ತೆಲಂಗಾಣ : ಫೆಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಮನೆ ಬಿಟ್ಟು ಹೋಗಿದ್ದ ಪತ್ನಿಯನ್ನ ಪತ್ತೆ ಹಚ್ಚಿದ ಪತಿ, ಪೊಲೀಸ್ ವಾಹನದಲ್ಲಿ ಬರುತ್ತಿರುವಾಗಲೇ ಆಕೆಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಜಹೀರಾಬಾದ್‌ನಲ್ಲಿ ಸಂಭವಿಸಿದೆ.
ಝರಾಸಂಗಂ ಮಂಡಲದ ತುಂಬನಪಲ್ಲಿ ನಿವಾಸಿ ಸಿದ್ಧಾರೆಡ್ಡಿ (35) ಮತ್ತು ಕವಿತಾ (29) ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಜಹೀರಾಬಾದ್‌ನಲ್ಲಿ ವಾಸವಿದ್ದ ಸಿದ್ಧಾರೆಡ್ಡಿ ಪಾನಿಪುರಿ ವ್ಯಾಪಾರ ಮಾಡುತ್ತಿದ್ದರೆ, ಕವಿತಾ ಮನೆಯಲ್ಲೇ ಟೈಲರಿಂಗ್ ಕೆಲಸ ಮಾಡುತ್ತಿದ್ದರು. ಕೆಲವು ಸಮಯದ ಹಿಂದೆ ಕವಿತಾಗೆ ಫೇಸ್‌ಬುಕ್ ಮೂಲಕ ಪವನ್ ಕುಮಾರ್ ರೆಡ್ಡಿ ಎಂಬಾತನ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿತ್ತು.
ಮಾರ್ಚ್ 27 ರಂದು ಕವಿತಾ ತನ್ನ ಇಬ್ಬರು ಮಕ್ಕಳನ್ನು ಮತ್ತು ಪತಿಯನ್ನು ಬಿಟ್ಟು ಪವನ್ ಕುಮಾರ್ ರೆಡ್ಡಿಯೊಂದಿಗೆ ಪರಾರಿಯಾಗಿದ್ದಳು. ಪತ್ನಿ ಕಾಣೆಯಾಗಿರುವ ಬಗ್ಗೆ ಸಿದ್ಧಾರೆಡ್ಡಿ ಮಾರ್ಚ್ 30 ರಂದು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಕವಿತಾ ತನ್ನ ಪ್ರೇಮಿಯೊಂದಿಗೆ ಜಡ್ಚರ್ಲಾದಲ್ಲಿ ಇರುವುದು ತಿಳಿದುಬಂದಿದೆ.
ಪೊಲೀಸರೊಂದಿಗೆ ಜಡ್ಚರ್ಲಾಗೆ ತೆರಳಿದ ಸಿದ್ಧಾರೆಡ್ಡಿ, ಪತ್ನಿಯನ್ನ ಮನೆಗೆ ಬರುವಂತೆ ವಿನಂತಿಸಿದ್ದಾರೆ. ಪೊಲೀಸರು ಕೂಡ ಕವಿತಾಗೆ ಬುದ್ಧಿವಾದ ಹೇಳಿ ಪತಿಯೊಂದಿಗೆ ಹೋಗುವಂತೆ ಕೌನ್ಸೆಲಿಂಗ್ ನಡೆಸಿದ್ದಾರೆ. ಆದರೆ, ಕವಿತಾ ಮಾತ್ರ ಪತಿಯೊಂದಿಗೆ ಹೋಗಲು ಸಾರಾಸಗಟಾಗಿ ನಿರಾಕರಿಸಿದ್ದಾಳೆ. ಈ ವೇಳೆ ದಂಪತಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಜಡ್ಚರ್ಲಾದಿಂದ ಜಹೀರಾಬಾದ್‌ಗೆ ಕಾರಿನಲ್ಲಿ ಹಿಂತಿರುಗುವಾಗ ಈ ಭೀಕರ ಘಟನೆ ನಡೆದಿದೆ. ಮೊದಲೇ ಯೋಜಿಸಿದ್ದ ಸಿದ್ಧಾರೆಡ್ಡಿ, ದಾರಿಯಲ್ಲಿ ಟೀ ಕುಡಿಯಲು ಇಳಿದಾಗ ರಹಸ್ಯವಾಗಿ ಚಾಕುವೊಂದನ್ನು ಖರೀದಿಸಿ ಜೇಬಿನಲ್ಲಿಟ್ಟುಕೊಂಡಿದ್ದ. ಕಾರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಖದೀರ್ ಅವರು ಇಬ್ಬರ ನಡುವೆ ಕುಳಿತು ಗಲಾಟೆ ತಡೆಯಲು ಪ್ರಯತ್ನಿಸಿದರೂ ಕವಿತಾ ಒಪ್ಪಿರಲಿಲ್ಲ. ಕವಿತಾ ತನ್ನ ಪತಿ ಮತ್ತು ಪ್ರೇಮಿಯ ನಡುವೆಯೇ ಕುಳಿತಿದ್ದಳು. ಜಹೀರಾಬಾದ್ ತಲುಪುವ ಕೆಲವೇ ಕ್ಷಣಗಳ ಮೊದಲು, ಸಿದ್ಧಾರೆಡ್ಡಿ ಹಠಾತ್ತನೆ ಚಾಕು ತೆಗೆದು ಪತ್ನಿಯ ಕುತ್ತಿಗೆಗೆ ಇರಿದಿದ್ದಾನೆ.
ತಕ್ಷಣವೇ ಕಾನ್ಸ್ಟೇಬಲ್ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಸಹ, ಕವಿತಾ ಅಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಸದ್ಯ ಪೊಲೀಸರು ಸಿದ್ಧಾರೆಡ್ಡಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

