ಸ್ವರಾಜ್ಯ ಮೈದಾನ ಯಾರಿಗೆ ಸೇರಿದ್ದು????

0
115

ಉಸ್ತುವಾರಿ ನೋಡಿಕೊಳ್ಳಬೇಕಾದವರು ಯಾರು?????

ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆಯ ಸ್ವರಾಜ್ಯ ಮೈದಾನ ಒಂದು ರೀತಿಯಲ್ಲಿ ದೇಶದ ರಕ್ಷಣೆಗಾಗಿ ದುಡಿದ ಸೈನಿಕರ ಹೆಸರಲ್ಲಿ ರಕ್ಷಿಸಲ್ಪಟ್ಟ ಪ್ರದೇಶ. ಹಿಂದೆ ಇದನ್ನು ಮಿಲಿಟರಿ ಗ್ರೌಂಡ್ ಎಂಬುದಾಗಿಯೂ ಪರಿಗಣಿಸಲಾಗಿತ್ತು. ಆದರೆ ಇತ್ತೀಚೆಗೆ ಆಳ್ವಾಸ್ ಫೌಂಡೇಶನ್ ಅವರು ಇದನ್ನು ಕ್ರೀಡಾ ಚಟುವಟಿಕೆಗಳಿಗೆ ಉಪಯೋಗಿಸುತ್ತಿರುವುದರಿಂದಾಗಿ ಇದು ಕ್ರೀಡಾ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿರುತ್ತದೆ. ಇದರ ಒಂದು ಬದಿಯಲ್ಲಿ ಸರಕಾರದ ಕ್ರೀಡಾ ಇಲಾಖೆಯವರೇ ಹಲವಾರು ಕ್ರೀಡಾಕೂಟಗಳು, ಕ್ರೀಡಾ ಯೋಜನೆಗಳು, ಕ್ರೀಡಾ ತರಬೇತಿಗಳನ್ನು ಹಮ್ಮಿಕೊಳ್ಳುತ್ತಿದ್ದು ಯುವಜನ ಮತ್ತು ಕ್ರೀಡಾ ಇಲಾಖೆಯ ಸೂಪರ್ದಿಯಲ್ಲಿ ಇರುತ್ತದೆ.
ಆದರೆ ಪ್ರಸ್ತುತ ಮಾರುಕಟ್ಟೆಯ ಹಿಂಬದಿಯ ಪ್ರದೇಶ ಬಹಳ ಕೆಟ್ಟ ರೀತಿಯಲ್ಲಿ ದೃಶ್ಯದಲ್ಲಿ ಗಮನಿಸುವಂತೆ ತನ್ನ ಪ್ರತಿಷ್ಠೆಯನ್ನು ಕಳೆದುಕೊಂಡು ವ್ಯಥೆ ಪಡುತ್ತಿದೆ. ಇಲ್ಲಿರುವ ವಸ್ತುಗಳನ್ನು ಗಮನಿಸಿದರೆ ಇಲ್ಲಿ ರಾತ್ರೆಯ ಹೊತ್ತು ಎಲ್ಲವೂ ನಡೆಯುವ ಬಗ್ಗೆ ಗುಮಾನಿ ಇದೆ. ರಾತ್ರೆ ಗಸ್ತು ತಿರುಗುವ ಪೊಲೀಸರು ಈ ಬಗ್ಗೆ ಸೂಕ್ತ ಎಚ್ಚರವಹಿಸಬೇಕಾದ ಅಗತ್ಯವಿದೆ.

ಬಹಳಷ್ಟು ಕೇಳಿಬರುತ್ತಿರುವ ಲಭ್ಯವಾಗಿರುವ ಗಾಂಜಾ, ಚರಸ್ಗಳ ಅಡ್ಡೆಯಂತೆಯೂ ಕಂಡುಬರುತ್ತಿದೆ. ಸೌಹಾರ್ದ ಫ್ರೆಂಡ್ಸ್ ನವರು ಇಲ್ಲಿ ಸಂಜೆಯ ಹೊತ್ತು ಕಾಲ ಕಳೆಯುವ ವ್ಯಕ್ತಿಗಳಿಗೆ ಕುಡಿಯುವ ನೀರಿನ, ಕುಳಿತುಕೊಳ್ಳಲು ಬೇಕಾದಂತಹ ವ್ಯವಸ್ಥೆಗಳನ್ನು ಮಾಡಿದ್ದರು. ಆದರೆ ಆ ವ್ಯವಸ್ಥೆಗಳು ಕೂಡ ತನ್ನ ರೂಪವನ್ನು ಕಳೆದುಕೊಂಡು ಅನಾಥ ಸ್ಥಿತಿಯಲ್ಲಿ ಅರೆಬರೆ ಉಳಿದುಕೊಂಡಿದೆ. ಇಲ್ಲಿಯ ಸ್ವಚ್ಛತೆಯಂತೂ ದೇವರಿಗೆ ಪ್ರೀತಿ. ಒಟ್ಟಾರೆ ಸ್ವಚ್ಛತೆಯು ಇಲ್ಲ, ವ್ಯವಸ್ಥೆಯು ಇಲ್ಲದ ಅನಾಥ ಸ್ಥಿತಿಯಲ್ಲಿ ಈ ಪ್ರದೇಶ ಉಳಿದುಕೊಂಡಿರುವುದಕ್ಕೆ ಯಾರು ಕಾರಣರು????? ಪುರಸಭೆಯೇ? ಸೈನಿಕರ ಇಲಾಖೆಯೇ? ಸರ್ಕಾರದ ಯುವಜನ ಕ್ರೀಡಾ ಇಲಾಖೆಯೇ??

LEAVE A REPLY

Please enter your comment!
Please enter your name here