತೇಜನ ಸಿಗಲಿದೆ. ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವಹಿವಾಟು ದ್ವಿಗುಣಗೊಂಡು 120 ಶತಕೋಟಿ ಡಾಲರ್ ಆಗಲಿದೆ. ಇದು ಪ್ರಧಾನಿಯವರ ‘ವಿಕಸಿತ ಭಾರತ’ ದೂರದೃಷ್ಟಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬ್ರಿಟನ್ನಿನ ಬಹು ಜನಪ್ರಿಯ ಬ್ರ್ಯಾಂಡ್ ಸ್ವಾಧೀನಪಡಿಸಿಕೊಂಡ ನಂತರ ಟಿವಿಎಸ್, ಇಂಗ್ಲೆಂಡ್‍ನಲ್ಲಿ ನಾರ್ಟನ್ ಮೋಟರ್ ಸೈಕಲ್‍ಗಳ ಹೊಸ ಶ್ರೇಣಿಯ ತಯಾರಿಕೆ ಪ್ರಾರಂಭಿಸಲು ಸಿದ್ಧತೆಗಳನ್ನು ನಡೆಸುತ್ತಿರುವ ಮಹತ್ವದ ಸಂದರ್ಭದಲ್ಲಿಯೇ ಈ ಒಪ್ಪಂದವು ಕಾರ್ಯಗತಗೊಂಡಿದೆ ಎಂದು ಅವರು ಹೇಳಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಮುನ್ನೋಟ ಮತ್ತು ಭಾರತವನ್ನು ಜಾಗತಿಕ ತಯಾರಿಕೆ ಹಾಗೂ ವಿನ್ಯಾಸದ ಶಕ್ತಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಅವರ ಅಚಲ ಬದ್ಧತೆಯಿಂದ ನಾವು  ತುಂಬಾ ಪ್ರೇರಿತರಾಗಿದ್ದೇವೆ. ಭಾರತದ ಕಂಪನಿಗಳಿಗೆ ‘ಭಾರತದಲ್ಲಿಯೇ ತಯಾರಿಸಿ’ ಉಪಕ್ರಮವನ್ನು ಇಡೀ ಜಗತ್ತಿಗೆ ಕೊಂಡೊಯ್ಯಲು ಹೊಸ ಗಡಿಗಳನ್ನು ತೆರೆಯಲಿದೆ ಎಂದು ವಿವರಿಸಿದ್ದಾರೆ. ಟಿವಿಎಸ್ ಕಂಪನಿ ದೇಶದ ನಾವೀನ್ಯತೆ ಮತ್ತು ಎಂಜಿನಿಯರಿಂಗ್ ಶ್ರೇಷ್ಠತೆಯನ್ನು ದೊಡ್ಡ ವೇದಿಕೆಯಲ್ಲಿ ಪ್ರದರ್ಶಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here