ಭಾರತೀಯ ದರ್ಶನಗಳಲ್ಲಿ ದೇವಾಲಯಗಳ ಪ್ರಾಮುಖ್ಯತೆ’ ಕಾರ್ಯಾಗಾರ — ಅಧ್ಯಾತ್ಮ ಉನ್ನತಿಯೇ ಮನುಷ್ಯನ ಪ್ರಧಾನ ಗುರಿ: ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

0
82

ಉಡುಪಿ: ಹಿಂದಿನ ಕಾಲದಲ್ಲಿ ಜನಜೀವನ ದೇವಸ್ಥಾನ ಕೇಂದ್ರಿತವಾಗಿತ್ತು. ಬದುಕು ಆಧ್ಮಾತ್ಮ ಕೇಂದ್ರವಾಗಿತ್ತು. ಅಧ್ಮಾತ್ಮಿಕ ವಿದ್ಯೆ ಇಲ್ಲದೆ ವ್ಯಕ್ತಿತ್ವ ಪರಿಪೂರ್ಣವಾಗುವುದಿಲ್ಲ. ಲೌಕಿಕ ಗುರಿಗಳು ತಾತ್ಕಾಲಿಕವಾಗಿದ್ದು, ಅಧ್ಮಾತ್ಮಿಕ ಉನ್ನತಿಯೇ ಮನುಷ್ಯನ ಪ್ರಧಾನ ಉದ್ದೇಶವಾಗಿರಬೇಕು ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಕೃಷ್ಣ ಮಠ ಹಾಗೂ ಪರ್ಯಾಯ ಪುತ್ತಿಗೆ ಮಠ, ನಿಟ್ಟೆ ವಿವಿ ಆಶ್ರಯದಲ್ಲಿ ಭಾರತೀಯ ದರ್ಶನಗಳಲ್ಲಿ ದೇವಾಲಯಗಳ ಪ್ರಾಮುಖ್ಯತೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪುರಾತತ್ವ ಶಾಸ್ತ್ರಜ್ಞ ಕೆ.ಕೆ. ಮಹಮ್ಮದ್​, ಅಯೋಧ್ಯೆ ಉತ್ಖನನದಲ್ಲಿ ದೇವಸ್ಥಾನಗಳ 90 ಕಂಬಗಳು, ಹಿಂದೂ ದೇವತೆಗಳ ವಿಗ್ರಹಗಳು, ಶಿಖರ, ಪ್ರಣಾಳ ಪತ್ತೆಯಾಗಿದ್ದವು. ಮುಖ್ಯವಾಗಿ ವಿಷ್ಣುಹರಿ ಶಿಲಾಲಕದಲ್ಲಿ ವಾಲಿ ಮತ್ತು ದಶಾನನನ್ನು ಕೊಂದ ದೇವರ ಬಗ್ಗೆ ಉಲ್ಲೇಖಿಸಲ್ಪಟ್ಟ ಅಂಶಗಳು ಸುಪ್ರೀಂ ಕೋರ್ಟ್​ ತೀರ್ಪಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

ಬರಹಗಾರ ಸುರೇಂದ್ರನಾಥ್​ ಬೊಪ್ಪರಾಜು ಮಾತನಾಡಿ, ದೇವಸ್ಥಾನಗಳ ಸುತ್ತಮುತ್ತಲಿನ ಪರಿಸರದ ಆರ್ಥಿಕ ಚಟುವಟಿಕೆಯ ಕೇಂದ್ರಸ್ಥಾನಗಳಾಗಿದ್ದವು. ಹಿಂದಿನ ಕಾಲದಲ್ಲಿ ದೇವಸ್ಥಾನಗಳಿಗೆ 7 ಬಗೆಯ ಕಲ್ಲುಗಳನ್ನು ಬಳಕೆ ಮಾಡಿರುವುದು ಸಂಶೋಧನೆ ಮೂಲಕ ತಿಳಿದು ಬಂದಿದೆ ಎಂದರು.

ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ನಿಟ್ಟೆ ವಿವಿ ಕುಲಪತಿ ಡಾ. ಎಂ.ಎಸ್​. ಮೂಡಿತ್ತಾಯ, ಹಿರಿಯ ಸಂಶೋಧಕ ಡಾ. ಶ್ರೀಪತಿ ತಂತ್ರಿ, ದಿವಾನ್​ ನಾಗರಾಜ ಆಚಾರ್ಯ, ವಿದ್ವಾನ್​ ಪ್ರಸನ್ನ ಆಚಾರ್ಯ, ರಮೇಶ್​ ಭಟ್​ ಮೊದಲಾದವರು ಉಪಸ್ಥಿತರಿದ್ದರು. ನಿಟ್ಟೆ ವಿವಿ ಐಕೆಎಸ್​ ವಿಭಾಗದ ಸಂಚಾಲಕ ಡಾ. ಸುಧೀರ್​ ರಾವ್​ ಸ್ವಾಗತಿಸಿ, ಡಾ. ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here