ತೋಟತ್ತಾಡಿ ಸರಕಾರಿ ದ್ವಿ-ಭಾಷ ಮಾಧ್ಯಮಗಳ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಮತ್ತು ಗ್ರಂಥಾಲಯ ಕೊಠಡಿಯ ಉದ್ಘಾಟನೆಯ ಸಮಾರಂಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿ ಕೊಠಡಿ ಉದ್ಘಾಟನೆಯನ್ನು ನಡೆಸಿದ್ದರು ಇದು ಸರಕಾರಿ ಕಾರ್ಯಕ್ರಮಗಳ ಶಿಷ್ಟಾಚಾರವಾಗಿದ್ದು ಒಬ್ಬ ರಾಜಕೀಯ ಪಕ್ಷದವರಾಗಿದ್ದು ಉದ್ಘಾಟಿಸಿದ್ದನ್ನು ಸಾರ್ವಜನಿಕರು ವ್ಯಾಪಕ ಖಂಡಿಸಿದ್ದು. ಅದಲ್ಲದೆ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಆಡಳಿತ ಬಂದಾಗ ಸರಕಾರಿ ಕಾರ್ಯಕ್ರಮವನ್ನು ಬಿಜೆಪಿ ಕಾರ್ಯಕರ್ತರೇ ನೆರವೇರಿಸುತ್ತೇವೆಂದು ಬಹಿರಂಗ ಸವಾಲು ಹಾಕಿದ್ದಾರೆ .


