ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ವಿಟ್ಲ ಇದರ ಸ್ವಸಹಾಯ ಸಂಘಗಳ ಒಕ್ಕೂಟ ಬಾಲ್ತಿಲ ಹಾಗೂ ಶ್ರೀ ಮಣಿಕಂಠ ಯುವಶಕ್ತಿ ಕುಧ್ರೆಬೆಟ್ಟು ಆಶ್ರಯದಲ್ಲಿ ” ಬಲೆ ಕೇಸರ್ ಗೊಬ್ಬುಗ” ಕೆಸರುಗದ್ದೆ ಕ್ರೀಡಾಕೂಟ ಕಲ್ಲಡ್ಕ ಸಮೀಪದ ಕುದ್ರಬೆಟ್ಟು ಬೊಲ್ಪೊಡಿ ಗದ್ದೆಯಲ್ಲಿ ರವಿವಾರ ಜರಗಿತು.
ಕ್ರೀಡಾಕೂಟದ ಗದ್ದೆಗೆ ಹಾಲು, ಸಿಯಾಲಾ ಎರೆದು ಪುಷ್ಪ ಸಮರ್ಪಿಸುವ ಮೂಲಕ ಮಾಜಿ ಶಾಸಕರಾದ ರುಕ್ಮಯ ಪೂಜಾರಿ ಚಾಲನೆ ನೀಡಿ, ಅಂದಿನ ಕೃಷಿ ಪರಂಪರೆಯ ನೆನಪುಗಳನ್ನು ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ತಂತ್ರಜ್ಞಾನದಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡಿರುವ ವಿದ್ಯಾರ್ಥಿ ಜಗನ್ ಹಾಗೂ ಅಂಗನವಾಡಿ ಸಹಾಯಕಿ ಜಯಂತಿ ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ ,ಕಲ್ಲಡ್ಕ ವಲಯ ಮೇಲ್ವಿಚಾರಕ ಸುಕರಾಜ್ , ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ ಜಿನ್ನಪ್ಪ ಎಲ್ತಿಮಾರ್, ಶ್ರೀ ಮಣಿಕಂಠ ಯುವಶಕ್ತಿ ಅಧ್ಯಕ್ಷರ ಲೋಕಾನಂದ ಎಲ್ತಿಮಾರ್, ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ, ಬಾಲ್ತಿಲ ಒಕ್ಕೂಟದ ಅಧ್ಯಕ್ಷೆ ಉಮಾವತಿ, ಸೇವಾ ಪ್ರತಿನಿಧಿ ವಿದ್ಯಾ, ಗ್ರಾಮ ಸಹಾಯಕರಾದ ದಿವಾಕರ ಚೆಂಡೆ, ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ತಂಡದ ಅಧ್ಯಕ್ಷ ಮಾಧವ ಸಾಲಿಯಾನ್, ಬಿಜೆಪಿ ಎಸ್ ಸಿ ಮೋರ್ಚ ಬಂಟ್ವಾಳ ಅಧ್ಯಕ್ಷ ರಮೇಶ ಕುಧ್ರೆ ಬೆಟ್ಟು, ಬೂತ್ ಸಮಿತಿಯ ಅಧ್ಯಕ್ಷ ಕೇಶವ ಎಲ್ತಿಮಾರ್, ಗ್ರಾಮ ಪಂಚಾಯತ್ ಸದಸ್ಯರಾದ ಲತೀಶ್ ಕುರ್ಮನ್,ಆರೋಗ್ಯ ಇಲಾಖೆ ಲೋಕೇಶ್ ಮಪಾಲ, ಕಲಾವಿದರಾದ ರವಿ ಸಿಂಗೇರಿ, ಮಣಿಕಂಠ ಮಾತೃಶಕ್ತಿ ಅಧ್ಯಕ್ಷರಾದ ಸುಜಾತಾ ಎಂ, ಕೇಶವ ಕುಧ್ರೆಬೆಟ್ಟು, ಧನರಾಜ್ ಶೆಟ್ಟಿ ಎಲ್ತಿಮಾರ್, ಸುಂದರ ಸಾಲಿಯಾನ್, ರವಿ ಬೈಲು, ಚಿನ್ನಾ ಮೈರಾ, ಕ್ರೀಡಾಕೂಟದ ಗದ್ದೆ ಮಾಲಕರಾದ ನೀಲಾಕ್ಷಿ, ಧರ್ಮಪ್ಪ ಪೂಜಾರಿ, ಉಪಸ್ಥಿತರಿದರು.
ಭೋಜರಾಜ್ ಸ್ವಾಗತಿಸಿ ಸುನೀಲ್ ಕುಮಾರ್ ಮತ್ತು ಸಂತೋಷ ಕುಮಾರ್ ಬೊಲ್ಪೊಡಿ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟ ಕಾರ್ಯಕ್ರಮದ ನಂತರ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಕೆಸರು ಗದ್ದೆಯಲ್ಲಿ ವಿವಿಧ ಸ್ಪರ್ಧೆಗಳಾದ ಓಟ, ಹಾಲೆ ಎಳೆತ, ಹಗ್ಗ ಜಗ್ಗಾಟ, ಕೋತ್ತಲಿಂಗೆ ಬ್ಯಾಟ್ ಕ್ರಿಕೆಟ್, ಮೊದಲಾದ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಯಲ್ಲಿ ಊರವರ ಜೊತೆ ಆಂಧ್ರ ಪ್ರದೇಶ ಮಧ್ಯಪ್ರದೇಶ ಉತ್ತರ ಪ್ರದೇಶ ರಾಜಸ್ಥಾನ ಮೂಲದ ಯುವಕರು ಸೇರಿಕೊಂಡು ಕೆಸರಲ್ಲಿ ಆಟ ಆಡಿದರು.
ಕಲ್ಲಡ್ಕ ಶೌರ್ಯ ವೀಪತು ನಿರ್ವಹಣಾ ಘಟಕ ವತಿಯಿಂದ ಪರಿಸರವನ್ನು ಉಳಿಸುವ ದೃಷ್ಟಿಯಿಂದ ಕ್ರೀಡಾ ಕೂಟದಲ್ಲಿ ವಿಜೇತರಿಗೆ ಬಹುಮಾನವಾಗಿ ಹಣ್ಣಿನ ಗಿಡ ಗಳನ್ನು ವಿತರಿಸಲಾಯಿತು.