ಸಾಮಾಜಿಕ ಕ್ಷೇತ್ರದಲ್ಲಿ ಸ್ತ್ರೀಯರ ಸೇವೆ ಅಗಣ್ಯ – ಹೆಚ್. ಎಸ್. ಪ್ರತಿಮಾ ಹಾಸನ್

0
97

ಇತ್ತೀಚಿಗೆ ಹಾಸನ ನಗರದ ಎಂ. ಜಿ. ರಸ್ತೆಯಲ್ಲಿ ಇರುವ ಜನಾಶ ಕಚೇರಿಯಲ್ಲಿ   ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಸಮಿತಿ ವತಿಯಿಂದ   ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಸಂಸ್ಥಾಪಕರಾದಂತಹ  ಎಚ್ ಎಲ್  ಯಮುನಾರವನ್ನು ಸನ್ಮಾನಿಸಲಾಯಿತು. ಸಾಹಿತಿ, ಶಿಕ್ಷಕಿ, ಸಮಾಜ ಸೇವಕಿ ಹಾಗೂ ಪತ್ರಕರ್ತರು,ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಸಂಸ್ಥಾಪಕರಾದ  ಹಾಗೂ ಕರ್ನಾಟಕ ಮಾನವ ಹಕ್ಕುಗಳ ಜನಸೇವಾ ಸಮಿತಿಯ ಜಿಲ್ಲಾಧ್ಯಕ್ಷರಾದ  ಹೆಚ್. ಎಸ್. ಪ್ರತಿಮಾ ಹಾಸನ್ ರವರು ತಮ್ಮ ಕೃತಿ “ನೀಲ ಪ್ರತಿಮಾನ ಮಂಜು” ಕೃತಿ  ನೀಡಿ ಗೌರವಿಸಿ ಸನ್ಮಾನಿಸಿದರು ನಂತರ ಜಿಲ್ಲಾಧ್ಯಕ್ಷರು ಆದ ರವಿ ಕಿರಣ್ ರವರು ಸನ್ಮಾನಿಸಿ ಗೌರವಿಸಿದರು. ಇಂದಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದಂತಹ ಚಾಪನ್ನು ಮೂಡಿಸುತ್ತಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲೂ ಸಹ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ  ಕಾರ್ಯವನ್ನು ಮಾಡುತ್ತಿರುವ ಹೆಣ್ಣು ಮಕ್ಕಳು  ಪ್ರತಿಯೊಬ್ಬರಿಗೂ ಪ್ರೇರಣದಾಯಕರಾಗಿದ್ದಾರೆ. ಸಂಸಾರಿಕ ಜೀವನ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಾ ಸಾಗುತ್ತಿದ್ದಾರೆ.

ಸಾಮಾಜಿಕ ಕ್ಷೇತ್ರದಲ್ಲಿ ಸ್ತ್ರೀಯರ ಸೇವೆ  ಅಗಣ್ಯವಾದದ್ದು ಅಂತಹ ಹೆಣ್ಣು ಮಕ್ಕಳಲ್ಲಿ  ಒಬ್ಬರಾದ  ಯಮುನಾ ರವರು  ತಮ್ಮದೇ ಆದ ಸೇವೆಯಿಂದ ಹೆಸರುವಾಸಿಯಾಗಿದ್ದು ಇವರನ್ನು ಸನ್ಮಾನಿಸುತ್ತಿರುವುದು ನಮ್ಮ ಸಂಸ್ಥೆಗೆ ಸಂತಸವನ್ನು ತಂದಿದೆ ನಮ್ಮನ್ನು ಪ್ರೋತ್ಸಾಹ ನೀಡುತ್ತಾ  ಸಾಗುತ್ತಿರುವುದು  ಹೆಣ್ಣು ಮಕ್ಕಳ ಕಾರ್ಯ ಪ್ರವೃತ್ತಿಗೆ  ಬೆಂಬಲ ನೀಡಿದಂತಾಗುತ್ತಿದೆ. ಇವರು ಒಕ್ಕಲಿಗರ ಸಮುದಾಯದ  ಏಳಿಗೆಗಾಗಿ ಹೆಚ್ಚಿನದಾಗಿ ಕಾರ್ಯನಿರ್ವಹಿಸುತ್ತಿದ್ದು. ಹಲವಾರು ಪ್ರತಿಭಾನ್ವಿತರನು ಗುರುತಿಸಿ  ಪ್ರಶಸ್ತಿಗಳನ್ನು ನೀಡುತ್ತಾ ಪ್ರೋತ್ಸಾಹಿಸುತ್ತಿದ್ದಾರೆ.ಎರಡು ಬಾರಿ ನನ್ನನ್ನು ಗುರುತಿಸಿ  ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹಿಸಿರುವ ಇವರು ನಿಜಕ್ಕೂ ಹಲವು ಹೆಣ್ಣು ಮಕ್ಕಳಿಗೆ ಮಾರ್ಗದರ್ಶಿಗಳು ಇಂದಿನ ದಿನಮಾನಗಳಲ್ಲಿ ಹಲವರು  ನಮ್ಮ ಬೆಳವಣಿಗೆ ಸಹಿಸದೆ ಅವಕಾಶ ವಂಚನೆ ಮಾಡುತ್ತ  ನಾನು ಬೆಳೆಸಿದ್ದು ನಾನು ಬೆಳೆಸಿದ್ದು ಎಂದು ಹೇಳಿಕೊಳ್ಳುವವರ ಮದ್ಯೆ ಏನು ಹೇಳದೆ ಹಲವರಿಗೆ ಪ್ರೋತ್ಸಾಹ  ನೀಡುತ್ತಿರುವುದು ಸಂತಸದ ಸಂಗತಿ.  ಆದರೆ ನಮ್ಮ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ  ಗೌರವಿಸುತ್ತಿರುವ ಇಂಥವರು  ಹಲವರಿಗೆ ಮಾರ್ಗದರ್ಶನವಾಗಿದ್ದಾರೆ ಎಂದು ಹೆಚ್. ಎಸ್. ಪ್ರತಿಮಾ ಹಾಸನ್ ತಿಳಿಸಿದರು. ನಂತರ ಏನೇ ಆದರೂ ಒಳ್ಳೆಯದಾದರೆ ಸಾಕು  ಮಾಡುವ ಕಾರ್ಯ ದೇವರು ಮೆಚ್ಚಿವಂತಿದ್ದರೆ ಸಾಕು ಎಂದು ಯಮುನಾ ರವರು ತಿಳಿಸಿದರು. ನಂತರ ಕಾರ್ಯಕ್ರಮ ದಲ್ಲಿ  ಮಾನಸ, ಕುಮಾರ್, ಇನ್ನೂ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here