ಕಾರ್ಕಳ: ತಾಲೂಕಿನ ನಿಟ್ಟೆ ಗ್ರಾಮದ ಎಡೋಳಿ ನಿವಾಸಿ ಪ್ರಸಾದ್ (ಚುನ್ನಿ) ಕಳೆದ ಆರೇಲು ತಿಂಗಳುಗಳಿಂದ ಜಾಂಡೀಸ್ ಖಾಯಿಲೆಯಿಂದ ಬಳಲುತ್ತಿದ್ದು, ಮಂಗಳೂರಿನ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈದ್ಯರು ಹೇಳಿದ ಪ್ರಕಾರ ಅವರ ಮೂತ್ರಪಿಂಡ ಮತ್ತು ಅವರ್ ವೈಫಲ್ಯವಾಗಿರುವುದಾಗಿಯೂ ಹಾಗೂ ಅದರ ಚಿಕಿತ್ಸೆಯ ಖರ್ಚಿಗೆ 35 ಲಕ್ಷವಾಗಬಹುದು ಎಂದು ಅಂದಾಜಿಸಿರುತ್ತಾರೆ. ಕುಟುಂಬದ ಮೂಲ ಆಧಾರವಾಗಿದ್ದು ಇದೀಗ ಪ್ರಸಾದ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ. ಈಗಾಗಲೇ ಸಾಲ-ಸೂಲ ಮಾಡಿ ಲಕ್ಷಾಂತರ ರೂ.ಯನ್ನು ಚಿಕಿತ್ಸೆಗಾಗಿ ವ್ಯಯಿಸಿದ್ದಾರೆ. ಕುಟುಂಬ ನಿರ್ವಹಣೆಯೇ ಅಸಾಧ್ಯವಾಗಿರುವಾಗ ಪತಿಯ ಚಿಕಿತ್ಸೆಗೆ ಇಷ್ಟೊಂದು ಹಣ ಹೊಂದಾಣಿಕೆ ಮಾಡುವುದು ಕುಟುಂಬಕ್ಕೆ ಅಸಾಧ್ಯವಾಗಿದೆ. ಪ್ರಸಾದ್ ಅವರ ಅನಾರೋಗ್ಯದಿಂದ ಪತ್ನಿ ಹಾಗೂ ಎರಡುವರೆ ವರ್ಷದ ಮಗುವಿಗೆ ಆಸರೆ ಇಲ್ಲದಂತಾಗಿದೆ. ಇದೀಗ ಕುಟುಂಬ ಪ್ರಸಾದ್ ಅವರ ಜೀವ ಉಳಿಸಲು ದಾನಿಗಳ ಮೊರೆ ಹೋಗಿದ್ದಾರೆ. ಪ್ರಸಾದ್ ಅವರ ಚಿಕಿತ್ಸೆಗೆ ನೆರವಾಗುವವರು ಅವರ ಪತ್ನಿ ಸವಿತಾರವರ ಉಳಿತಾಯ ಖಾತೆ ಸಂಖ್ಯೆ Account Number: 0635101068603 (Mobile Number: +919686324358) Ifse Code: CNRB0010136 ಗೆ ಹಣ ಕಳುಹಿಸಿಕೊಡುವಂತೆ ವಿನಂತಿಸಿಕೊಂಡಿದ್ದಾರೆ.
Account Holder Name: SAVITHA